ಮುಂಬೈ: ಭಾರತದ ಮಾಜಿ ಕ್ರಿಕೆಟ್ ನಾಯಕ ಎಂ.ಎಸ್.ಧೋನಿ 2011 ರ ವಿಶ್ವಕಪ್ ಫೈನಲ್-ಗೆಲುವಿನ ಸಿಕ್ಸರ್ ಬಾರಿಸಲು ಬಳಸಿದ ಬ್ಯಾಟ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಕ್ರಿಕೆಟ್ ಬ್ಯಾಟ್ ಎಂಬ ದಾಖಲೆಯನ್ನು ಸೃಷ್ಟಿಸಿದೆ.
Advertisement
2011ರ ವಿಶ್ವಕಪ್ ಫೈನಲ್‍ನಲ್ಲಿ ಭಾರತದಕ್ಕೆ ಧೋನಿ ಅವರು ಸಿಕ್ಸರ್ ಬಾರಿಸಲು ಮೂಲಕ ಗೆಲುವು ತಂದುಕೊಟ್ಟಿದ್ದರು. ಈ ಬ್ಯಾಟ್‍ಗಾಗಿ ಅಭಿಮಾನಿಗಳು ಬೇಡಿಕೆಯನ್ನು ಇಟ್ಟಿದ್ದರು. ಇದನ್ನು ಅತೀ ಹೆಚ್ಚು ಬೆಲೆಗೆ ಪಡೆದ ಧೋನಿ ಅಭಿಮಾನಿಗಳು ಇತಿಹಾಸವನ್ನೆ ಸೃಷ್ಟಿಸಿದ್ದಾರೆ. ಇದನ್ನೂ ಓದಿ: 3 ತಿಂಗಳ ನಂತರ ಕಾಳಿಚರಣ್ ಮಹಾರಾಜ್‍ಗೆ ಸಿಕ್ತು ಜಾಮೀನು ಭಾಗ್ಯ
Advertisement
Advertisement
ವಿಶ್ವಕಪ್ ಫೈನಲ್ ಆಗಿ ಮೂರು ತಿಂಗಳ ನಂತರ ಲಂಡನ್‍ನಲ್ಲಿ ನಡೆದ ಚಾರಿಟಿ ಡಿನ್ನರ್‍ನಲ್ಲಿ ಧೋನಿಯ ಬ್ಯಾಟ್ ಅನ್ನು ಮುಂಬೈ ಮೂಲದ ಬ್ರೋಕರೇಜ್ ಸಂಸ್ಥೆ ಆರ್‌ಕೆ ಗ್ಲೋಬಲ್ 100,000 ಡಾಲರ್ (75 ಲಕ್ಷ)ಗೆ ಖರೀದಿಸಿತು. ಈ ಪ್ರಕ್ರಿಯೆಯಲ್ಲಿ ಬಂದ ಹಣ ಧೋನಿ ಪತ್ನಿಯ ಚಾರಿಟಬಲ್ ಸಂಸ್ಥೆಗೆ ಹೋಗಿದೆ.