Thursday, 19th July 2018

Recent News

ಧೋನಿ, 2019ರ ವಿಶ್ವಕಪ್ ಆಡ್ತಾರಾ: ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್‍ಕೆ ಪ್ರಸಾದ್ ಹೇಳಿದ್ದು ಹೀಗೆ

ಮುಂಬೈ: 2019ರ ವಿಶ್ವಕಪ್ ಟೂರ್ನಿಯಲ್ಲಿ ಮಾಜಿ ನಾಯಕ ಧೋನಿ ಆಡುವುದು ಖಚಿತ ಎಂದು ಬಿಬಿಸಿಐ ಆಯ್ಕೆ ಸಮಿತಿಯ ಅಧ್ಯಕ್ಷ ಎಂಎಸ್‍ಕೆ ಪ್ರಸಾದ್ ಸ್ಪಷ್ಟಪಡಿಸಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಟೀಂ ಇಂಡಿಯಾ ತಂಡವನ್ನು ಪ್ರಕಟಿಸಿದ ನಂತರ ಮಾಧ್ಯಮ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಧೋನಿ ಟೀಂ ಇಂಡಿಯಾದಲ್ಲಿ 2019 ರ ವಿಶ್ವಕಪ್ ವರೆಗೂ ಮುಂದವರೆಯುತ್ತಾರೆ, ಅನಂತರದಲ್ಲಿ ಟೀಂ ಇಂಡಿಯಾದ ವಿಕೆಟ್ ಕೀಪರ್ ಯಾರಾಗಬೇಕು ಎನ್ನುವುದನ್ನು ನಿರ್ಧರಿಸಲಾಗುತ್ತದೆ ಎಂದರು. ಇದನ್ನೂ ಓದಿ: ಮೂರು ವರ್ಷದ ಬಳಿಕ ಟ್ವೀಟ್ ಲೈಕಿಸಿದ ಧೋನಿ: ಆ ಟ್ವೀಟ್ ನಲ್ಲಿ ಏನಿದೆ?

ಧೋನಿ ವಿಶ್ವ ಕ್ರಿಕೆಟ್‍ನ ನಂ.1 ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆ ಹೊಂದಿದ್ದಾರೆ. ಶ್ರೀಲಂಕಾ ಸರಣಿಯ ವೇಳೆಯೂ ಅವರು ವಿಕೆಟ್ ಹಿಂದೆ ಉತ್ತಮ ಪ್ರದರ್ಶನವನ್ನು ನೀಡಿದ್ದಾರೆ. ಪ್ರಸ್ತುತ ವಿಶ್ವ ಕ್ರಿಕೆಟ್‍ನಲ್ಲಿ ಧೋನಿ ಅವರಿಗೆ ಹೋಲಿಕೆ ಮಾಡುವಂತಹ ಯಾವ ಆಟಗಾರರು ಇಲ್ಲ ಎಂದು ಹೇಳಿದರು.

ಈಗಾಗಲೇ ಟೀಂ ಇಂಡಿಯಾದ `ಎ’ ತಂಡದಲ್ಲಿ ಹಲವು ಮಂದಿ ಅವಕಾಶ ನೀಡಲಾಗಿದ್ದು ಅವರು ನಮ್ಮ ನಿರೀಕ್ಷೆಯ ಮಟ್ಟದಲ್ಲಿ ಪ್ರದರ್ಶನವನ್ನು ನೀಡುತ್ತಿಲ್ಲ ಎಂದರು.  ಇದನ್ನೂ ಓದಿ: 100 ಮೀಟರ್ ಓಡಿದ್ರು ಧೋನಿ, ಪಾಂಡ್ಯ: ವಿನ್ನರ್ ಯಾರು ಗೊತ್ತಾ?

ಭಾರತದ ಕ್ರಿಕೆಟ್ ತಂಡ ವಿಕೆಟ್ ಕೀಪರ್ ಆಗಿ ಧೋನಿ ಹಲವು ದಾಖಲೆಗಳನ್ನು ಮಾಡಿದ್ದಾರೆ. ಆದರೆ ಧೋನಿ ಈಗಾಗಲೇ ಟೆಸ್ಟ್ ಕ್ರಿಕೆಟ್‍ಗೆ ನಿವೃತ್ತಿ ನೀಡಿದ್ದು, ಅವರ ನಂತರದಲ್ಲಿ ಟೀಂ ಇಂಡಿಯಾದ ಖಾಯಂ ವಿಕೆಟ್ ಕೀಪರ್ ಯಾರು ಎಂಬ ಚರ್ಚೆ ಆರಂಭವಾಗಿದೆ. ಪ್ರಸ್ತುತ ವಿಕೆಟ್ ಕೀಪರ್ ರೆಸ್‍ನಲ್ಲಿ ದೆಹಲಿ ತಂಡದ ನಾಯಕ ರಿಷಭ್ ಪಂತ್, 32 ವರ್ಷದ ದಿನೇಶ್ ಕಾರ್ತಿಕ್ ಹಾಗೂ ಸಂಜು ಸ್ಯಾಮ್ಸನ್ ಗುರುತಿಸಿಕೊಂಡಿದ್ದಾರೆ. ಇದನ್ನೂ ಓದಿ: ವಿರಾಟ್, ಧೋನಿ ನಡುವೆ ಹೊಂದಾಣಿಕೆ ಎಷ್ಟಿದೆ? ಕೊಹ್ಲಿಯ ಮಾತು ಕೇಳಿದ್ರೆ ನಿಮ್ಗೆ ಇಷ್ಟವಾಗುತ್ತೆ

 

 

 

Leave a Reply

Your email address will not be published. Required fields are marked *