ಮೌಂಟ್ ಮೌಂಗಾನೆ: ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಎಷ್ಟು ಫಿಟ್ ಆಗಿರುತ್ತಾರೆ ಎಂಬುವುದು ಎಲ್ಲರಿಗೂ ತಿಳಿದ ವಿಷಯ. 37 ವರ್ಷದ ಧೋನಿ ಯುವ ಆಟಗಾರರಿಗೆ ಪೈಪೋಟಿ ನೀಡುವಂತೆ ಕ್ರೀಸ್ ನಲ್ಲಿ ಓಡುತ್ತಾರೆ. ಅಲ್ಲದೇ ತಾವು ಮ್ಯಾಚ್ ಫಿನಿಷರ್ ಎಂಬುವುದನ್ನು ಮತ್ತೆ ಆಸೀಸ್, ನ್ಯೂಜಿಲೆಂಡ್ ಸರಣಿಯಲ್ಲಿ ಸಾಬೀತು ಪಡಿಸಿದ್ದರು.
ವಿಕೆಟ್ ಹಿಂದೆಯೂ ಕೂಡ ವೇಗವಾಗಿ ಕಾರ್ಯನಿರ್ವಹಿಸಿದ್ದ ಧೋನಿ ಎಲ್ಲರಿಗೂ ಅಚ್ಚರಿಯನ್ನು ಉಂಟು ಮಾಡಿದ್ದರು. ಆದರೆ ಇಂದು ನಡೆದ ನ್ಯೂಜಿಲೆಂಡ್ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಗಾಯದ ಸಮಸ್ಯೆಯಿಂದ ಹೊರಗುಳಿದ್ದರು.
Advertisement
Advertisement
2004ರ ಡಿಸೆಂಬರ್ ನಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದ ಧೋನಿ ಗಾಯ/ ಆರೋಗ್ಯ ಸಮಸ್ಯೆಯಿಂದ ಕಾರಣದಿಂದ ತಂಡದಿಂದ ಹೊರಗುಳಿದಿರುವುದು ಇದು ಮೂರನೇ ಬಾರಿ ಮಾತ್ರ. 2013ರಲ್ಲಿ ತಂಡದಿಂದ ಹೊರಗಿದ್ದ ಧೋನಿ ಬರೋಬ್ಬರಿ 12 ವರ್ಷಗಳ ಬಳಿಕ ಮತ್ತೆ ಗಾಯದ ಸಮಸ್ಯೆ ಎದುರಿಸಿದ್ದಾರೆ. ಮೊದಲ ಬಾರಿಗೆ 2007 ರಲ್ಲಿ ಐರ್ಲೆಂಡ್, ದಕ್ಷಿಣ ಆಫ್ರಿಕಾದಲ್ಲಿ ಜರುಗಿದ್ದ 2 ಪಂದ್ಯಗಳ ವೇಳೆ ಜ್ವರದ ಕಾರಣ ಮ್ಯಾಚ್‍ನಿಂದ ಹಿಂದೆ ಸರಿದಿದ್ದರು. 2013ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ತ್ರಿಕೋನ ಸರಣಿಯಲ್ಲಿ 3 ಏಕದಿನ ಪಂದ್ಯದಲ್ಲಿ ಭಾಗವಹಿಸಿರಲಿಲ್ಲ.
Advertisement
ವೆಸ್ಟ್ ಇಂಡೀಸ್ ಸರಣಿ ವೇಳೆ ತೊಡೆಯ ಗಾಯದ ಸಮಸ್ಯೆಯಿಂದ ಮ್ಯಾಚ್ ಮಿಸ್ ಮಾಡಿದ್ದ ಧೋನಿ, ಮತ್ತೆ ಇದೇ ಕಾರಣದಿಂದ ಇಂದು ಪಂದ್ಯದಿಂದ ಹೊರಗುಳಿದ್ದಾರೆ ಎಂದು ವರದಿಯಾಗಿದೆ. 2018ರಲ್ಲಿ ಕಳಪೆ ಫಾರ್ಮ್ ನಿಂದ ಟೀಕೆಗೆ ಗುರಿಯಾಗಿದ್ದ ಧೋನಿ ಅವರು 2019ರ ಆರಂಭದಲ್ಲೇ ಬ್ಯಾಕ್ ಟು ಬ್ಯಾಕ್ ಅರ್ಧಶತಕ ಸಿಡಿಸಿದ್ದರು.
Advertisement
ಈ ವರ್ಷದಲ್ಲಿ ಧೋನಿ 241ರ ಸರಾಸರಿಯಲ್ಲಿ 241 ರನ್ ಸಿಡಿಸಿದ್ದಾರೆ. ಆಸೀಸ್ ವಿರುದ್ಧ 2ನೇ ಏಕದಿನ ಪಂದ್ಯದಲ್ಲೂ ಬಿರುಸಿನ ಆಟ ಪ್ರದರ್ಶಿಸಿದ ಧೋನಿ, 33 ಎಸೆತಗಳನ್ನು ಎದುರಿಸಿ 5 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 48 ರನ್ ಗಳಿಸಿ ಅಜೇಯರಾಗಿ ಉಳಿದಿದ್ದರು. ಧೋನಿ ಗಾಯದ ಸಮಸ್ಯೆಗೆ ಒಳಗಾದ ಪರಿಣಾಮದಿಂದ ದಿನೇಶ್ ಕಾರ್ತಿಕ್ 3ನೇ ಏಕದಿನ ಪಂದ್ಯದಲ್ಲಿ ಆಡುವ ಅವಕಾಶ ಪಡೆದು 38 ಎಸೆತಗಳಲ್ಲಿ 5 ಬೌಂಡರಿ 1 ಸಿಕ್ಸರ್ ನೆರವಿನಿಂದ 38 ರನ್ ಸಿಡಿಸಿದರು.
ಅಂದಹಾಗೇ ಧೋನಿಗೆ ಕಾಣಿಸಿಕೊಂಡಿರುವ ಗಾಯದ ಸಮಸ್ಯೆ ಸಾಮಾನ್ಯವಾಗಿ ಕ್ರೀಡಾಪುಟುಗಳಲ್ಲಿ ಕಾಣಿಸಿಕೊಳ್ಳುವ ಸ್ನಾಯು ಸೆಳೆತದ ಭಾಗವಾಗಿದ್ದು, ಧೋನಿ ಅವರಿಗೆ ತೊಡೆಯ ಹಿಂಭಾಗದಲ್ಲಿ ಸ್ನಾಯು ಸೆಳೆತ ಉಂಟಾಗಿದೆ. ಸಾಮಾನ್ಯವಾಗಿ ಲಘು ಸ್ನಾಯು ಸೆಳೆತ, ಭಾಗಶಃ ಸ್ನಾಯು ಸೆಳೆತ ಎಂದು ಎರಡು ರೀತಿಯಲ್ಲಿ ಇದನ್ನು ಪರಿಗಣಿಸಲಾಗುತ್ತದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv