ಆನ್‌ಫೀಲ್ಡ್‌ ನಲ್ಲೇ ಖಲೀಲ್ ಅಹ್ಮದ್ ವಿರುದ್ಧ ಗರಂ ಆದ ಧೋನಿ – ವೈರಲ್ ವಿಡಿಯೋ

Public TV
1 Min Read
dhoni

ಅಡಿಲೇಡ್: ಆಸ್ಟ್ರೇಲಿಯಾ ವಿರುದ್ಧದ 2ನೇ ಏಕದಿನ ಪಂದ್ಯದ ವೇಳೆ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ತಾಳ್ಮೆ ಕಳೆದು ಕೊಂಡು ಯುವ ಆಟಗಾರ ಖಲೀಲ್ ಅಹ್ಮದ್ ವಿರುದ್ಧ ಕೋಪಗೊಂಡಿರುವ ಘಟನೆ ನಡೆದಿದೆ.

ಅಡಿಲೇಡ್ ಏಕದಿನ ಪಂದ್ಯದ ಅಂತಿಮ ಹಂತದ ಓವರ್ ವೇಳೆ ತಂಡದ ರನ್ ಗಳಿಸುವ ಒತ್ತಡದಲ್ಲಿತ್ತು. ಈ ಹಂತದಲ್ಲಿ ಬೌಂಡರಿ, ಸಿಕ್ಸರ್ ಸಿಡಿಸುವ ಪ್ರಯತ್ನ ನಡೆಸದ ಧೋನಿ, ತಮ್ಮ ಅನುಭವಿ ಆಟದ ಮೂಲಕ ಪ್ರತಿ ಎಸೆತದಲ್ಲಿ 2, 3 ರನ್ ಗಳಿಸಿ ತಂಡವನ್ನು ಗೆಲುವಿನ ಸನಿಹ ಕೊಂಡ್ಯೊಯುವ ಪ್ರಯತ್ನವನ್ನು ಮಾಡಿದ್ದರು.

ಪಂದ್ಯದಲ್ಲಿ ವಾಟರ್ ಬಾಯ್ ಆಗಿದ್ದ ಖಲೀಲ್ ಅಹ್ಮದ್ ಓವರಿನ ವಿರಾಮದ ವೇಳೆ ನೀರಿನ ಬಾಟಲ್ ತರುವ ಸಮಯದಲ್ಲಿ ಪಿಚ್ ಮೇಲೆಯೇ ನಡೆದು ಬಂದರು. ಇದನ್ನು ಕಂಡ ಧೋನಿ ಗರಂ ಆಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕ್ರಿಕೆಟ್ ಅಭಿಮಾನಿಗಳು ತಮ್ಮದೇ ಅಭಿಪ್ರಾಯ ವ್ಯಕ್ತಪಡಿಸಿ ಪ್ರತಿಕ್ರಿಯೆ ನೀಡಿದ್ದಾರೆ.

MS Dhoni dinesh karthik

ಧೋನಿ ಆ ಕ್ಷಣದಲ್ಲಿ ಹೆಚ್ಚು ಕೋಪಗೊಳ್ಳಲು ಕಾರಣವೂ ಇದ್ದು, ಶೂ ಧರಿಸಿದ್ದ ಖಲೀಲ್ ಪಿಚ್ ಮೇಲೆ ನಡೆದ ಪರಿಣಾಮ ಪಿಚ್ ಹಾನಿಗೊಳಗಾಗಿ ಬ್ಯಾಟ್ಸ್ ಮನ್‍ಗೆ ಮಾರಕವಾಗುವ ಸಾಧ್ಯತೆ ಇತ್ತು. ಪರಿಣಾಮ ರನ್ ಸಿಡಿಸುವ ಒತ್ತಡದಲ್ಲಿದ್ದ ಧೋನಿ ಗರಂ ಆಗಿದ್ದರು. ಇದನ್ನು ಮನಗಂಡ ಮತ್ತೊಬ್ಬ ಆಟಗಾರ ಯಜುವೇಂದ್ರ ಚಹಲ್ ದೂರದಿಂದಲೇ ಧೋನಿಗೆ ಹೆಲ್ಮೆಟ್ ಎಸೆದಿರುವುದನ್ನು ವಿಡಿಯೋದಲ್ಲಿ ಕಾರಣಬಹುದಾಗಿದೆ.

ತಮ್ಮ ವಿರುದ್ಧ ಟೀಕೆ ಮಾಡಿದವರಿಗೆ ಬ್ಯಾಟ್ ಮೂಲಕವೇ ತಿರುಗೇಟು ನೀಡಿದ್ದ 37 ವರ್ಷದ ಧೋನಿ, ಅಂತಿಮ ಓವರಿನಲ್ಲಿ ಸಿಕ್ಸರ್ ಸಿಡಿಸಿದ್ದರು. ಅಲ್ಲದೇ ಪಂದ್ಯದಲ್ಲಿ 54 ಎಸೆತಗಳಲ್ಲಿ 55 ರನ್ ಸಿಡಿಸಿ ಆಜೇಯರಾಗಿ ಉಳಿದರು. ಈ ಮೂಲಕ ವಯಸ್ಸಿನ ಕಾರಣ ನೀಡಿ ಟೀಕೆ ಮಾಡುತ್ತಿದ್ದ ಹಲವರಿಗೆ ಉತ್ತರಿಸಿ ಭಾರತಕ್ಕೆ ಗೆಲುವನ್ನು ತಂದುಕೊಟ್ಟಿದ್ದಾರೆ.

https://twitter.com/premchoprafan/status/1085135731457224705?

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *