ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಆಟಗಾರರಾದ ಮಾಜಿ ನಾಯಕ ಎಂಎಸ್ ಧೋನಿ, ಹಾರ್ದಿಕ್ ಪಾಂಡ್ಯ, ಕೆಎಲ್ ರಾಹುಲ್ ಕ್ರಿಕೆಟ್ ಜೊತೆ ಉತ್ತಮ ವಾಲಿಬಾಲ್ ಆಟಗಾರರಾಗಿದ್ದಾರೆ ಎಂದು ಕೋಲ್ಕತ್ತಾ ಥಂಡರ್ಬೋಲ್ಟ್ಸ್ ನಾಯಕ ಅಶ್ವಲ್ ರೈ ಅಭಿಪ್ರಾಯಪಟ್ಟಿದ್ದಾರೆ.
ಮುಂಬರುವ (ಪಿವಿಎಲ್) ಪ್ರೈಮ್ ವಾಲಿಬಾಲ್ ಲೀಗ್‍ನ ಪಂದ್ಯಾವಳಿಯ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೋಲ್ಕತ್ತಾ ಥಂಡರ್ಬೋಲ್ಟ್ಸ್ (ಪಿವಿಎಲ್) ವಾಲಿಬಾಲ್ ಲೀಗ್ ಅಭಿಯಾನವನ್ನು ಮುಂದಿನ ವಾರ ಸೋಮವಾರದಿಂದ ಪ್ರಾರಂಭಿಸಲಿದೆ.
ಧೋನಿ ಮತ್ತು ಪಾಂಡ್ಯ ಪಾಸಿಂಗ್‍ನಲ್ಲಿ ಉತ್ತಮವಾಗಿ ಕಾಣುತ್ತಾರೆ. ರಾಹುಲ್ ಉತ್ತಮ ಹೊಡೆತಗಾರನಾಗಿ ಕಾಣಿಸುತ್ತಾರೆ. ನಾನು ಈ ಹಿಂದೆ ಅವರು ದುಬೈನ ಬೀಚ್‍ವೊಂದರಲ್ಲಿ ವಾಲಿಬಾಲ್ ಆಡುವ ವೀಡಿಯೋವನ್ನು ನಾನು ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇನೆ. ಅವರೊಂದಿಗೆ ವಾಲಿಬಾಲ್ ಆಡುವ ಅವಕಾಶ ನಮಗೆ ಸಿಕ್ಕರೆ ಅದು ನಮ್ಮ ಅದೃಷ್ಟ ನಾನು ಇದಕ್ಕಾಗಿ ಕಾತರನಾಗಿದ್ದೇನೆ ಎಂದರು. ಇದನ್ನೂ ಓದಿ: ಐಪಿಎಲ್ ಹರಾಜಿನ ಅಂತಿಮ ಪಟ್ಟಿಯಲ್ಲಿ ಕಾಣಿಸಿಕೊಂಡ ಪಶ್ಚಿಮ ಬಂಗಾಳದ ಕ್ರೀಡಾ ಸಚಿವ
ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧುರವರು ವಾಲಿಬಾಲ್ ಲೀಗ್‍ನ್ನು ಪ್ರಚಾರ ಮಾಡುತ್ತಿದ್ದು, ಅವರು ನಮ್ಮನ್ನು ಮೈದಾನದಲ್ಲಿ ಭೇಟಿಯಾಗಿ ಎಲ್ಲರೊಂದಿಗೆ ಮಾತನಾಡಿದರು. ವಾಲಿಬಾಲ್ ಆಟಕ್ಕೆ ಉತ್ತಮ ಗುಣಮಟ್ಟ ಮತ್ತು ಸರಿಯಾದ ರೀತಿಯ ಪ್ರಚಾರವನ್ನು ನೀಡಿದರೆ ಅದು ಕ್ರಿಕೆಟ್ ಮಟ್ಟಕ್ಕೆ ಬರಬಹುದು ಎಂದರು. ಇದನ್ನೂ ಓದಿ: U -19 World Cup 2022: 96 ರನ್‌ಗಳ ಭರ್ಜರಿ ಜಯ, ಫೈನಲಿಗೆ ಭಾರತ
ಎಲ್ಲಾ ಆಟಗಾರರಿಗೆ, ಅವರ ಕ್ರೀಡಾ ಕೌಶಲ್ಯ ಮತ್ತು ಪ್ರದರ್ಶನವನ್ನು ತೋರಿಸಲು ಇದು ಸರಿಯಾದ ವೇದಿಕೆಯಾಗಿದೆ. ಮೊದಲು, ನನಗೆ ಕ್ರೀಡೆಯ ಬಗ್ಗೆ ಅಷ್ಟೊಂದು ಆಸಕ್ತಿ ಇರಲಿಲ್ಲ. ನಂತರ ನಾನು ಕ್ರಿಕೆಟ್ ಮತ್ತು ಫುಟ್‍ಬಾಲ್ ಅನ್ನು ಅನುಸರಿಸಲು ಪ್ರಾರಂಭಿಸಿದೆ. ನಾನು ಪ್ರತಿ ಬಾರಿ ಆಟದ ಮೈದಾನಕ್ಕೆ ಇಳಿದ ಬಳಿಕ ಶ್ರೇಷ್ಠ ಮಟ್ಟದ ಆಟವನ್ನು ಆಡಲು ಶ್ರಮಿಸುತ್ತೇನೆ ಎಂದರು.
ಫೆಬ್ರವರಿ 5 ರಂದು ಪ್ರೈಮ್ ವಾಲಿಬಾಲ್ ಲೀಗ್‍ಗೆ ಚಾಲನೆ ದೊರೆಯಲಿದ್ದು, ಪಂದ್ಯಾವಳಿಯು ಗಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ. ಆರಂಭಿಕ ಪಂದ್ಯದಲ್ಲಿ ಬಲಿಷ್ಠ ಕೊಚ್ಚಿ ಬ್ಲೂ ಸ್ಪೈಕರ್ಸ್ ವಿರುದ್ಧ ಹೈದರಾಬಾದ್ ಬ್ಲಾಕ್ ಹಾಕ್ಸ್ ತಂಡವನ್ನು ಎದುರಿಸಲಿದೆ. ಸ್ಪರ್ಧೆಯ ಫೈನಲ್ ಫೆಬ್ರವರಿ 27 ರಂದು ನಡೆಯಲಿದೆ.
ಪಂದ್ಯಾವಳಿಯು 23 ದಿನಗಳ ವರೆಗೆ ನಡೆಯಲಿದ್ದು, ಒಟ್ಟು 24 ಪಂದ್ಯಗಳು ಟೂರ್ನಿಯಲ್ಲಿ ಕಾಣಸಿಗಲಿದೆ. ಏಳು ಫ್ರಾಂಚೈಸಿಗಳಾದ- ಕ್ಯಾಲಿಕಟ್ ಹೀರೋಸ್, ಕೊಚ್ಚಿ ಬ್ಲೂ ಸ್ಪೈಕರ್ಸ್, ಅಹಮದಾಬಾದ್ ಡಿಫೆಂಡರ್ಸ್, ಹೈದರಾಬಾದ್ ಬ್ಲಾಕ್ ಹಾಕ್ಸ್, ಚೆನ್ನೈ ಬ್ಲಿಟ್ಜ್, ಬೆಂಗಳೂರು ಟಾರ್ಪಿಡೋಸ್ ಮತ್ತು ಕೋಲ್ಕತ್ತಾ ಥಂಡರ್ಬೋಲ್ಟ್ಸ್ ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ.