ಮೆಲ್ಬರ್ನ್: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಅಂತಿಮ ಹಾಗೂ 3ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಮಾಜಿ ನಾಯಕ, ವಿಕೆಟ್ ಕೀಪರ್ ಎಂಎಸ್ ಧೋನಿ ಮತ್ತೊಮ್ಮೆ ಮಿಂಚು ಹರಿಸಿದ್ದು, ಕ್ಷಣಾರ್ಧದಲ್ಲಿ ಸ್ಟಂಪ್ ಔಟ್ ಮಾಡಿದ್ದಾರೆ.
ವರ್ಷದ ಆರಂಭದ ಬಳಿಕ ನಡೆದ 2 ಏಕದಿನ ಪಂದ್ಯಗಳಲ್ಲಿ ಬ್ಯಾಟಿಂಗ್ ಮೂಲಕ ಮಿಂಚಿದ್ದ ಧೋನಿ ಈ ಪಂದ್ಯದಲ್ಲಿ ತಮ್ಮ ಚಾಣಾಕ್ಷತೆ ತೋರಿ ಕಳೆದ ಪಂದ್ಯದಲ್ಲಿ ಶತಕದ ಸಾಧನೆ ಮಾಡಿದ್ದ ಮಾರ್ಷ್ ವಿಕೆಟ್ ಪಡೆದು ಮಿಂಚಿದರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Advertisement
https://twitter.com/UB399/status/1086140484152635392?
Advertisement
ಪಂದ್ಯದಲ್ಲಿ 3 ಬೌಂಡರಿ ಸಿಡಿಸಿ 39 ರನ್ ಗಳಿಸಿದ್ದ ಮಾರ್ಷ್ ಚಹಲ್ ಬೌಲಿಂಗ್ ನಲ್ಲಿ ಬ್ಯಾಟ್ ಬೀಸಲು ಯತ್ನಿಸಿ ವಿಫಲರಾಗಿದ್ರು. ಈ ವೇಳೆ ಚೆಂಡು ಧೋನಿ ಕೈ ಸೇರುತ್ತಿದಂತೆ ವಿಕೆಟ್ ಗೆ ಮುಟ್ಟಿಸಿದರು. ಇತ್ತ ಧೋನಿ ಸ್ಟಂಪ್ ಮಾಡುತ್ತಿದಂತೆ ನಾಯಕ ವಿರಾಟ್ ಕೊಹ್ಲಿ ಅಚ್ಚರಿ ವ್ಯಕ್ತಪಡಿಸಿ ಅಂಪೈರ್ ಔಟ್ ಎಂದು ತೀರ್ಪು ನೀಡುವ ಮೂಲಕವೇ ಆತ್ಮವಿಶ್ವಾಸದಿಂದ ಸಂಭ್ರಮಿಸಿದರು.
Advertisement
ಸದ್ಯ ಸರಣಿಯಲ್ಲಿ 1-1ರ ಮೂಲಕ ಸಮಬಲ ಸಾಧಿಸಿರುವ ಟೀಂ ಇಂಡಿಯಾ ಅಂತಿಮ ಪಂದ್ಯ ಗೆಲ್ಲುವ ಮೂಲಕ ಇತಿಹಾಸ ನಿರ್ಮಾಣ ಮಾಡುವ ವಿಶ್ವಾಸದಲ್ಲಿದೆ. ಟೀಂ ಇಂಡಿಯಾ ಪಂದ್ಯದಲ್ಲಿ ಜಯಗಳಿಸಿದರೆ ಆಸೀಸ್ ನೆಲದಲ್ಲಿ ನಡೆದ ದ್ವೀಪಕ್ಷಿಯ ಸರಣಿಯಲ್ಲಿ ಮೊದಲ ಬಾರಿಗೆ ಗೆಲುವು ಪಡೆದ ದಾಖಲೆ ನಿರ್ಮಿಸಲಿದೆ. ಅಲ್ಲದೇ ಆಸೀಸ್ ಪ್ರವಾಸದಲ್ಲಿ ಸರಣಿ ಸೋಲದೇ ಅಜೇಯರಾಗಿ ಉಳಿದ ಹೆಗ್ಗಳಿಕೆ ಪಡೆಯಲಿದೆ. ಇದನ್ನು ಓದಿ: ಧೋನಿಯ ಶರವೇಗದ ಸ್ಟಂಪಿಂಗ್ – ವೈರಲ್ ಆಗಿದೆ ವಿಡಿಯೋ
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv