ಮುಂಬೈ: ಫಿಫಾ ವಿಶ್ವಕಪ್ (Fifa World Cup) ಗೆದ್ದ ಫುಟ್‍ಬಾಲ್ ಲೆಜೆಂಡ್ ಲಿಯೋನೆಲ್ ಮೆಸ್ಸಿ (Lionel Messi) ತಮ್ಮ ಜೆರ್ಸಿಯೊಂದಕ್ಕೆ (Signed Argentina Jersey) ಸೈನ್ ಮಾಡಿ ಟೀಂ ಇಂಡಿಯಾದ ಮಾಜಿ ನಾಯಕ ಧೋನಿ (M.S Dhoni) ಅವರ ಪುತ್ರಿ ಝೀವಾಗೆ ಗಿಫ್ಟ್ ನೀಡಿದ್ದಾರೆ.
7ರ ಹರೆಯದ ಪುಟ್ಟ ಹುಡುಗಿ ಝೀವಾ ತಂದೆ ಧೋನಿಯಂತೆ ಕ್ರೀಡೆಯಲ್ಲಿ ಹೆಚ್ಚು ಆಸಕ್ತಿ ಹೊಂದಿದ ಹುಡುಗಿ. ಫಿಫಾ ವಿಶ್ವಕಪ್ ವೇಳೆ ಫುಟ್‍ಬಾಲ್ ನೋಡುತ್ತಿದ್ದ ಝೀವಾ ಮೆಸ್ಸಿಯ ಆಟ ನೋಡಿದ್ದರು. ಮೆಸ್ಸಿ ವಿಶ್ವಕಪ್ ಗೆದ್ದಾಗ ಸಂಭ್ರಮಿಸಿದ್ದರು. ಇದೀಗ ಮೆಸ್ಸಿ ತಮ್ಮ ಜೆರ್ಸಿಯೊಂದಕ್ಕೆ ಹಸ್ತಾಕ್ಷರ ಹಾಕಿ ಇದು ಝೀವಾಗೆ ಎಂದು ಭಾರತಕ್ಕೆ ಕಳುಹಿಸಿ ಕೊಟ್ಟಿದ್ದಾರೆ. ಇದನ್ನೂ ಓದಿ: ಟಿ20ಗೆ ಪಾಂಡ್ಯ ನಾಯಕ, ಸೂರ್ಯ ಉಪನಾಯಕ – ಟೀಂ ಇಂಡಿಯಾದಲ್ಲಿ ಪಂತ್‍ಗಿಲ್ಲ ಸ್ಥಾನ
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿರುವ ಝೀವಾ, ಮೆಸ್ಸಿ ಹಸ್ತಾಕ್ಷರವಿರುವ ಜೆರ್ಸಿ ತೊಟ್ಟು ಫೋಟೋಗೆ ಪೋಸ್ ನೀಡಿದ್ದಾರೆ. ಧೋನಿ ಕ್ರಿಕೆಟರ್ ಆಗುವ ಮುನ್ನ ಫುಟ್‍ಬಾಲ್‍ನಲ್ಲಿ ಗೋಲ್ ಕೀಪರ್ ಆಗಿದ್ದರು. ಅಂದಿನಿಂದ ಇಂದಿನವರೆಗೆ ಧೋನಿಗೆ ಕ್ರಿಕೆಟ್ ಜೊತೆ ಫುಟ್‍ಬಾಲ್‍ನಲ್ಲೂ ಹೆಚ್ಚು ಒಲವಿದೆ. ಧೋನಿ ಮೆಸ್ಸಿ ಹಾಗೂ ಮ್ಯಾಚೆಂಸ್ಟರ್ ಯುನೈಟೆಡ್ ಕ್ಲಬ್‍ನ ಅಭಿಮಾನಿ ಹಾಗಾಗಿ ಮೆಸ್ಸಿ ವಿಶ್ವಕಪ್ ಗೆದ್ದ ಬಳಿಕ ಜೆರ್ಸಿಗೆ ಸೈನ್ ಮಾಡಿ ಕಳುಹಿಸಿಕೊಟ್ಟಿದ್ದಾರೆ. ಇದನ್ನೂ ಓದಿ: ಟಿ20ಯಿಂದ ಟಿ10ನತ್ತ ಕ್ರಿಕೆಟ್
View this post on Instagram
ಲಿಯೋನೆಲ್ ಮೆಸ್ಸಿಯ ಫಿಫಾ ವಿಶ್ವಕಪ್ ಗೆಲ್ಲುವ ಹಲವು ವರ್ಷಗಳ ಕನಸು 2022ರಲ್ಲಿ ನನಸಾಗಿದೆ. ಕತಾರ್‌ನಲ್ಲಿ ನಡೆದ ಫೈನಲ್‍ನಲ್ಲಿ ಫ್ರಾನ್ಸ್ ವಿರುದ್ಧ ಗೆದ್ದು ಮೆಸ್ಸಿ ಫಿಫಾ ವಿಶ್ವಕಪ್‍ಗೆ ಮುತ್ತಿಕ್ಕಿದ್ದರು.