ಮುಂಬೈ: ಎಂಎಸ್ ಧೋನಿ (Dhoni) ಇತ್ತೀಚೆಗೆ ಬಿಜೆಪಿ (BJP) ನಾಯಕಿ ಖುಷ್ಬೂ ಸುಂದರ್ (Khushbu Sundar) ಅವರ ಅತ್ತೆಯವರನ್ನು ಭೇಟಿಯಾಗಿದ್ದಾರೆ.
ದೇಶದಲ್ಲಿ, ಒಂಬತ್ತರಿಂದ ತೊಂಬತ್ತು ವರ್ಷ ವಯಸ್ಸಿನವರೆಗಿನ ಎಲ್ಲರೂ ಧೋನಿಯನ್ನು ಮೆಚ್ಚುತ್ತಾರೆ. ಯಾಕೆಂದರೆ ಧೋನಿ ಭಾರತದ ಕ್ರಿಕೆಟ್ ಅಭಿಮಾನಿಗಳ ಹೃದಯಸ್ಪರ್ಶಿಯಾಗಿದ್ದಾರೆ. ಆದರಲ್ಲೂ ಚೆನ್ನೈನಲ್ಲಿ (Chennai) ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕನಿಗೆ ಇನ್ನೂ ಹೆಚ್ಚಿನ ವಿಶೇಷ ಸ್ಥಾನಮಾನ ನೀಡಲಾಗಿದೆ. ಚೆನ್ನೈ ಸೂಪರ್ ಕಿಂಗ್ಸ್‌ನ (CSK) ನಾಯಕತ್ವ ವಹಿಸಿದ್ದಾಗಿನಿಂದ ಧೋನಿ ಚೆನ್ನೈನೊಂದಿಗಿನ ಪ್ರೀತಿಯ ಸಂಬಂಧವು ಗಾಢವಾಗಿ ಬೆಳೆದಿದೆ.
Advertisement
#ThalaDhoni gets an appreciation hug from a 88-year old fan, director-actor #SundarC’s mom and @khushsundar’s mother-in-law. pic.twitter.com/i84XlNRbCt
— Sreedhar Pillai (@sri50) April 14, 2023
Advertisement
ಖುಷ್ಬೂ ಸುಂದರ್ ಅವರ ಅತ್ತೆಯನ್ನು ಭೇಟಿಯಾಗಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ನಾಯಕಿ ಹಂಚಿಕೊಂಡಿದ್ದಾರೆ. ಅಲ್ಲದೆ ಹೀರೋಗಳನ್ನು ಸೃಷ್ಟಿಸಲಾಗುವುದಿಲ್ಲ, ಅವರು ಹುಟ್ಟುತ್ತಲೇ ಹೀರೋಗಳಾಗಿರುತ್ತಾರೆ. ಧೋನಿ ಅದನ್ನು ಸಾಬೀತು ಪಡಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ. 88ರ ನನ್ನ ಅತ್ತೆಯನ್ನು ಭೇಟಿಯಾಗಿ ನೀವು ಅವರ ಜೀವನಕ್ಕೆ ಅನೇಕ ವರ್ಷಗಳ ಉತ್ತಮ ಆರೋಗ್ಯ ಮತ್ತು ಸಂತೋಷವನ್ನು ಸೇರಿಸಿದ್ದೀರಿ. ಇದಕ್ಕಾಗಿ ನಿಮಗೆ ಧನ್ಯವಾದಗಳು ಎಂದು ಅವರು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಯಾವ ತಂಡದ ಕೋಚ್ ಆಗ್ತೀರಿ – ಅಭಿಮಾನಿಯ ಪ್ರಶ್ನೆಗೆ ಜಾಣ್ಮೆಯ ಉತ್ತರ ಕೊಟ್ಟ ರವಿ ಶಾಸ್ತ್ರಿ
Advertisement
ಈ ನಡುವೆ ಧೋನಿಯ ಕೊನೆಯ ಐಪಿಎಲ್ ಎಂಬ ಮಾತುಗಳು ಕೇಳಿ ಬರುತ್ತಿವೆ. ಧೋನಿ ನಂತರ ಋತುರಾಜ್ ಗಾಯಕ್ವಾಡ್ ಸಿಎಸ್‍ಕೆ ನಾಯಕರಾಗಬಹುದು. ರವೀಂದ್ರ ಜಡೇಜಾ (Ravindra Jadeja) ಜೊತೆಗೆ ಬೆನ್ ಸ್ಟೋಕ್ಸ್ ಹೆಸರು ಪಟ್ಟಿಯಲ್ಲಿದೆ. ಇದನ್ನೂ ಓದಿ: ಕೊನೆಯವರೆಗೂ ಹೋರಾಡಿದ ರಿಂಕು – ಹೈದರಾಬಾದ್‌ಗೆ 23 ರನ್‌ಗಳ ಜಯ