ವಿಂಡೀಸ್, ಆಸೀಸ್ ಟಿ20 ಟೂರ್ನಿಗೆ ಎಂಎಸ್‍ಡಿ ಡ್ರಾಪ್-ಧೋನಿ ವೃತ್ತಿ ಜೀವನದ ಅಂತ್ಯವೇ?

Public TV
2 Min Read
MS DHONI 2

ಮುಂಬೈ: ಬಿಸಿಸಿಐ ಆಯ್ಕೆ ಸಮಿತಿಯ ಮುಖ್ಯಸ್ಥ ಎಂಎಸ್‍ಕೆ ಪ್ರಸಾದ್ ವೆಸ್ಟ್ ಇಂಡೀಸ್, ಆಸೀಸ್ ವಿರುದ್ಧದ ಟಿ20 ಸರಣಿಗೆ ತಂಡದಿಂದ ಧೋನಿ ಅವರನ್ನು ಡ್ರಾಪ್ ಮಾಡಿರುವುದು ಅವರ ಟಿ20 ವೃತ್ತಿ ಜೀವನದ ಅಂತ್ಯವಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಆದರೆ ಟೀಂ ಇಂಡಿಯಾ ಆಡಲಿರುವ ಮುಂದಿನ 6 ತಿಂಗಳ ಟಿ20 ಟೂರ್ನಿಗಳ ವೇಳಾಪಟ್ಟಿ ಗಮನಿಸಿದರೆ ಈ ಅನುಮಾನ ವ್ಯಕ್ತವಾಗುತ್ತದೆ.

ಹಲವು ಟಿ20 ಸರಣಿಯಗಳಲ್ಲಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ಧೋನಿ ಅವರಿಗೆ ಮುಂದಿನ ಟೂರ್ನಿಗೆ ವಿಶ್ರಾಂತಿ ನೀಡಲಾಗಿದ್ದು, ತಂಡಕ್ಕೆ 2ನೇ ವಿಕೆಟ್ ಕೀಪರ್ ಹುಡುಕಾಟ ನಡೆದಿದೆ ಎಂದು ಎಂಎಸ್‍ಕೆ ಪ್ರಸಾದ್ ತಿಳಿಸಿದ್ದು, ಇದೇ ವೇಳೆ ಧೋನಿ ಟಿ20 ವೃತ್ತಿ ಜೀವನದ ಅಂತ್ಯದ ಕುರಿತ ಪ್ರಶ್ನೆಗೆ ಉತ್ತರಿಸಿ, ಸದ್ಯಕ್ಕೆ ಅಂತಹ ಯಾವುದೇ ಚಿಂತನೆ ಇಲ್ಲ. ಮುಂದಿನ ಟೂರ್ನಿಯಲ್ಲಿ ತಂಡಕ್ಕೆ 2ನೇ ವಿಕೆಟ್ ಕೀಪರ್ ಅಗತ್ಯವಿರುವುದರಿಂದ ಉತ್ತಮ ಆಟಗಾರರ ಆಯ್ಕೆಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಬಿಸಿಸಿಐ ಶುಕ್ರವಾರ ಪ್ರಕಟಿಸಿರುವ ಆಟಗಾರರ ಪಟ್ಟಿಯಲ್ಲಿ ಟಿ20 ಟೂರ್ನಿಗೆ ರಿಷಭ್ ಪಂತ್ ಹಾಗೂ ದಿನೇಶ್ ಕಾರ್ತಿಕ್ ಅವರನ್ನು ಆಯ್ಕೆ ಮಾಡಲಾಗಿದೆ. ಆಸೀಸ್ ವಿರುದ್ಧ ಟಿ20 ಕ್ರಿಕೆಟ್ ಟೂರ್ನಿ ನವೆಂಬರ್ 21 ರಂದು ಆರಂಭವಾಗಲಿದೆ.

ಧೋನಿ ಇದುವರೆಗೂ ಪ್ರಸಕ್ತ ವರ್ಷದಲ್ಲಿ 7 ಟಿ20 ಪಂದ್ಯಗಳನ್ನು ಮಾತ್ರ ಆಡಿದ್ದಾರೆ. ಅಲ್ಲದೇ ವಿಂಡೀಸ್ ಟೂರ್ನಿಯ ಬಳಿಕ ಟೀಂ ಇಂಡಿಯಾ ಆಸೀಸ್ ಪ್ರವಾಸದಲ್ಲಿ ಜನವರಿಯಲ್ಲಿ ಏಕದಿನ ಕ್ರಿಕೆಟ್ ಪಂದ್ಯಗಳನ್ನು ಆಡಲಿದೆ. ಇದರ ನಡುವೆ ಧೋನಿ ದೇಶಿಯ ಕ್ರಿಕೆಟ್ ಟೂರ್ನಿ ವಿಜಯ್ ಹಜಾರೆ ಟ್ರೋಫಿಯಲ್ಲಿಯೂ ಭಾಗವಹಿಸುತ್ತಿಲ್ಲ. ಉಳಿದಂತೆ ದೇವಧರ್ ಟ್ರೋಫಿ ಈಗಾಗಲೇ ಅಂತ್ಯವಾಗಿದೆ. 37 ವರ್ಷದ ಧೋನಿ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ವಿಕೆಟ್ ಹಿಂದೆ ತಂಡಕ್ಕೆ ನೆರವಾದರೂ, ಬ್ಯಾಟಿಂಗ್‍ನಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲರಾಗಿದ್ದರು. ಧೋನಿ ಇದುವರೆಗೂ 93 ಟಿ20 ಪಂದ್ಯಗಳನ್ನು ಆಡಿದ್ದು, 127.09 ಸ್ಟ್ರೈಕ್ ರೇಟ್‍ನಲ್ಲಿ 1,487 ರನ್ ಸಿಡಿಸಿದ್ದಾರೆ.

ಆಯ್ಕೆ ಸಮಿತಿಯ ಈ ನಿರ್ಣಯ ಧೋನಿ ಅವರನ್ನು ಒಂದು ಮಾದರಿಯ ಕ್ರಿಕೆಟ್ ಮಾತ್ರ ಸೀಮಿತ ಮಾಡುವ ಮುನ್ಸೂಚನೆಯೇ ಎಂಬ ಚರ್ಚೆಗೆ ಕಾರಣವಾಗಿದೆ. ಉಳಿದಂತೆ ನಿಗದಿತ ವೇಳಾಪಟ್ಟಿಯಂತೆ ಮುಂದಿನ 6 ತಿಂಗಳಲ್ಲಿ ಒಂದು ಟಿ20 ಟೂರ್ನಿಯಲ್ಲಿ ಮಾತ್ರ ಆಡಲು ಧೋನಿ ಅವರಿಗೆ ಅವಕಾಶವಿದ್ದು, ನ್ಯೂಜಿಲೆಂಡ್ ವಿರುದ್ಧ ಫೆಬ್ರವರಿಯಲ್ಲಿ ಮೂರು ಟಿ20 ಪಂದ್ಯಗಳು ನಡೆಯಲಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *