ನವದೆಹಲಿ: ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಈ ಬಾರಿಯ ಐಪಿಎಲ್ ಅವರ ಕ್ರಿಕೆಟ್ ಜೀವನದ ಕೊನೆಯ ಐಪಿಎಲ್ ಸರಣಿಯೇ ಎಂಬ ಪ್ರಶ್ನೆ ಈಗ ಎದ್ದಿದೆ.
Advertisement
ಈ ಬಾರಿಯ ಐಸಿಸಿ ಟಿ-20 ಕ್ರಿಕೆಟ್ ಪಂದ್ಯಗಳಿಗಾಗಿ ಬಿಸಿಸಿಐ ಈಗಾಗಲೇ ಟೀಂ ಇಂಡಿಯಾವನ್ನು ಬಿಡುಗಡೆ ಮಾಡಿದ್ದು, ಭಾರತ ತಂಡದ ಮೆಂಟರ್ ಆಗಿ ಎಂ.ಎಸ್. ಧೋನಿಯನ್ನು ಆಯ್ಕೆ ಮಾಡಲಾಗಿದೆ. ಇದನ್ನೂ ಓದಿ: ಐದನೇ ಟೆಸ್ಟ್ ಪಂದ್ಯ ರದ್ದು- ಕಾಟಕೊಟ್ಟ ಕೊರೊನಾ
Advertisement
Advertisement
ಭಾರತ ತಂಡದ ಯಶಸ್ವಿ ಮಾಜಿ ನಾಯಕ ಧೋನಿ ಎಲ್ಲ ಮಾದರಿಯ ಅಂತರಾಷ್ಟ್ರಿಯ ಕ್ರಿಕೆಟ್ ಪಂದ್ಯಗಳಿಗೆ 2020ರ ಆಗಸ್ಟ್ 15 ರಂದು ನಿವೃತ್ತಿ ಹೇಳಿದ್ದರು. ಕೇವಲ ಐಪಿಎಲ್ ಪಂದ್ಯಗಳನ್ನು ಮಾತ್ರ ಆಡುತ್ತಿದ್ದ ಧೋನಿ ಇದೀಗ ಇಂಡಿಯನ್ ಪ್ರೀಮಿಯರ್ ಲೀಗ್‍ಗೂ ವಿದಾಯ ಹೇಳಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತೀವೆ. ಬಿಸಿಸಿಐ ಧೋನಿಯನ್ನು ಟಿ-20 ವಿಶ್ವಕಪ್‍ನಲ್ಲಿ ಟೀಂ ಇಂಡಿಯಾದ ಮೆಂಟರ್ ಆಗಿ ಆಯ್ಕೆ ಮಾಡಿದ ಹಿನ್ನಲೆಯಲ್ಲಿ ಈಗ ಈ ವಿಚಾರ ಚರ್ಚೆ ಆಗುತ್ತಿದೆ. ಇದನ್ನೂ ಓದಿ: ಟೀಂ ಇಂಡಿಯಾ ಮೆಂಟರ್ ಸ್ಥಾನ ಸಿಗುತ್ತಿದ್ದಂತೆ ಧೋನಿಗೆ ಸ್ವಹಿತಾಸಕ್ತಿ ಸಂಕಷ್ಟ
Advertisement
ಬಿಸಿಸಿಐ ನಿಯಮದ ಪ್ರಕಾರ ಒಬ್ಬರು ಒಂದೇ ಹುದ್ದೆಯಲ್ಲಿರಬೇಕು. ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿರುವ ಧೋನಿ ಈಗ ಟೀಂ ಇಂಡಿಯಾದ ಮೆಂಟರ್ ಕೂಡ ಆಗಿದ್ದಾರೆ. ಮೂಲಗಳ ಪ್ರಕಾರ ಈ ಐಪಿಎಲ್ ಪಂದ್ಯದ ನಂತರ ಧೋನಿ ನಾಯಕನ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಟೀಂ ಇಂಡಿಯಾದ ಮೆಂಟರ್ ಆಗಿ ಕಾರ್ಯ ನಿರ್ವಸುತ್ತಾರೆ ಎಂದು ತಿಳಿದು ಬಂದಿದೆ. ಒಂದಮ್ಮೋ ಇದು ನಿಜವಾದರೆ ಈ ಬಾರಿಯ ಐಪಿಎಲ್ ಧೋನಿಯ ಕೊನೆಯ ಐಪಿಎಲ್ ಆಗಲಿದ್ದು, ಅಭಿಮಾನಿಗಳಿಗೆ ನಿರಾಸೆ ಮೂಡಿಸುವುದು ಸುಳ್ಳಲ್ಲ.