ಹಾವೇರಿ: ಲಾಕ್‍ಡೌನ್ ಮದ್ಯ ಮಾರಾಟಕ್ಕೆ ಪೂರ್ಣ ವಿರಾಮ ಬಿದ್ದಿದೆ. ಮಂಗಳವಾರ ಮೊದಲ ಹಂತ ಲಾಕ್‍ಡೌನ್ ಅಂತ್ಯವಾಗಲಿದ್ದು, ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗುತ್ತೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಒಂದು ವೇಳೆ ಮದ್ಯ ಮಾರಾಟಕ್ಕೆ ವಿನಾಯ್ತಿ ಸಿಕ್ಕರೆ ಅಂಗಡಿಗಳ ಮುಂದೆ ಉಂಟಾಗುವ ನೂಕುನುಗ್ಗಲು ತಡೆಯಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
Advertisement
ಹಾವೇರಿ ಜಿಲ್ಲೆ ರಟ್ಟೀಹಳ್ಳಿ ಪಟ್ಟಣ ಸೇರಿದಂತೆ ಜಿಲ್ಲೆಯ ಕೆಲವೆಡೆ ಎಂಎಸ್‍ಐಎಲ್ ಮದ್ಯದ ಅಂಗಡಿಗಳ ಮುಂದೆ ನೂಕು ನುಗ್ಗಲು ತಡೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಲಾಕ್‍ಡೌನ್ ನಂತರ ಬಂದ್ ಆಗಿ ನಾಳೆ ಬಾಗಿಲು ತೆರೆದ್ರೆ ಹೆಚ್ಚಿನ ಜನರು ಮುಗಿಬೀಳ್ತಾರೆ ಅಂತಾ ಅಂಗಡಿಗಳ ಮುಂದೆ ಜನದಟ್ಟಣೆ ನಿಯಂತ್ರಣಕ್ಕೆ ಕಟ್ಟಿಗೆ ಕಟ್ಟಲಾಗಿದೆ. ಹಾಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಅವಶ್ಯವಾಗಿದ್ದರಿಂದ ಅಂಗಡಿ ಮಾಲೀಕರು ಬ್ಯಾರಿಕೇಡ್ ಹಾಕುತ್ತಿದ್ದಾರೆ.
Advertisement
Advertisement
ಮದ್ಯಪ್ರಿಯರು ಸಾಲಾಗಿ ನಿಂತು ಮದ್ಯ ಖರೀದಿಗೆ ಅನುಕೂಲ ಆಗುವಂತೆ ವ್ಯವಸ್ಥೆ ಮಾಡಲಾಗಿದೆ. ಇದರ ಜೊತೆಗೆ ಕೊರೊನಾ ಸೋಂಕು ಹರಡೋ ಭೀತಿ ಇರೋದ್ರಿಂದ ಅಂಗಡಿಗಳ ಮುಂದೆ ಸಾಮಾಜಿಕ ಅಂತರದ ಬಾಕ್ಸ್ ಹಾಕಲಾಗಿದೆ. ಮದ್ಯದ ಅಂಗಡಿಗಳನ್ನ ತೆರೆಯೋ ಬಗ್ಗೆ ಸರ್ಕಾರದಿಂದ ಈವರೆಗೂ ಸ್ಪಷ್ಟ ನಿರ್ದೇಶನ ಬಂದಿಲ್ಲವಾದ್ರೂ ರಟ್ಟೀಹಳ್ಳಿ, ಬ್ಯಾಡಗಿ ಸೇರಿದಂತೆ ಜಿಲ್ಲೆಯ ಕೆಲವೆಡೆ ಎಂಎಸ್‍ಐಎಲ್ ಮದ್ಯದ ಅಂಗಡಿಗಳ ಮುಂದೆ ತೆರೆಯಲು ಸಿದ್ಧತೆ ನಡೆದಿದೆ.