ಸಿಡ್ನಿ: ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯವನ್ನು ಭಾರತ ಸೋತಿದ್ದರೂ, ಈಗ ಧೋನಿ ಔಟ್ ಎಂದು ನೀಡಿದ ತೀರ್ಪಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಜೋರಾಗಿದೆ.
ಧೋನಿ 51 ರನ್ (96 ಎಸೆತ, 3 ಬೌಂಡರಿ, 1 ಸಿಕ್ಸರ್) ಗಳಿಸಿದ್ದಾಗ ಬೆಹೆಂಡ್ರೋರ್ಫ್ ಬೌಲಿಂಗ್ ನಲ್ಲಿ ಎಲ್‍ಬಿಯಾದರು. 33ನೇ ಓವರಿನ ಎರಡನೇ ಎಸೆತ ಧೋನಿ ಪ್ಯಾಡ್ ಗೆ ಬಡಿದ ಕೂಡಲೇ ಬೆಹೆಂಡ್ರೋಫ್ ಎಲ್‍ಬಿ ಮನವಿ ಮಾಡಿದರು. ಮನವಿಯನ್ನು ಪುರಸ್ಕರಿಸಿದ ಅಂಪೈರ್ ಕೂಡಲೇ ಕೈಯನ್ನು ಎತ್ತಿ ಔಟ್ ಎಂದು ತೀರ್ಪು ನೀಡಿದರು.
Advertisement
Advertisement
ಅಂಪೈರ್ ತೀರ್ಪು ಮರುಪರಿಶೀಲಿಸುವ ಯಾವುದೇ ಅವಕಾಶಗಳು ಭಾರತ ತಂಡಕ್ಕೆ ಇರಲಿಲ್ಲ. ಯಾಕೆಂದರೆ ಅಂಬಾಟಿ ರಯುಡು ಏಕೈಕ ಅವಕಾಶವನ್ನು ನಾಲ್ಕನೇಯ ಓವರ್ ನಲ್ಲಿ ಬಳಸಿಕೊಂಡಿದ್ದರು. ಹೀಗಾಗಿ ಧೋನಿ ಪೆವಿಲಿಯನ್ ಕಡೆಗೆ ಹಜ್ಜೆ ಹಾಕಿದರು. ಆದರೆ ವಿಡಿಯೋ ರಿಪ್ಲೇಯಲ್ಲಿ ನಾಟೌಟ್ ಆಗಿರುವುದು ಸ್ಪಷ್ಟವಾಗಿತ್ತು.
Advertisement
4 ರನ್ ಗಳಿಗೆ 3 ವಿಕೆಟ್ ಕಳೆದು ಸಂಕಷ್ಟದಲ್ಲಿದ್ದಾಗ ರೋಹಿತ್ ಶರ್ಮಾ ಮತ್ತು ಧೋನಿ 5ನೇ ವಿಕೆಟ್ ಗೆ 172 ಎಸೆತಗಳಲ್ಲಿ 137 ರನ್ ಗಳ ಜೊತೆಯಾಟವಾಡಿ ಆರಂಭಿಕ ಸಂಕಷ್ಟದಿಂದ ಪಾರು ಮಾಡಿದ್ದರು. ಧೋನಿ ಔಟಾಗುವ ವೇಳೆ ಭಾರತಕ್ಕೆ 107 ಎಸೆತಗಳಲ್ಲಿ 148 ರನ್ ಗಳಿಸುವ ಅನಿವಾರ್ಯತೆಯಿತ್ತು. ಇದನ್ನೂ ಓದಿ: ಸೌರವ್ ಗಂಗೂಲಿ, ದಿಲ್‍ಶಾನ್ ದಾಖಲೆ ಸರಿಗಟ್ಟಿದ ರೋಹಿತ್ ಶರ್ಮಾ
Advertisement
ಜನ ಏನು ಹೇಳ್ತಿದ್ದಾರೆ?
ಒಂದು ವೇಳೆ ಧೋನಿ ಔಟ್ ಆಗದೇ ಇದ್ದರೆ ಅವರು ತಂಡವನ್ನು ಗೆಲ್ಲಿಸುವ ಸಾಮರ್ಥ್ಯ ಹೊಂದಿದ್ದರು. ಔಟ್ ನೀಡಿದ ಪರಿಣಾಮ ತಂಡಕ್ಕೆ ಭಾರೀ ಹಿನ್ನಡೆ ಆಯ್ತು ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ಧೋನಿ ನಿಧಾನಗತಿಯ ಆಟದಿಂದಲೇ ಟೀಂ ಇಂಡಿಯಾಗೆ ಸೋಲಾಗಿದೆ. ವಿಶ್ವಕಪ್ ನಲ್ಲಿ ಧೋನಿ ಬದಲು ಬೇರೆಯವರಿಗೆ ಅವಕಾಶ ನೀಡಬೇಕು. ಹಿರಿಯ ಆಟಗಾರನೆಂಬ ಕಾರಣಕ್ಕೆ ಉತ್ತಮವಾಗಿ ಆಡುತ್ತಿರುವ ಯುವ ಆಟಗಾರರನ್ನು ಕಡೆಗಣಿಸುವುದು ಸರಿಯಲ್ಲ ಎಂದು ಹೇಳುತ್ತಿದ್ದಾರೆ.
ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯ ಜನವರಿ 15 ರಂದು ಅಡಿಲೇಡ್ ನಲ್ಲಿ ನಡೆಯಲಿದ್ದರೆ, ಕೊನೆಯ ಪಂದ್ಯ ಜನವರಿ 18 ರಂದು ಮೆಲ್ಬರ್ನ್ ನಲ್ಲಿ ನಡೆಯಲಿದೆ.
ಧೋನಿ ಟೀಂ ಇಂಡಿಯಾದ ವಿಶ್ವಕಪ್ ನಲ್ಲಿ ತಂಡದಲ್ಲಿ ಆಡಬೇಕೇ? ನಿಮ್ಮ ಅಭಿಪ್ರಾಯ ಏನು ಕಮೆಂಟ್ ಮಾಡಿ ತಿಳಿಸಿ.
India are out of reviews and Dhoni has to go… #CloseMatters#AUSvIND | @GilletteAU pic.twitter.com/WRYVQPxwIM
— cricket.com.au (@cricketcomau) January 12, 2019
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv