ಬಾಲ್ಯದ ಗೆಳೆಯರೊಂದಿಗೆ ಧೋನಿ ಎಂಜಾಯ್

Public TV
2 Min Read
DHONI a

– ನಾಗ್ಪುರ ಪಂದ್ಯದಲ್ಲಿ ಧೋನಿ ಜಪ ಮಾಡಿದ ಅಭಿಮಾನಿಗಳು

ರಾಂಚಿ: ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ನಿವೃತ್ತಿಯ ನಿರ್ಧಾರ ಕುರಿತ ವರದಿಗಳು ಅಭಿಮಾನಿಗಳಲ್ಲಿ ಗೊಂದಲವನ್ನು ಮೂಡಿಸಿದ್ದು, ಇತ್ತ ಧೋನಿ ಮಾತ್ರ ತವರು ರಾಂಚಿಯಲ್ಲಿ ಬಾಲ್ಯದ ಗೆಳೆಯರೊಂದಿಗೆ ಸಮಯ ಕಳೆಯುತ್ತಿದ್ದಾರೆ.

ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಬಳಿಕ ಸತತ 4 ತಿಂಗಳಿನಿಂದ ವಿಶ್ರಾಂತಿ ಪಡೆದಿರುವ ಧೋನಿ, ತಮ್ಮ ಕ್ರಿಕೆಟ್ ಭವಿಷ್ಯ ಕುರಿತು ಯಾವುದೇ ಸ್ಪಷ್ಟನೆ ನೀಡಿಲ್ಲ. ಬಿಸಿಸಿಐ ಅಧ್ಯಕ್ಷರಾಗಿ ಗಂಗೂಲಿ ಅಧಿಕಾರ ವಹಿಸಿಕೊಂಡ ಬಳಿಕ ಈ ಕುರಿತು ಸ್ಪಷ್ಟನೆ ಲಭಿಸಲಿದೆ ಎಂಬ ಭಾವನೆಯನ್ನು ಅಭಿಮಾನಿಗಳು ಹೊಂದಿದ್ದರು. ಆದರೆ ನಿವೃತ್ತಿ ಎಂಬುವುದು ಆಟಗಾರರ ವೈಯಕ್ತಿಕ ಅಭಿಪ್ರಾಯ ಎಂದು ಹೇಳುವ ಮೂಲಕ ಗಂಗೂಲಿ ಕೂಡ ಯಾವುದೇ ಸ್ಪಷ್ಟ ತೀರ್ಮಾನ ಕೈಗೊಳ್ಳಲಿಲ್ಲ.

 

View this post on Instagram

 

Happy Birthday Chittu Bhaiya ???? #SeemantLohani

A post shared by MS Dhoni 7781 | Mahi7781 ???????? (@msdhoni.7781) on

ಅಭಿಮಾನಿಗಳಲ್ಲಿ ಧೋನಿ ಕಮ್ ಬ್ಯಾಕ್ ಕುರಿತ ಗೊಂದಲ ಹೆಚ್ಚಾಗುತ್ತಿದ್ದು, ಆದರೆ ಧೋನಿ ಮಾತ್ರ ತಮ್ಮ ಗೆಳೆಯರೊಂದಿಗೆ ಸಮಯ ಕಳೆಯುತ್ತಿದ್ದಾರೆ. ರಾಂಚಿಗೆ ಸಮೀಪವಿರುವ ಫಾರ್ಮ್ ಹೌಸ್‍ನಲ್ಲಿ ಧೋನಿರ ಬಾಲ್ಯದ ಗೆಳೆಯನ ಹುಟ್ಟುಹಬ್ಬದ ಸಂಭ್ರಮಾಚರಣೆ ಮಾಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಫೋಟೋಗಳಿಗೆ ಪ್ರತಿಕ್ರಿಯೆ ನೀಡಿರುವ ಅಭಿಮಾನಿಗಳು, ನಿವೃತ್ತಿಯ ಕುರಿತು ಎಷ್ಟೇ ಟೀಕೆಗಳು ಕೇಳಿ ಬಂದರು ನೀವು ತಾಳ್ಮೆಯಿಂದ ಇದ್ದೀರಿ. ಈ ನಿಮ್ಮ ಗುಣವೇ ಎಲ್ಲರಿಗೂ ಇಷ್ಟ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಧೋನಿ ಮುಂದಿನ ಟಿ20 ವಿಶ್ವಕಪ್ ಟೂರ್ನಿಗೆ ತಂಡದಲ್ಲಿರುವುದು ಲಾಭವಾಗಲಿದೆ ಎಂದು ಹಲವು ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.

https://twitter.com/barainishant/status/1193823683145609216?

ಇತ್ತ ಭಾನುವಾರ ನಡೆದ ಬಾಂಗ್ಲಾ ದೇಶದ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಯುವ ವಿಕೆಟ್ ಕೀಪರ್ ರಿಷಬ್ ಪಂತ್ ಮತ್ತೊಮ್ಮೆ ಡಿಆರ್ ಎಸ್ ಮನವಿ ಪಡೆದು ವಿಫಲರಾಗಿದ್ದ ಪರಿಣಾಮ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಟ್ರೋಲ್ ಆಗಿದ್ದಾರೆ. ಅಲ್ಲದೇ ಪಂದ್ಯದ ವೇಳೆ ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳು ಧೋನಿ ಧೋನಿ ಎಂದು ಘೋಷಣೆ ಕೂಗಿದ್ದಾರೆ. ಈ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

https://twitter.com/8pareek26/status/1193579004768522240

Share This Article
Leave a Comment

Leave a Reply

Your email address will not be published. Required fields are marked *