ಬೆಂಗಳೂರು: MSIL ಮಳಿಗೆಗಳನ್ನು ಹರಾಜು ಮೂಲಕ ಮಾರಾಟ ಮಾಡುವ ಯಾವುದೇ ನಿರ್ಧಾರ ಆಗಿಲ್ಲ ಎಂದು ಅಬಕಾರಿ ಸಚಿವ ತಿಮ್ಮಾಪುರ್ (Thimmapur) ತಿಳಿಸಿದರು.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ಸುನೀಲ್ ವಲ್ಯಾಪುರ್ ಪ್ರಶ್ನಿಸಿದ ಅವರು, MSIL ಮಳಿಗೆಗಳನ್ನು ಹರಾಜು ಮೂಲಕ ಮಾಡಬಾರದು. ಇದು ಸರ್ಕಾರದ ಸಂಸ್ಥೆ ಆಗಿದೆ. ಇದನ್ನ ಹರಾಜು ಹಾಕಿದರೆ ಸರ್ಕಾರಕ್ಕೆ ನಷ್ಟ ಆಗುತ್ತದೆ. 463 ಮಳಿಗೆಗಳು ಇವೆ. ಇವುಗಳನ್ನು ಹರಾಜು ಮಾಡಿ ಮಾರಾಟ ಮಾಡುವ ಚಿಂತನೆ ಸರ್ಕಾರ ಮಾಡುತ್ತಿದೆ. ಸರ್ಕಾರ ಹರಾಜು ಪ್ರಕ್ರಿಯೆ ಕೈ ಬಿಡಬೇಕು ಎಂದರು. ಇದನ್ನೂ ಓದಿ: ಮಾತಾ ಮಾಣಿಕೇಶ್ವರಿ ದೇವಸ್ಥಾನವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ – ಹೆಚ್.ಕೆ.ಪಾಟೀಲ್
ಸಚಿವ ತಿಮ್ಮಾಪುರ್ ಅವರು ಉತ್ತರಿಸಿ, MSIL ಮಳಿಗೆಯನ್ನ ಹರಾಜು ಹಾಕುವ ಯಾವುದೇ ನಿರ್ಧಾರ ಮಾಡಿಲ್ಲ. ಈ ಬಗ್ಗೆ ಚರ್ಚೆ ಆಗಿದೆ ಅಷ್ಟೇ. ಹರಾಜು ಹಾಕಲು ಯಾವುದೇ ಕಾನೂನು ತೊಡಕಾಗುವುದಿಲ್ಲ. ಹರಾಜು ಹಾಕುವ ನಿರ್ಧಾರ ಸಹ ಮಾಡಿಲ್ಲ. ಅಂತಹ ನಿರ್ಧಾರ ಮಾಡಿದರೆ ತಿಳಿಸುತ್ತೇವೆ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಅಂತರಾಷ್ಟ್ರೀಯ ಮಹಿಳಾ ದಿನದಿಂದ ಮಹಿಳಾ ಗ್ರಾಮಸಭೆಗಳಿಗೆ ಚಾಲನೆ: ಪ್ರಿಯಾಂಕ್ ಖರ್ಗೆ