ಜಾರ್ಖಂಡ್ ತಂಡದ ಯಶಸ್ಸು- ಬಿಸಿಸಿಐ ಪ್ಲ್ಯಾನ್ ಧೋನಿ ಟೀಂ ಇಂಡಿಯಾ ಮೆಂಟರ್

Public TV
2 Min Read
MS DHONI 1

ರಾಂಚಿ: ಟಿ20 ವಿಶ್ವಕಪ್‍ಗೆ ಭಾರತ ತಂಡ ಪ್ರಕಟಗೊಂಡಿದೆ. ವಿಶೇಷವಾಗಿ ತಂಡದ ಮಾರ್ಗದರ್ಶಕರಾಗಿ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ಬಿಸಿಸಿಐ ನೇಮಕ ಮಾಡಿದೆ. ಬಿಸಿಸಿಐ ಈ ನಿರ್ಧಾರದ ಹಿಂದೆ ಜಾರ್ಖಂಡ್ ತಂಡದ ಯಶಸ್ಸಿನ ಗುಟ್ಟು ಇದೆ ಎಂಬುದು ಅಷ್ಟೇ ಸತ್ಯ.

dhoni and kohli 2

ಹೌದು, ಎಂಎಸ್‍ಡಿಯನ್ನು ಮುಂದಿನ ಟಿ20 ವಿಶ್ವಕಪ್ ಭಾರತ ತಂಡದ ಮೆಂಟರ್ ಆಗಿ ಆಯ್ಕೆ ಮಾಡಿರುವ ಬಿಸಿಸಿಐ, ಈ ಮುಂಚೆ ಹಲವು ಲೆಕ್ಕಾಚಾರಗಳನ್ನು ನಡೆಸಿದೆ. ಅದರಲ್ಲಿ ಪ್ರಮುಖ ಅಂಶವೆಂದರೆ ಧೋನಿ ಈ ಹಿಂದೆ ಜಾರ್ಖಂಡ್ ಕ್ರಿಕೆಟ್ ತಂಡದ ಮೆಂಟರ್ ಆಗಿ 2016/2017ನೇ ಸಾಲಿನಲ್ಲಿ ಕಾರ್ಯನಿರ್ವಹಿಸಿದ್ದರು. ಈ ವೇಳೆ ಜಾರ್ಖಂಡ್ ತಂಡ ಉತ್ತಮ ಪ್ರದರ್ಶನ ನೀಡಿತ್ತು. ಇದನ್ನು ಗಮನಿಸಿರುವ ಬಿಸಿಸಿಐ ಇದೀಗ ಧೋನಿಯನ್ನು ಟೀಂ ಇಂಡಿಯಾದ ಮೆಂಟರ್ ಆಗಿ ಆಯ್ಕೆ ಮಾಡಿದೆ. ಇದನ್ನೂ ಓದಿ: 19 ಬೌಂಡರಿ, 11 ಸಿಕ್ಸ್ ಸಿಡಿಸಿ ಇಶಾನ್ ಕಿಶಾನ್ ಸಿಡಿಲಬ್ಬರದ ಬ್ಯಾಟಿಂಗ್

Sreesanth MS Dhoni

2016/2017ನೇ ಸಾಲಿನಲ್ಲಿ ಮಾಹಿ ಜಾರ್ಖಂಡ್ ತಂಡದ ಮೆಂಟರ್ ಆಗಿ ಕಾರ್ಯನಿರ್ವಹಿಸಿದ್ದರು. ಈ ಸಂದರ್ಭ ತಂಡದಲ್ಲಿ ಬಹುತೇಕ ಯುವ ಆಟಗಾರರೇ ತುಂಬಿದ್ದರು. ಅವರಿಗೆ ಸೂಕ್ತ ಮಾರ್ಗದರ್ಶನವನ್ನು ನೀಡಿ ತಂಡವನ್ನು ಬೆಳೆಸಿದ ಕೀರ್ತಿ ಮಾಹಿಗಿದೆ. ಇದಲ್ಲದೆ 2016/2017ನೇ ಸಾಲಿನ ರಣಜಿ ಕ್ರಿಕೆಟ್ ಟೂರ್ನಿಯಲ್ಲಿ ಜಾರ್ಖಂಡ್ ತಂಡ ಯಶಸ್ಸಿನ ಮೆಟ್ಟಿಲೇರಿ ಮೊದಲ ಬಾರಿಗೆ ಸೆಮಿಫೈನಲ್ ಪ್ರವೇಶ ಪಡೆದಿತ್ತು. ಈ ಸಾಧನೆಯ ಹಿಂದೆ ಧೋನಿಯ ಪರಿಶ್ರಮವಿತ್ತು. ಧೋನಿ ತಂಡದೊಂದಿಗೆ ಟೂರ್ನಿಯಲ್ಲಿ ಕಾಣಿಸಿಕೊಂಡಿದ್ದರು. ಅಷ್ಟೇ ಅಲ್ಲದೆ ಜಾರ್ಖಂಡ್ ತಂಡ ವಿಜಯ ಹಜಾರೆ ಟ್ರೋಫಿಯಲ್ಲೂ ಕೂಡ ಸೆಮಿಫೈನಲ್ ಪ್ರವೇಶ ಪಡೆದಿತ್ತು ಈ ಸಂದರ್ಭ ಕೂಡ ಕೂಲ್ ಕ್ಯಾಪ್ಟನ್ ಜೊತೆಗಿದ್ದರು.

ಇದೀಗ ಟೀಂ ಇಂಡಿಯಾದ ಮೆಂಟರ್ ಆಗಿ ಮಾಹಿ ಭಾರತ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಮೂಲಕ ಬಿಸಿಸಿಐ ಇನ್ನೊಂದು ಟಿ20 ಟ್ರೋಫಿ ಗೆಲ್ಲಲು ಮಾಹಿಯ ಸಲಹೆಯನ್ನು ಪಡೆಯಲು ಪ್ಲ್ಯಾನ್ ಹಾಕಿಕೊಂಡಿದೆ. ಅದಲ್ಲದೆ ಬಹುತೇಕ ಆಟಗಾರರು ಧೋನಿಯ ನಾಯಕತ್ವದಲ್ಲಿ ಆಡಿರುವ ಆಟಗಾರರು ಮತ್ತು ಕೊಹ್ಲಿ, ಧೋನಿಯ ಶಿಷ್ಯ ಇದನ್ನೆಲ್ಲ ನೋಡುತ್ತಿದ್ದಂತೆ ಧೋನಿ ಮೆಂಟರ್ ಆಗಿ ಟೀಂ ಇಂಡಿಯಾಕ್ಕೆ ಯಶಸ್ಸು ತಂದುಕೊಡುವರೆ ಎಂಬುದನ್ನು ಕಾದು ನೋಡ ಬೇಕಾಗಿದೆ. ಇದನ್ನೂ ಓದಿ: ಟಿ20 ವಿಶ್ವಕಪ್‍ಗೆ ಟೀಂ ಇಂಡಿಯಾಗೆ ಧೋನಿ ಮೆಂಟರ್

Share This Article
Leave a Comment

Leave a Reply

Your email address will not be published. Required fields are marked *