ಶ್ರೀನಗರ: ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಸೇನಾ ಕರ್ತವ್ಯದಲ್ಲಿ ತಮ್ಮ ಕಾರ್ಯವನ್ನು ಆರಂಭಿಸಿದ್ದಾರೆ. ಇದರ ನಡುವೆ ಸೇನಾ ಕರ್ತವ್ಯಕ್ಕೆ ತೆರಳಿದ ಬಳಿಕ ಧೋನಿರ ಮೊದಲ ಫೋಟೋ ಭಾರೀ ವೈರಲ್ ಆಗಿದೆ.
ಫೋಟೋದಲ್ಲಿ ಸೇನಾ ಸಮವಸ್ತ್ರ ಧರಿಸಿರುವ ಧೋನಿ ಬ್ಯಾಟಿನ ಮೇಲೆ ಸಹಿ ಹಾಕುತ್ತಿರುವುದನ್ನು ಕಾಣಬಹುದಾಗಿದೆ. ಧೋನಿ ನಮ್ಮ ಬೆಟಾಲಿಯನ್‍ಗೆ ಸೇರ್ಪಡೆಯಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. 106ನೇ ಟೆರಿಟೋರಿಯಲ್ ಆರ್ಮಿ ಬೆಟಾಲಿಯನ್ ಪ್ಯಾರಾ ಕಮಾಂಡೋ ಯೂನಿಟ್ ನಲ್ಲಿ ಧೋನಿ ಕಾರ್ಯ ನಿರ್ವಹಿಸುತ್ತಿದ್ದಾರೆ.
Advertisement
Advertisement
ಇದರೊಂದಿಗೆ ಧೋನಿ ಸೈನಿಕರಾಗಿ ತೆರಳಿರುವುದರಿಂದ ಅವರ ರಕ್ಷಣೆಯ ಬಗ್ಗೆ ಕೆಲವರು ಆತಂಕ ವ್ಯಕ್ತಪಡಿಸಿದ್ದರು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಸೇನಾ ಮುಖ್ಯಸ್ಥರು, ಯಾವುದೇ ಪ್ರಜೆ ಮಿಲಿಟರಿ ಸಮವಸ್ತ್ರ ಧರಿಸಿ ಕರ್ತವ್ಯ ಮಾಡಲು ಬಯಸಿದಾಗ ಅವರಿಗೆ ನೀಡಲಾಗುವ ಕಾರ್ಯವನ್ನು ಪೂರೈಸಲು ಅಗತ್ಯ ತರಬೇತಿ ನೀಡಲಾಗಿರುತ್ತದೆ. ಧೋನಿ ಅವರು ಕೂಡ ತಮ್ಮ ಕಾರ್ಯವನ್ನು ಪೂರ್ಣಗೊಳಿಸಲು ಬೇಕಾದ ತರಬೇತಿಯನ್ನು ಕೈಗೊಂಡಿದ್ದಾರೆ ಎಂದಿದ್ದಾರೆ.
Advertisement
ಧೋನಿ ಅವರು ಮಂಗಳವಾರದಿಂದ ಸೇನಾ ಕರ್ತವ್ಯಕ್ಕೆ ತೆರಳಿದ್ದಾರೆ. ವೆಸ್ಟ್ ಇಂಡೀಸ್ ಪ್ರವಾಸದಿಂದ ರಜೆ ಪಡೆದುಕೊಂಡಿರುವ ಧೋನಿ ಇಂದಿನಿಂದ ಆಗಸ್ಟ್ 15ರವರೆಗೆ ಕಾಶ್ಮೀರದಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಈ ಬಾರಿಯ ಸ್ವತಂತ್ರ ದಿನಾಚರಣೆಯನ್ನು ಧೋನಿ ಸೈನಿಕರೊಂದಿಗೆ ಆಚರಿಸಲಿದ್ದಾರೆ. ಭಾರತೀಯ ಸೇನೆಯ ಪ್ಯಾರಾಚೂಟ್ ರೆಜಿಮೆಂಟ್‍ನ ಟೆರಿಟೊರಿಯಲ್ ಅರ್ಮಿ ಯೂನಿಟ್‍ನಲ್ಲಿ 38 ವರ್ಷದ ಧೋನಿ ಅವರಿಗೆ 2011 ರಲ್ಲಿ ಗೌರವ ಲೆಫ್ಟಿನೆಂಟ್ ಕರ್ನಲ್ ಹುದ್ದೆ ನೀಡಲಾಗಿತ್ತು. ವಿಶೇಷ ಎಂದರೆ 2015 ರಲ್ಲಿ ಆಗ್ರಾದಲ್ಲಿ ಪ್ಯಾರಾಚೂಟ್ ರೆಜಿಮೆಂಟ್ ಸೇನಾ ತಂಡದೊಂದಿಗೆ ಧೋನಿ ತರಬೇತಿ ಪಡೆದಿದ್ದರು.