ವಾಷಿಂಗ್ಟನ್: ಯುಎಸ್ ಓಪನ್ ಟೆನಿಸ್ ಟೂರ್ನಿಯ ಅಲೆಕ್ಸಾಂಡರ್ ಜ್ವೆರೆವ್ ಮತ್ತು ಕಾರ್ಲೋಸ್ ಅಲ್ಕರಾಜ್ ನಡುವಿನ ಕ್ವಾರ್ಟರ್ ಫೈನಲ್ ಪಂದ್ಯವನ್ನು ವೀಕ್ಷಿಸಿ ಸುದ್ದಿಯಾಗಿದ್ದ ಮಹೇಂದ್ರ ಸಿಂಗ್ ಧೋನಿ (MS Dhoni), ಇದೀಗ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಜೊತೆ ಗಾಲ್ಫ್ (Golf) ಆಡಿ ಸುದ್ದಿಯಾಗಿದ್ದಾರೆ.
ಟ್ರಂಪ್ ಮತ್ತು ಧೋನಿ ಗಾಲ್ಫ್ ಆಡುತ್ತಿರುವ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ದುಬೈ ಮೂಲದ ಉದ್ಯಮಿ ಹಿತೇಶ್ ಸಾಂಘ್ವಿ ಅವರು ಟ್ರಂಪ್ ನ್ಯಾಷನಲ್ ಗಾಲ್ಫ್ ಕ್ಲಬ್ ಬೆಡ್‍ಮಿನ್‍ಸ್ಟರ್‌ನಲ್ಲಿ ಧೋನಿ ಮತ್ತು ಟ್ರಂಪ್ ಗಾಲ್ಫ್ ಆಡುತ್ತಿರುವ ಫೋಟೋವನ್ನು ಟ್ವಿಟರ್ ಮತ್ತು ಇನ್ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಭಾರತ ಪಾಕ್ ಪಂದ್ಯಕ್ಕೆ ವರುಣನ ಅಡ್ಡಗಾಲು: ಮ್ಯಾಚ್ ರದ್ದಾದರೆ ಗತಿ ಏನು?
ಈ ಬಾರಿಯ 16ನೇ ಆವೃತ್ತಿಯ ಐಪಿಎಲ್‍ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಐದನೇ ಬಾರಿ ಚಾಂಪಿಯನ್ ಪಟ್ಟಕೇರಿಸಿದ ಧೋನಿ ಈಗ ಜಾಲಿ ಮೂಡ್‍ನಲ್ಲಿ ಪ್ರವಾಸದಲ್ಲಿದ್ದಾರೆ.
ಬುಧವಾರ ನಡೆದ ಯುಎಸ್ ಓಪನ್‍ನ ಕ್ವಾರ್ಟರ್‌ಫೈನಲ್ ವಿಶ್ವದ ನಂ.1 ಆಟಗಾರ ಅಲ್ಕರಾಜ್ ಮತ್ತು ಜ್ವೆರೆವ್ ವಿರುದ್ಧದ ಹೋರಾಟವನ್ನು ವೀಕ್ಷಿಸಲು ಧೋನಿ ತೆರಳಿದ್ದರು. ಈ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕಾರ್ಲೋಸ್ ಅಲ್ಕರಾಜ್ 6-3, 6-2, 6-4 ನೇರ ಸೆಟ್‍ನಿಂದ ಮಣಿಸಿ ಸೆಮಿಫೈನಲ್ ಪ್ರವೇಶಿಸಿದ್ದರು. ಇದನ್ನೂ ಓದಿ: Asia Cup 2023: ಈ ಬಾರಿ ಪಾಕಿಸ್ತಾನಕ್ಕೆ ಏಷ್ಯಾಕಪ್ ಕಿರೀಟ – ಮಾಜಿ ಕ್ರಿಕೆಟಿಗರ ಭವಿಷ್ಯ
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]