ನವದೆಹಲಿ: ತಮಗೆ ಜೀವ ಬೆದರಿಕೆ ಇರುವ ಕಾರಣ ಶಸ್ತ್ರಾಸ್ತ್ರ ಹೊಂದಲು ಅನುಮತಿ ನೀಡಬೇಕೆಂದು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಪತ್ನಿ ಸಾಕ್ಷಿ ಸಿಂಗ್ ರಾವತ್ ಜಾರ್ಖಂಡ್ ಡೆಪ್ಯುಟಿ ಕಮಿಶನರ್ ರವರಿಗೆ ಮನವಿ ಮಾಡಿದ್ದಾರೆ.
ಅವರು ಲೈಸೆನ್ಸ್‍ಗೆ ಮನವಿ ಸಲ್ಲಿಸಿದ್ದು ತಾವು ಮನೆಯಲ್ಲಿ ಏಕಾಂಗಿಯಾಗಿರುವಾಗ ತಮಗೆ ಪ್ರಾಣಭಯ ಇದೆ. ಅಲ್ಲದೇ ಏಕಾಂಗಿಯಾಗಿ ಹೊರಗಡೆ ಹೋದಾಗಲೂ ಸಹ ನನಗೆ ಅಪಾಯ ಸಂಭವಿಸುವ ಸಾಧ್ಯತೆಗಳಿವೆ. ಹಾಗಾಗಿ ನನಗೆ ಪಿಸ್ತೂಲ್ ಅಥವಾ 0.32 ರಿವಾಲ್ವಾರ್ ಇಟ್ಟುಕೊಳ್ಳಲು ಅನುಮತಿ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
2008ರಲ್ಲಿ ಧೋನಿ ಅವರು 9 ಎಂಎಂ ಪಿಸ್ತೂಲ್ ಖರೀದಿಸಲು ಅನುಮತಿ ಕೇಳಿದ್ದರು. ಜಾರ್ಖಂಡ್ ಸರ್ಕಾರದ ಶಿಫಾರಸಿನ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯ ಅನುಮತಿ ನೀಡಿತ್ತು. ಇದಾದ ಬಳಿಕ ಗೃಹ ಸಚಿವಾಲಯ ಕೆಲ ಸ್ಪಷ್ಟನೆ ಕೇಳಿದ ಕಾರಣ ಲೆಸೆನ್ಸ್ ನೀಡಲು ವಿಳಂಬವಾಗಿತ್ತು.