– ಮೊದಲ ಮದುವೆ ಮುಚ್ಚಿಟ್ಟು ಯುವತಿ ಜೊತೆ ಜಾಲಿಟ್ರಿಪ್
ಬೆಂಗಳೂರು: ಎಂ.ಎಸ್.ಪಾಳ್ಯದಿಂದ (MS Palya) ಯಲಹಂಕ (Yalahanka) ನಲ್ಲಿ ಟಿಕೆಟ್ ಕೊಡುತ್ತಲೇ ಯುವತಿಯನ್ನು ಕಂಡಕ್ಟರ್ ಪಟಾಯಿಸಿದ್ದು, ಮದುವೆಯಾದ ಮೂರೇ ತಿಂಗಳಿಗೆ ಕಂಡಕ್ಟರ್‌ನ ಮುಖ ಬಯಲಾಗಿರುವ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ.
Advertisement
Advertisement
ಎಂ.ಎಸ್.ಪಾಳ್ಯ ಬಿಎಂಟಿಸಿ ಡಿಪೋ ಕಂಡಕ್ಟರ್ ಕಮ್ ಡ್ರೈವರ್ ಆಗಿ ಮಂಜುನಾಥ್ ಕೆಲಸ ಮಾಡುತ್ತಿದ್ದರು. ಪ್ರತಿನಿತ್ಯ ಎಂ.ಎಸ್.ಪಾಳ್ಯ ಟು ಯಲಹಂಕ ಬಿಎಂಟಿಸಿ ಬಸ್‌ನಲ್ಲಿ ಯುವತಿ ಪ್ರಯಾಣಿಸುತ್ತಿದ್ದಳು. ಈ ವೇಳೆ ಟಿಕೆಟ್ ಕೊಡುತ್ತಲೇ ಯುವತಿಯನ್ನು ಪರಿಚಯ ಮಾಡ್ಕೊಂಡು ಮಂಜುನಾಥ್ ನಂಬರ್ ಪಡೆದಿದ್ದ. ಕಂಡಕ್ಟರ್ ತನಗೆ ಮದುವೆಯಾಗಿ, ಇಬ್ಬರು ಮಕ್ಕಳಿರುವುದನ್ನು ಮುಚ್ಚಿಟ್ಟು ಯುವತಿಯನ್ನ ಪ್ರೀತಿಸುವುದಾಗಿ ಹೇಳಿದ್ದ. ಈ ವೇಳೆ ಯುವತಿ ಕೂಡ ತನಗೆ ಮದುವೆಯಾಗಿ ಡಿವೋರ್ಸ್ ಆಗಿತ್ತು ಎಂದು ತಿಳಿಸಿದ್ದಳು. ಈ ವೇಳೆ ಕಂಡಕ್ಟರ್, ‘ಬಾಳು ಕೊಡ್ತೀನಿ.. ನೀನಂದ್ರೆ ತುಂಬಾ ಇಷ್ಟ’ ಎಂದು ಹೇಳಿ ಹಿಂದೆಬಿದ್ದಿದ್ದ. ಈತನ ಪ್ರೀತಿಯನ್ನು ನೋಡಿ ಯುವತಿ ಮದುವೆಗೂ ಒಪ್ಪಿಗೆ ಸೂಚಿಸಿದ್ದಳು. ಪ್ರೀತಿ ಹೆಸರಲ್ಲಿ ಯುವತಿ ಜೊತೆ ಜಾಲಿಟ್ರಿಪ್ ಮಾಡಿದ್ದು, ಟ್ರಿಪ್ ಮುಗಿಯುತ್ತಿದ್ದಂತೆ ಮನೆಯವರ ವಿರೋಧದ ಮೇಲೆ ದೇವಾಲಯದಲ್ಲಿ ಕಂಡಕ್ಟರ್ ಜೊತೆ ಯುವತಿ ಮದುವೆಯಾಗಿದ್ದಳು.ಇದನ್ನೂ ಓದಿ: 6 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ – ಆರೋಪಿ ಅರೆಸ್ಟ್
Advertisement
Advertisement
ಮದುವೆಯಾದ ಮೂರೇ ತಿಂಗಳಿಗೆ ಕಂಡಕ್ಟರ್‌ನ ಮತ್ತೊಂದು ಮುಖ ಬಯಲಾಗಿದ್ದು, ನೆಲಮಂಗಲದಲ್ಲಿ ಇನ್ನೊಂದು ಕುಟುಂಬ ಇರುವ ಬಗ್ಗೆ ತಿಳಿದು ಯುವತಿ ಕಂಗಾಲಾಗಿದ್ದಾಳೆ. ಇನ್ನೂ ಕುಟುಂಬ ಇರುವ ವಿಚಾರ ಗೊತ್ತಾಗುವ ವೇಳೆ ಯುವತಿ ಗರ್ಭಿಣಿಯಾಗಿದ್ದಾರೆ. ಇತ್ತ ಕಂಡಕ್ಟರ್, ನನಗೆ ಯುವತಿ ಬೇಡ ಎಂದು ಹೇಳುತ್ತಿದ್ದಾನೆ.
ಸದ್ಯ ಯುವತಿ ಬೆಂಗಳೂರು ಪೊಲೀಸ್ ಕಮಿಷನರ್, ಈಶಾನ್ಯ ಡಿಸಿಪಿ, ಮಹಿಳಾ ಸಹಾಯವಾಣಿಯಲ್ಲಿ ನ್ಯಾಯ ಕೊಡಿಸುವಂತೆ ದೂರು ದಾಖಲಿಸಿದ್ದು, ನನ್ನ ಗಂಡ ಬೇಕು, ಹೊಟ್ಟೆಯಲ್ಲಿರುವ ನನ್ನ ಮಗುವಿಗೆ ತಂದೆ ಬೇಕು ಎಂದು ಹಠ ಹಿಡಿದಿದ್ದಾಳೆ.ಇದನ್ನೂ ಓದಿ: ಬಾಗಲಕೋಟೆಯ ಕರ್ತವ್ಯನಿರತ ಯೋಧ ರಾಜಸ್ಥಾನದಲ್ಲಿ ಹೃದಯಾಘಾತದಿಂದ ಸಾವು