ಕ್ರಿಕೆಟಿಗ, ಮಾಜಿ ಟೀಮ್ ಇಂಡಿಯಾ ಕ್ಯಾಪ್ಟನ್ ಎಂ.ಎಸ್. ಧೋನಿ ಈಗಾಗಲೇ ಹಲವಾರು ಉದ್ಯಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಅವರು ಸಿನಿಮಾ ಕ್ಷೇತ್ರಕ್ಕೆ ಲಗ್ಗೆ ಇಟ್ಟಿದ್ದು, ಮೊದಲ ಬಾರಿಗೆ ನಿರ್ಮಾಣ ಮಾಡುತ್ತಿದ್ದಾರೆ. ತಮಿಳು ಸಿನಿಮಾ ರಂಗದ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಡುತ್ತಿರುವ ಧೋನಿ ಸಿನಿಮಾದಲ್ಲಿ ನಯನತಾರಾ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗಿತ್ತು. ಇದೀಗ ಮತ್ತೋರ್ವ ಸ್ಟಾರ್ ನಟನ ಹೆಸರು ಕೇಳಿ ಬರುತ್ತಿದೆ.
ತಮಿಳು ಸಿನಿಮಾವನ್ನು ನಿರ್ಮಾಣ ಮಾಡುವ ಮೂಲಕ ಧೋನಿ ಸಿನಿಮಾ ರಂಗಕ್ಕೆ ನಿರ್ಮಾಪಕರಾಗಿ ಎಂಟ್ರಿ ಕೊಡುತ್ತಿದ್ದಾರೆ. ಹಾಗಾಗಿ ತಮಿಳಿನ ಸೂಪರ್ ಸ್ಟಾರ್ ದಳಪತಿ ವಿಜಯ್ ಅವರ ಸಿನಿಮಾವನ್ನು ನಿರ್ಮಾಣ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಿನಿಮಾದ ಮೂಲಕವೇ ಧೋನಿ ಗ್ರ್ಯಾಂಡ್ ಎಂಟ್ರಿ ಪಡೆದುಕೊಳ್ಳಲಿದ್ದಾರೆ ಎಂದು ಸುದ್ದಿ ಆಗುತ್ತಿದೆ. ಈಗಾಗಲೇ ಧೋನಿ ಮತ್ತು ವಿಜಯ್ ಹಲವು ಬಾರಿ ಮಾತುಕತೆ ಕೂಡ ನಡೆಸಿದ್ದಾರಂತೆ. ಇದನ್ನೂ ಓದಿ:ದಿಗಂತ್ ಗೆ ಮೂರು ಗಂಟೆಗಳ ಶಸ್ತ್ರ ಚಿಕಿತ್ಸೆ : ಅಬ್ಸರ್ವೇಶನ್ ನಲ್ಲಿ ನಟ
ಈ ಹಿಂದೆ ನಯನತಾರಾ ಹೆಸರು ಕೇಳಿ ಬಂದಿತ್ತು. ನಾಯಕಿ ಪ್ರಧಾನ ಸಿನಿಮಾವನ್ನು ಧೋನಿ ನಿರ್ಮಾಣ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಈಗದು ಬದಲಾದಂತೆ ಕಾಣುತ್ತಿದೆ. ಅಥವಾ ನಯನತಾರಾ ಮತ್ತು ವಿಜಯ್ ಒಟ್ಟಾಗಿ ನಟಿಸಲಿದ್ದಾರೆ ಎನ್ನುವ ಕುತೂಹಲ ಮೂಡಿದೆ. ಈಗಾಗಲೇ ಕಥೆ ಆಯ್ಕೆಯಾಗಿದೆ. ನಿರ್ದೇಶಕರನ್ನೂ ಕೂಡ ಹುಡುಕಿದ್ದಾರಂತೆ. ತಾರಾ ಬಳಗವನ್ನು ಖಚಿತ ಪಡಿಸಿಕೊಂಡು ದೊಡ್ಡಮಟ್ಟದಲ್ಲಿಯೇ ಹೆಸರು ಘೋಷಣೆ ಮಾಡಲಿದ್ದಾರೆ ಎನ್ನುವ ಸುದ್ದಿ ಹರಡಿದೆ. ಸದ್ಯದಲ್ಲೇ ಸ್ವತಃ ಧೋನಿ ಅವರೇ ಈ ವಿಷಯವನ್ನು ಹಂಚಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.