ಪುಣೆ: ಎರಡು ವರ್ಷಗಳ ಬಳಿಕ ಐಪಿಎಲ್ ಗೆ ಕಮ್ ಬ್ಯಾಕ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಪ್ಲೇ ಆಫ್ ಪ್ರವೇಶಿಸಿದೆ. ಈ ವೇಳೆಯೇ ಚೆನ್ನೈ ತಂಡದ ನಾಯಕ ಎಂಎಸ್ ಧೋನಿ ಐಪಿಎಲ್ ನಿವೃತ್ತಿ ಸೂಚನೆ ನೀಡಿದ್ದಾರೆ.
ತಂಡದ ಪ್ರದರ್ಶನ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಧೋನಿ, ಚೆನ್ನೈ ತಂಡದ ಫ್ರಾಚೈಂಸಿಗಳು ಆಟಗಾರರಿಗೆ ಉತ್ತಮ ಅವಕಾಶ ನೀಡಿದ್ದಾರೆ. ಹಾಗೆಯೇ ತಂಡದ ಹಲವು ಆಟಗಾರರು ಮುಂದಿನ ಎರಡು ವರ್ಷಗಳ ಬಳಿಕ ಟಿ20 ಮಾದರಿಯಲ್ಲಿ ಆಡುವುದು ಕಷ್ಟಸಾಧ್ಯ. ಆಟಗಾರರು ಶಾರ್ಟ್ ಫಾರ್ಮ್ ಗೇಮ್ ಗೆ ಹೊಂದಾಣಿಕೆ ಸಹ ಆಗುವುದಿಲ್ಲ. ಚೆನ್ನೈ 10 ವರ್ಷ ಪೂರೈಸುವ ವೇಳೆ ಆಟಗಾರರಿಗೆ ಉತ್ತಮ ನೆನಪಿರುತ್ತದೆ ಎಂದು ಹೇಳಿದ್ದಾರೆ.
36 ವರ್ಷದ ಧೋನಿ ಅವರ ಈ ಹೇಳಿಕೆಯಿಂದ ಸದ್ಯ ಚೆನ್ನೈ ತಂಡ ಐಪಿಎಲ್ ನಲ್ಲಿ 10 ವರ್ಷ ಪೂರ್ಣಗೊಳಿಸಿದ ಬಳಿಕ ಐಪಿಎಲ್ ನಿಂದ ನಿವೃತ್ತಿ ಹೇಳಲಿದ್ದಾರೆ ಎಂಬ ಮಾತು ಕೇಳಿ ಬಂದಿದೆ.
ಇದೇ ವೇಳೆ ಟೂರ್ನಿಯ ಆರಂಭದಲ್ಲಿ ಚೆನ್ನೈ ತಂಡದ ವಿರುದ್ಧ ಕೇಳಿ ಬಂದ ವಿಮರ್ಶೆಯಲ್ಲಿ ತಂಡದ ಬಹುತೇಕರು ಹಿರಿಯ ಆಟಗಾರರಿಗೆ ಅವಕಾಶ ನೀಡಲಾಗಿದೆ ಎನ್ನಲಾಗಿತ್ತು. ಈ ಕುರಿತು ಪ್ರತಿಕ್ರಿಯೆ ನೀಡಿರುವ ಧೋನಿ, ತಂಡದ ಆಟಗಾರರು ಪರಸ್ಪರ ಉತ್ತಮ ಭಾವನೆ ಹೊಂದಿದ್ದಾರೆ. ಅದ್ದರಿಂದ ಪಂದ್ಯವನ್ನು ಸುಲಭವಾಗಿ ತಿಳಿಯಲು ಸಾಧ್ಯ. ಅಲ್ಲದೇ ಇದು ತಂಡದ ನಾಯಕನ ಕಾರ್ಯ ಸುಲಭವಾಗಿಸುತ್ತದೆ. ಒಂದು ಉತ್ತಮ ತಂಡ ಆಯ್ಕೆ ಮಾಡದಿದ್ದರೆ, ಉತ್ತಮ ಪ್ರದರ್ಶನ ನೀಡುವುದು ಕಷ್ಟವಾಗುತ್ತದೆ. ತಂಡದ ಆಟಗಾರರು ಫಾರ್ಮ್ ಹೊಂದಿರುವಂತೆ ನೋಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ಧೋನಿ ತಮ್ಮ ವೃತ್ತಿ ಜೀವನದಲ್ಲಿ ಟೀಂ ಇಂಡಿಯಾ ಹಲವು ಕಪ್ ಗಳನ್ನು ಗೆಲ್ಲಲು ಕಾರಣರಾಗಿದ್ದು. ಅಲ್ಲದೇ ಎರಡು ವಿಶ್ವಕಪ್ ಗೆದ್ದ ತಂಡದ ನಾಯಕತ್ವ ವಹಿಸಿದ್ದರು. ಐಪಿಎಲ್ ನಲ್ಲಿ ಚೆನ್ನೈ 2 ಬಾರಿ ಕಪ್ ಹಾಗೂ ಮೂರು ಬಾರಿ ರನ್ನರ್ ಆಪ್ ಸ್ಥಾನರೆಗೂ ಮುನ್ನಡೆಸಿದ್ದರು. ಎರಡು ವರ್ಷಗಳ ನಿಷೇಧ ಬಳಿಕ ಈ ಬಾರಿ ಟೂರ್ನಿಯಲ್ಲಿ ಭಾಗಹಿಸಿರುವ ಚೆನ್ನೈ ಕಪ್ ಗೆಲ್ಲುವ ಫೇವರೆಟ್ ತಂಡವಾಗಿದೆ. ಇದನ್ನು ಓದಿ: ಟಿ20ಗೆ ಧೋನಿ ನಿವೃತ್ತಿ ಹೇಳೋದು ಉತ್ತಮ: ವಿವಿಎಸ್ ಲಕ್ಷ್ಮಣ್
ಧೋನಿ ಈಗಾಗಲೇ ಟೆಸ್ಟ್ ನಿವೃತ್ತಿಯನ್ನು ಘೋಷಣೆ ಮಾಡಿದ್ದಾರೆ. ಧೋನಿ ಈ ಹಿಂದೆಯೂ ನಿವೃತ್ತಿ ಬಗ್ಗೆ ಪ್ರಶ್ನಿಸಿದ ವೇಳೆಯೂ ತಮ್ಮ ದೇಹ ಆಟಕ್ಕೆ ಸಹಕಾರ ನೀಡುವವರೆಗೂ ಮುಂದುವರೆಯುವುದಾಗಿ ಹೇಳಿದ್ದರು. ಧೋನಿ ಸದ್ಯ ನಿವೃತ್ತಿಯ ಬಗ್ಗೆ ಸ್ಪಷ್ಟ ಹೇಳಿಕೆ ನೀಡದೆ ಇದ್ದರೂ ಅವರ ಈ ಹೇಳಿಕೆಗಳು ನಿವೃತ್ತಿಗೆ ಪುಷ್ಠಿ ನೀಡುತ್ತಿವೆ ಎನ್ನಬಹುದು. ಇದನ್ನು ಓದಿ: ಧೋನಿ ಸುತ್ತಲೂ ಹೊಟ್ಟೆ ಕಿಚ್ಚು ಪಡೋ ಜನರಿದ್ದಾರೆ: ರವಿ ಶಾಸ್ತ್ರಿ
https://www.instagram.com/p/BjDCPRqHu-p/?utm_source=ig_embed