ಮುಂಬೈ: ಭಾರತ ಕ್ರಿಕೆಟ್ ತಂಡದ ಎಂಎಸ್ ಧೋನಿ, ಸಚಿನ್ ತೆಂಡೂಲ್ಕರ್ ಅವರು ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಆಟಗಾರರಾಗಿದ್ದು, ಇಬ್ಬರ ನಡೆಗಳು ಅದೆಷ್ಟೋ ಅಭಿಮಾನಿಗಳನ್ನು ಸೆಳೆದಿದೆ. ಈ ಇಬ್ಬರ ಕುರಿತು ಇಂಟರ್ ನೆಟ್‍ನಲ್ಲಿ ಹುಡುಕಾಟ ನಡೆಸುವವರ ಸಂಖ್ಯೆಯೂ ಹೆಚ್ಚಾಗಿದ್ದು, ಆದರೆ ಇವರ ಕುರಿತ ಮಾಹಿತಿಗಾಗಿ ಸರ್ಚ್ ಮಾಡಿದ ವೇಳೆ ಅತಿ ಹೆಚ್ಚು ನಕಲಿ ಲಿಂಕ್ ಗಳು ದೊರೆಯುತ್ತಿದೆ ಎಂದು ಪ್ರಮುಖ ಆ್ಯಂಟಿ ವೈರಸ್ ಮೆಕಾಫೆ ಸಂಸ್ಥೆ ತಿಳಿಸಿದೆ.
ಹೌದು, ಸಚಿನ್ ಹಾಗೂ ಧೋನಿ ಅವರ ಬಗ್ಗೆ ಇಂಟರ್ ನೆಟ್‍ನಲ್ಲಿ ಮಾಹಿತಿ ಹುಡುಕಾಟ ವೇಳೆ ಅತಿ ಹೆಚ್ಚು ನಕಲಿ ಲಿಂಕ್ ಗಳು ಪತ್ತೆಯಾಗುತ್ತಿದ್ದು, ಇದನ್ನು ತಿಳಿಯದ ಅಭಿಮಾನಿಗಳು ಲಿಂಕ್ ಗಳನ್ನು ಕ್ಲಿಕ್ ಮಾಡಿ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಮೆಕಾಫೆ ಸಂಸ್ಥೆ ತಿಳಿಸಿದೆ.
Advertisement
Advertisement
ಸಾಮಾನ್ಯವಾಗಿ ಜನರು ಕ್ರೀಡಾಪಟುಗಳು, ಸಿನಿಮಾ ಸ್ಟಾರ್, ಟಿವಿ ಶೋಗಳ ಹೆಚ್ಚು ಇಂಟರ್ ನೆಟ್‍ನಲ್ಲಿ ಹುಡುಕಾಟ ನಡೆಸುತ್ತಾರೆ. ತಮ್ಮ ನೆಚ್ಚಿನ ಸೆಲೆಬ್ರಿಟಿಯ ಕುರಿತು ಅಭಿಮಾನಿಗಳು ಹೆಚ್ಚು ಸರ್ಚ್ ಮಾಡುತ್ತಾರೆ. ದಿನ್ನೇ ತಮ್ಮ ಕೃತ್ಯಕ್ಕೆ ಬಳಕೆ ಮಾಡಿಕೊಳ್ಳುತ್ತಿರುವ ಸೈಬರ್ ಕ್ರೈಂ ಆರೋಪಿಗಳು, ನಕಲಿ ಲಿಂಕ್ ಗಳನ್ನು ಸೃಷ್ಟಿ ಮಾಡಿ ಹರಿಬಿಡುತ್ತಿದ್ದಾರೆ. ಆ ಮೂಲಕ ವ್ಯಕ್ತಿಗಳ ಮಾಹಿತಿಯನ್ನು ಕಳ್ಳತನ ಮಾಡುತ್ತಿದ್ದಾರೆ. ಅಲ್ಲದೇ ಬಳಕೆದಾರರ ಮೊಬೈಲ್, ಲ್ಯಾಪ್‍ಟಾಪ್, ಕಂಪ್ಯೂಟರ್ ಗಳು ವೈರಸ್ ಗಳಿಗೂ ಒಳಗಾಗುತ್ತಿದೆ. ಪರಿಣಾಮ ನೆಟಿಜನ್ಸ್ ಎಚ್ಚರಿಕೆಯಿಂದ ಇರಬೇಕು ಎಂದು ಸಂಸ್ಥೆ ಹೇಳಿದೆ.
Advertisement
ಸಂಸ್ಥೆ ನೀಡಿರುವ ಪ್ರಮಾದಕರ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಧೋನಿ, ಸಚಿನ್ ಮೊದಲ ಸ್ಥಾನ ಪಡೆದಿದ್ದು, ಆ ಬಳಿಕವೇ ಬಿಗ್ ಬಾಸ್-8ರ ವಿನ್ನರ್ ಗೌತಮ್, ಬಾಲಿವುಡ್ ನಟಿ ಸನ್ನಿ ಲಿಯೋನ್, ರಾಧಿಕಾ ಅಪ್ಟೆ, ಪಿವಿ ಸಿಂಧು, ಅವರು ಸ್ಥಾನ ಪಡೆದಿದ್ದಾರೆ.