ಹ್ಯಾಮಿಲ್ಟನ್: ನ್ಯೂಜಿಲೆಂಡ್ ವಿರುದ್ಧದ 3ನೇ ಟಿ20 ಪಂದ್ಯದ ವೇಳೆ ಅಭಿಮಾನಿಯೊಬ್ಬ ಭದ್ರತೆಯನ್ನು ಮೀರಿ ಮೈದಾನ ಪ್ರವೇಶಿಸಿ ಧೋನಿ ಕಾಲಿಗೆ ಬಿದ್ದಿದ್ದಾರೆ. ಆದರೆ ಈ ವೇಳೆ ಅಭಿಮಾನಿಯ ಕೈಯಲ್ಲಿದ್ದ ತ್ರಿವರ್ಣ ಧ್ವಜ ನೆಲಕ್ಕೆ ತಾಗುವ ಮುನ್ನವೇ ಧೋನಿ ಎಚ್ಚೆತ್ತು ಧ್ವಜ ತೆಗೆದುಕೊಂಡಿದ್ದಾರೆ.
ನ್ಯೂಜಿಲೆಂಡ್ ತಂಡ ಬ್ಯಾಟಿಂಗ್ ಆಡುತ್ತಿದ್ದ ವೇಳೆ ಘಟನೆ ನಡೆದಿದ್ದು, ಅಭಿಮಾನಿಯಿಂದ ಪಡೆದ ಬಾವುಟವನ್ನು ಧೋನಿ ಭದ್ರತಾ ಸಿಬ್ಬಂದಿಗೆ ನೀಡಿದ ಬಳಿಕ ಆಟ ಮುಂದುವರಿಸಿದ್ದರು. ಧೋನಿ ಅವರು ತ್ರಿವರ್ಣ ಧ್ವಜಕ್ಕೆ ನೀಡಿದ ಗೌರವಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
https://twitter.com/Vidyadhar_R/status/1094545390857203712?
ಈ ಹಿಂದೆಯೂ ಹಲವು ಪಂದ್ಯಗಳ ವೇಳೆ ಅಭಿಮಾನಿಗಳು ಭದ್ರತ ಪಡೆಗಳ ಕಣ್ತಪಿಸಿ ಬಂದು ಧೋನಿಯ ಕಾಲಿಗೆ ಬಿದ್ದಿದ್ದನ್ನ ಇಲ್ಲಿ ನೆನೆಯ ಬಹುದಾಗಿದೆ. ಆದರೆ ಪಂದ್ಯದಲ್ಲಿ ತಮ್ಮ ವಿಕೆಟ್ ಕೀಪಿಂಗ್ ಮೂಲಕ ಗಮನ ಸೆಳೆದ ಧೋನಿ ಬ್ಯಾಟಿಂಗ್ ನಲ್ಲಿ ನಿರಾಸೆ ಮೂಡಿಸಿದರು. ಪಂದ್ಯದಲ್ಲಿ 4 ರನ್‍ಗಳ ರೋಚಕ ಸೋಲುಂಡ ಟೀಂ ಇಂಡಿಯಾ ಸರಣಿ ಗೆಲುವು ಪಡೆಯಲು ವಿಫಲವಾಗಿತ್ತು. ಈ ಮೂಲಕ ಬರೋಬ್ಬರಿ 30 ತಿಂಗಳ ಬಳಿಕ ಟಿ20 ಟೂರ್ನಿಯನ್ನು ಕೈಚೆಲ್ಲಿತು.
https://twitter.com/madhavanand22/status/1094571840268161025?
https://twitter.com/Iam_Jaimsd/status/1094550157889130496?
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv