ಚೆನ್ನೈ: ಸದ್ಯ ಕ್ರಿಕೆಟ್ ಅಭಿಮಾನಿಗಳು 2025ರ ಐಪಿಎಲ್‌ಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ಈ ಸಂದರ್ಭದಲ್ಲಿ ಕ್ಯಾಪ್ಟನ್ ಕೂಲ್ ಎಂ.ಎಸ್ ಧೋನಿ (MS Dhoni) ನೆಟ್ ಪ್ರ್ಯಾಕ್ಟೀಸ್ ವೇಳೆ ಹೆಲಿಕಾಪ್ಟರ್ ಶಾಟ್ ಹೊಡೆದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಇತ್ತೀಚಿಗಷ್ಟೇ ತಮಿಳುನಾಡಿನ ಚೆಪುವಾಕ್ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಇಂಟ್ರಾ-ಸ್ಕ್ವಾಡ್ ಪಂದ್ಯವನ್ನು ಆಯೋಜಿಸಲಾಗಿತ್ತು. ಈ ವೇಳೆ ಮಥೀಷ ಪತಿರಾನ ಅವರ ಎಸೆತಕ್ಕೆ ಧೋನಿ ಹೆಲಿಕಾಪ್ಟರ್ ಶಾಟ್ ಬಾರಿಸಿದರು. ಬಾಲ್ ಅಂಪೈರ್ ತಲೆಯ ಮೇಲಿಂದ ಹಾದು ಸಿಕ್ಸ್ ಹೋಯಿತು. ಇದನ್ನು ಕಂಡ ಆರ್.ಅಶ್ವಿನ್ ಒಂದು ಕ್ಷಣ ದಿಗ್ಭ್ರಮೆಗೊಂಡರು. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಕ್ರೀಡಾ ಅಭಿಮಾನಿಗಳು ಧೋನಿಯ ಆಟಕ್ಕೆ ಮಾರುಹೋಗಿದ್ದಾರೆ. 2025ರ ಐಪಿಎಲ್ ಎಂ.ಎಸ್ ಧೋನಿಯ ಕೊನೆಯ ಟೂರ್ನಿ ಎಂದುಕೊಂಡಿರುವ ಅಭಿಮಾನಿಗಳಲ್ಲಿ ಈ ವಿಡಿಯೋ ಇನ್ನಷ್ಟು ಕೂತುಹಲವನ್ನು ಮೂಡಿಸಿದೆ.ಇದನ್ನೂ ಓದಿ: ನಾಗ್ಪುರ ಹಿಂಸಾಚಾರ – ಮಾಸ್ಟರ್‌ಮೈಂಡ್ ಫಹೀಮ್ ಖಾನ್ ಬಂಧನ
7️⃣ on L♾️P 🦁🚁#WhistlePodu #Yellove 🦁💛 pic.twitter.com/TDWRLfoqNN
— Chennai Super Kings (@ChennaiIPL) March 19, 2025
ಮಾ.22ರಂದು ಆರಂಭವಾಗಲಿರುವ 2025ರ ಐಪಿಎಲ್ ಸೀಸನ್‌ಗಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈಗಾಗಲೇ ಪ್ರ್ಯಾಕ್ಟೀಸ್ ಆರಂಭಿಸಿದ್ದು, ಧೋನಿಯೂ ಕೂಡ ತಯಾರಿ ನಡೆಸುತ್ತಿದ್ದಾರೆ.
ಈ ಕುರಿತು ಸಿಎಸ್‌ಕೆ ತಂಡದ ಮಾಜಿ ಆಟಗಾರ ಹರ್ಭಜನ್ ಸಿಂಗ್ ಮಾತನಾಡಿ, 2025ರ ಐಪಿಎಲ್‌ನಲ್ಲಿ ಧೋನಿ ಅಬ್ಬರದ ಆಟವನ್ನು ಆಡಲಿದ್ದಾರೆ. ಈ ಬಾರಿ ಫಿಟ್ ಆಗಿರಲು ಧೋನಿ ಕಳೆದ 10 ತಿಂಗಳಿನಿಂದ ಶ್ರಮಿಸುತ್ತಿದ್ದಾರೆ. ಇನ್ನೂ ಕಳೆದ 2-3 ತಿಂಗಳಿನಿಂದ ಐಪಿಎಲ್‌ಗಾಗಿ ಧೋನಿ ತಯಾರಿ ನಡೆಸುತ್ತಿದ್ದಾರೆ. ದಿನಕ್ಕೆ 2-3 ಗಂಟೆಗಳ ಕಾಲ ಬ್ಯಾಟಿಂಗ್ ಮಾಡುತ್ತಾರೆ. ಈ ವಯಸ್ಸಿನಲ್ಲಿಯೂ ಮೈದಾನಕ್ಕಿಳಿಯುವಾಗ ಹುಮ್ಮಸ್ಸಿನಲ್ಲಿ ಇರುತ್ತಾರೆ ಎಂದರು.
ರುತುರಾಜ್ ಗಾಯಕ್ವಾಡ್ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮಾ.23 ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಐಪಿಎಲ್‌ನ ಮೊದಲ ಪಂದ್ಯ ಆಡಲಿದೆ.ಇದನ್ನೂ ಓದಿ: ಡಿಕೆಶಿ ಕನಸಿಗೆ ತಣ್ಣೀರೆರಚಿದ ಕೇಂದ್ರ ಸರ್ಕಾರ – ರಾಮನಗರ ಜಿಲ್ಲೆಗೆ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣಕ್ಕೆ ಕೇಂದ್ರ ತಡೆ