ನವದೆಹಲಿ: ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿಗೆ ಸೋಮವಾರ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಪದ್ಮ ಪ್ರಶಸ್ತಿ ನೀಡಿ ಗೌರವಿಸಿದರು. ಈ ವೇಳೆ ಧೋನಿ ಪ್ರಶಸ್ತಿಯನ್ನು ಪಡೆಯಲು ವೇದಿಕೆಗೆ ಏರಿದ ರೀತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಕ್ರಿಕೆಟಿಗ ಧೋನಿಗೆ ಸೇನೆಯ ಮೇಲೆ ಎಲ್ಲಿಲ್ಲದ ಗೌರವ. ಸೇನೆಯ ಗೌರವ ಸದಸ್ಯರೂ ಆಗಿರುವ ಧೋನಿ ಪದ್ಮ ಭೂಷಣ ಪ್ರಶಸ್ತಿ ಸ್ವೀಕರಿಸಲು ಯೋಧರಂತೆ ಸೇನಾ ಸಮವಸ್ತ್ರದಲ್ಲಿ ತೆರಳಿದ್ರು, ಅಲ್ಲೇ ಯೋಧರಂತರೆಯೇ ನಡೆಯುತ್ತಾ ಪ್ರಶಸ್ತಿ ಸ್ವೀಕರಿಸಿದರು.
Advertisement
Advertisement
ಈ ವೇಳೆ ಪ್ರೇಕ್ಷಕರ ಸಾಲಿನಲ್ಲಿ ಕುಳಿತಿದ್ದ ಪತ್ನಿ ಸಾಕ್ಷಿ ಸಿಂಗ್ ಪತಿಯ ನಡಿಗೆ ನೋಡಿ ಹರ್ಷದಿಂದ ಚಪ್ಪಾಳೆ ತಟ್ಟಿ ಸಂಭ್ರಮಿಸಿದ್ದು ವಿಶೇಷವಾಗಿ ಕಂಡು ಬಂತು. ಧೋನಿಯವರ ಈ ನಡೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಮೆಚ್ಚುಗೆಗೆ ಕಾರಣವಾಗಿದೆ.
Advertisement
ವಿಶ್ವಕಪ್ ಗೆದ್ದ ದಿನವೇ ಪ್ರಶಸ್ತಿ: ವಿಶೇಷವೆಂದರೆ 2011 ರಲ್ಲಿ ಇದೇ ದಿನದಂದು ಎಂಎಸ್ ಧೋನಿ ನೇತೃತ್ವದ ಭಾರತ ಕ್ರಿಕೆಟ್ ತಂಡ ಮುಂಬೈ ನಲ್ಲಿ ವಿಶ್ವಕಪ್ ಗೆದ್ದಿತ್ತು. ಶ್ರೀಲಂಕಾ ವಿರುದ್ಧ ನಡೆದ ಈ ಪಂದ್ಯದಲ್ಲಿ ಇನ್ನೂ 10 ಎಸೆತ ಇರುವಂತೆಯೇ ಧೋನಿ ಸಿಕ್ಸರ್ ಸಿಡಿಸಿ ಪಂದ್ಯವನ್ನು ಗೆಲ್ಲಿಸಿಕೊಟ್ಟಿದ್ದರು. ಔಟಾಗದೇ 91 ರನ್(79 ಎಸೆತ, 5 ಬೌಂಡರಿ, 2 ಸಿಕ್ಸರ್) ಹೊಡೆಯುವ ಮೂಲಕ ಧೋನಿ ಈ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.