IPL 2025 | ಸಿಎಸ್‌ಕೆ ತಂಡಕ್ಕೆ ಮತ್ತೆ ಲೆಜೆಂಡ್‌ ಮಹಿ ಕ್ಯಾಪ್ಟನ್‌?

Public TV
1 Min Read
MS Dhoni 1

ಚೆನ್ನೈ: ಲೆಜೆಂಡ್‌ ಕ್ರಿಕೆಟಿಗ, ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಜೀವಾಳ ಎಂ.ಎಸ್‌ ಧೋನಿ (MS Dhoni) ಮತ್ತೆ ಸಿಎಸ್‌ಕೆ ತಂಡಕ್ಕೆ ನಾಯಕನಾಗಿ ಕಣಕ್ಕಿಳಿಯುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ.

RCB vs CSK 1

ಶನಿವಾರ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ವಿರುದ್ಧ ನಡೆಯಲಿರುವ ಪಂದ್ಯಕ್ಕೆ ಮಹಿ ನಾಯಕನಾಗಿ ಕಣಕ್ಕಿಳಿಯುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ. ಹಾಲಿ ಕ್ಯಾಪ್ಟನ್‌ ರುತುರಾಜ್‌ ಗಾಯಕ್ವಾಡ್‌ ಅವರು ಮುಂಗೈ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಕಾರಣ ಪಂದ್ಯಕ್ಕೆ ಅವರ ಲಭ್ಯತೆ ಬಗ್ಗೆ ಖಚಿತವಾಗಿಲ್ಲ. ಹಾಗಾಗಿ ಧೋನಿ ಅವರೇ ನಾಯಕತ್ವದ ಹೊಣೆ ಹೊರಲಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಧೋನಿಗೆ ಏಜ್‌ ಆಗಿದೆ ಅಂದವರ್ಯಾರು? – ಮತ್ತೆ ರಾಕೆಟ್‌ ಸ್ಪೀಡ್‌ನಲ್ಲಿ ಸ್ಟಂಪ್‌, ಸಾಲ್ಟ್‌ ಸ್ಟನ್‌!

MS DHONI 2

ಇತ್ತೀಚೆಗೆ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ನಡೆದ ಪಂದ್ಯದಲ್ಲಿ ತುಷಾರ್‌ ದೇಶ್‌ಪಾಂಡೆ ಅವರ ಬೌಲಿಂಗ್‌ನಲ್ಲಿ ಚೆಂಡು ರುತುರಾಜ್‌ ಅವರ ಬಲಭಾಗದ ಮುಂಗೈಗೆ ಬಡಿದಿತ್ತು. ಈ ವೇಳೆ ಕೊಂಚ ಬ್ರೇಕ್‌ ತೆಗೆದುಕೊಂಡಿದ್ದರು, ಆದಾಗ್ಯೂ ರುತುರಾಜ್‌ ಬ್ಯಾಟಿಂಗ್‌ ಮುಂದುವರಿಸಿದ್ದರು. ಸದ್ಯ ಅವರು ಪಂದ್ಯದಲ್ಲಿ ಮುಂದುವರಿಯುವ ಸಾಧ್ಯತೆಗಳು ಕಡಿಮೆ ಇದೆ. ಪ್ಲೇಯಿಂಗ್‌-11 ಪ್ರಕಟಿಸುವ ಮುನ್ನ ರುತುರಾಜ್‌ ಲಭ್ಯತೆಯ ಬಗ್ಗೆ ತಿಳಿಸಲಾಗುತ್ತದೆ. ಒಂದು ವೇಳೆ ಅಲಭ್ಯರಾದ್ರೆ ಎಂ.ಎಸ್‌ ಧೋನಿ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಸಿಎಸ್‌ಕೆ ಬ್ಯಾಟಿಂಗ್‌ ಕೋಚ್‌ ಮೈಕ್‌ ಹಸ್ಸಿ ಹೇಳಿದ್ದಾರೆ. ಇದನ್ನೂ ಓದಿ: ತುಂಬಾ ಬೇಗ ಬ್ಯಾಟಿಂಗ್‌ಗೆ ಬಂದ್ರಿ – ಆರ್‌ಸಿಬಿ ವಿರುದ್ಧ 9ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಧೋನಿ ಕಾಲೆಳೆದ ಸೆಹ್ವಾಗ್

CSK 2 1

2023ರ ಆವೃತ್ತಿಯಲ್ಲಿ ಸಿಎಸ್‌ಕೆ ಎಂ.ಎಸ್‌ ಧೋನಿ ನಾಯಕತ್ವದಲ್ಲೇ ಚಾಂಪಿಯನ್‌ ಪಟ್ಟ ಗೆದ್ದುಕೊಂಡಿತ್ತು. ಆ ಬಳಿಕ ಧೋನಿ ತಮ್ಮ ನಾಯಕತ್ವಕ್ಕೆ ಗುಡ್‌ಬೈ ಹೇಳಿದ್ದರು. 2024ರ ಆವೃತ್ತಿಯಿಂದ ರುತುರಾಜ್‌ ಗಾಯಕ್ವಾಡ್‌ ಸಿಎಸ್‌ಕೆ ತಂಡದ ನಾಯಕನಾಗಿ ಮುಂದುವರಿಯುತ್ತಿದ್ದಾರೆ. ಸದ್ಯ ಪ್ರಸಕ್ತ ಆವೃತ್ತಿಯಲ್ಲಿ ಮೂರು ಪಂದ್ಯಗಳನ್ನಾಡಿರುವ ಸಿಎಸ್‌ಕೆ ಕೇವಲ 1ರಲ್ಲಿ ಮಾತ್ರ ಗೆಲುವು ಸಾಧಿಸಿದೆ. ಇದನ್ನೂ ಓದಿ: ನೆಟ್ ಪ್ರ್ಯಾಕ್ಟೀಸ್‌ ವೇಳೆ ಹೆಲಿಕಾಪ್ಟರ್ ಶಾಟ್ ಹೊಡೆದ ಧೋನಿ

Share This Article