ರಾಂಚಿ: ಕ್ರಿಕೆಟ್‍ನಿಂದ ವಿಶ್ರಾಂತಿ ಪಡೆದಿರುವ ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್.ಧೋನಿ ಕೆಲ ದಿನಗಳ ಹಿಂದೆಯಷ್ಟೇ ಕಬಡ್ಡಿ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡಿದ್ದರು. ಈ ನಡುವೆ ಟೆನ್ನಿಸ್‍ನಲ್ಲೂ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದು, ಜೆಎಸ್‍ಸಿಎ ಅಂತರಾಷ್ಟ್ರೀಯ ಕ್ರಿಕೆಟ್ ಕ್ಲಬ್ ಟೆನ್ನಿಸ್ ಚಾಂಪಿಯನ್ ಶಿಪ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
https://www.instagram.com/p/Bqz2_P0glhx/
Advertisement
37 ವರ್ಷದ ಧೋನಿ ಸ್ಥಳೀಯ ರಾಂಚಿ ಟೆನ್ನಿಸ್ ಆಟಗಾರ ಸುಮಿತ್ ಕುಮಾರ್ ಅವರೊಂದಿಗೆ ಡಬಲ್ಸ್ ಚಾಂಪಿಯನ್‍ಶಿಪ್ ನಲ್ಲಿ ಭಾಗಹಿಸಿ ಫೈನಲ್ ಪಂದ್ಯದಲ್ಲಿ 6-3, 6-3 ನೇರ ಸೆಟ್ ಮೂಲಕ ಜಯ ಗಳಿಸಿದ್ದಾರೆ. ಧೋನಿ ಕ್ರಿಕೆಟ್ ಮಾತ್ರವಲ್ಲದೇ ಫುಟ್ಬಾಲ್, ಕಬಡ್ಡಿ ಆಟದಲ್ಲೂ ಪಾಲ್ಗೊಂಡಿದ್ದರು. ಈ ಹಿಂದೆ ರಾಂಚಿಯ ಫುಟ್ಬಾಲ್ ಕ್ಲಬ್ ಜೊತೆಗೆ ಧೋನಿ ಭಾಗವಹಿಸಿದ್ದರು.
Advertisement
ವೆಸ್ಟ್ ಇಂಡೀಸ್ ಸೇರಿದಂತೆ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಿಂದ ಧೋನಿ ಅವರನ್ನು ಕೈಬಿಡಲಾಗಿತ್ತು. ಕಳಪೆ ಬ್ಯಾಟಿಂಗ್ ಫಾರ್ಮ್ ಸಮಸ್ಯೆ ಎದುರಿಸುತ್ತಿರುವ ಧೋನಿ 2019ರ ವಿಶ್ವಕಪ್ ಟೂರ್ನಿಯ ತಂಡದಲ್ಲಿ ಸ್ಥಾನ ನೀಡುವ ಕುರಿತು ಚರ್ಚೆ ನಡೆಯುತ್ತಿದೆ. ಧೋನಿ ಕಳೆದ ವರ್ಷ ತಮ್ಮ ಬ್ಯಾಟ್‍ನಿಂದ ಅರ್ಧ ಶತಕ ಸಿಡಿದ್ದರು.
Advertisement
ಟೀಂ ಇಂಡಿಯಾ ಸದ್ಯ ಆಸ್ಟ್ರೇಲಿಯಾ ವಿರುದ್ಧದ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾಗವಹಿಸುತ್ತಿದ್ದು, ಆ ಬಳಿಕ ಏಕದಿನ ಸರಣಿ ಆಡಲಿದೆ.
Advertisement
Game. Set. Match.#Thala crowned with championship in the Country Cricket Club Tennis Tournament. #WhistlePodu #Yellove ???????? pic.twitter.com/XqBQfNPGGb
— Chennai Super Kings (@ChennaiIPL) November 30, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv