ಮೆಲ್ಬರ್ನ್: ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಉತ್ತಮ ಬ್ಯಾಟಿಂಗ್ ನಡೆಸಿದ ತಮ್ಮ ವಿರುದ್ಧ ಟೀಕೆ ಮಾಡಿದವರಿಗೆ ಉತ್ತರಿಸಿದ್ದ ಧೋನಿ ಪಂದ್ಯದ ಬಳಿಕವೂ ಹಾಸ್ಯ ಚಟಾಕಿ ಹಾರಿಸಿ ಟೀಕಕಾರರಿಗೆ ಟಾಂಗ್ ಕೊಟ್ಟಿರುವ ಘಟನೆ ನಡೆದಿದೆ.
ಆಸೀಸ್ ವಿರುದ್ಧ 3ನೇ ಏಕದಿನ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿ ಗೆದ್ದು ದಾಖಲೆ ನಿರ್ಮಿಸಿದ್ದ ಟೀಂ ಇಂಡಿಯಾ ಆಟಗಾರರು ಪಂದ್ಯದ ಬಳಿಕ ಸಂಭ್ರಮದಲ್ಲಿ ತೊಡಗಿದ್ದರು. ಈ ವೇಳೆ ಎಲ್ಲಾ ಆಟಗಾರರು, ಸಿಬ್ಬಂದಿಗೂ ಶುಭಾಶಯ ತಿಳಿಸುತ್ತಿದ್ದ 38 ವರ್ಷದ ಧೋನಿ ತಂಡದ ಬ್ಯಾಟಿಂಗ್ ಕೋಚ್ ಬಂದ ಕೂಡಲೇ ತಮ್ಮ ಕೈಯಲ್ಲಿದ್ದ ಚೆಂಡನ್ನು ಕೋಚ್‍ಗೆ ನೀಡಿದರು.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ. ‘ಬಾಲ್ ತೆಗೆದುಕೊಳ್ಳಿ, ಇಲ್ಲಂದ್ರೆ ನಿವೃತ್ತಿ ತೆಗೆದುಕೊಳ್ಳುತ್ತಿದ್ದಾರೆ ಎಂದು ಹೇಳುತ್ತಾರೆ’ ಎಂದು ಕೋಚ್ ಸಂಜಯ್ ಬಂಗರ್ ಅವರಿಗೆ ಹಾಸ್ಯ ಚಟಾಕಿ ಹಾರಿಸಿರುವ ಮಾತುಗಳು ವಿಡಿಯೋದಲ್ಲಿ ದಾಖಲಾಗಿದೆ.
ಪಂದ್ಯದ ಬಳಿಕ ಮಾತನಾಡಿದ ಧೋನಿ, ನಾನು ಯಾವ ಕ್ರಮಾಂಕದಲ್ಲಿ ಆಡಬೇಕು ಎನ್ನುವುದು ಸಮಸ್ಯೆ ಅಲ್ಲ. 14 ವರ್ಷಗಳು ತಂಡದ ಪರ ಆಡಿದ ಬಳಿಕ ನಾನು 6ನೇ ಕ್ರಮಾಂಕ ಬೇಡ ಎಂದು ಹೇಳಲು ಸಾಧ್ಯವಿಲ್ಲ. ನಾನು ಯಾವುದೇ ಕ್ರಮಾಂಕ ಆದರೂ ಆಡಲು ಇಷ್ಟ ಪಡುತ್ತೇನೆ ಎಂದು ತಿಳಿಸಿದ್ದರು.
See #Dhoni when gave ball to the coach and said " Ball lelo nahi to bolega retirement lerahe ho" ????
even even #Dhoni wants to play more. #AUSvIND #INDvAUS #Chahal #Jadhav #WhistlePodu@ChennaiIPL pic.twitter.com/B5dMVQEzhR
— Mango Sheikh (@mango_sheikh) January 18, 2019
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv