ಕ್ಯಾಂಡಿ: ಟೀಂ ಇಂಡಿಯಾದ ಮಾಜಿ ನಾಯಕ, ವಿಕೆಟ್ ಕೀಪರ್ ಆಗಿರುವ ಮಹೇಂದ್ರ ಸಿಂಗ್ ಧೋನಿ ಏಕದಿನ ಕ್ರಿಕೆಟ್ ನಲ್ಲಿ ವಿಶ್ವದಾಖಲೆ ಬರೆಯುವ ಹೊಸ್ತಿಲಿನಲ್ಲಿದ್ದಾರೆ.
ಹೌದು. ಇನ್ನು ಒಂದು ಸ್ಟಂಪ್ ಔಟ್ ಮಾಡಿದರೆ ಏಕದಿನ ಕ್ರಿಕೆಟ್ ನಲ್ಲಿ 100 ಸ್ಟಂಪ್ ಮಾಡಿದ ವಿಶ್ವದ ಮೊದಲ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಗೆ ಧೋನಿ ಪಾತ್ರರಾಗಲಿದ್ದಾರೆ.
Advertisement
ಕ್ಯಾಂಡಿಯಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಎರಡನೇ ಪಂದ್ಯದಲ್ಲಿ ಚಹಲ್ ಬೌಲಿಂಗ್ ನಲ್ಲಿ ಗುಣತಿಲಕ ಅವರನ್ನು ಸ್ಟಂಪ್ ಮಾಡುವ ಮೂಲಕ ಈ ವಿಶ್ವದಾಖಲೆ ಸಾಧನೆಯ ಸಮೀಪ ಬಂದಿದ್ದು ಶ್ರೀಲಂಕಾದ ಕುಮಾರ ಸಂಗಕ್ಕಾರ ಅವರ ಸಾಧನೆಯನ್ನು ಸರಿಗಟ್ಟಿದ್ದಾರೆ.
Advertisement
ಇಂದಿನ ಪಂದ್ಯ ಸೇರಿದಂತೆ ಧೋನಿ ಒಟ್ಟು 298 ಪಂದ್ಯಗಳ 293 ಇನ್ನಿಂಗ್ಸ್ ಮೂಲಕ 99 ಸ್ಟಪ್ ಔಟ್ ಮಾಡಿದ್ದಾರೆ. 278 ಕ್ಯಾಚ್ ಗಳನ್ನು ಪಡೆಯುವ ಮೂಲಕ ಒಟ್ಟು 377 ಮಂದಿಯನ್ನು ಧೋನಿ ಔಟ್ ಮಾಡಿದ್ದಾರೆ.
Advertisement
ಏಕದಿನದ ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ಸ್ಟಂಪ್ ಔಟ್ ಮಾಡಿರೋ ಕೀಪರ್‍ಗಳ ಪಟ್ಟಿಯಲ್ಲಿ 99 ಸ್ಟಂಪ್ ಮಾಡುವ ಮೂಲಕ ಧೋನಿ ಮತ್ತು ಕುಮಾರ ಸಂಗಕ್ಕಾರ(404 ಪಂದ್ಯ, 353 ಇನ್ನಿಂಗ್ಸ್) ಜಂಟಿಯಾಗಿ ಮೊದಲ ಸ್ಥಾನದಲ್ಲಿದ್ದಾರೆ. 75 ಸ್ಟಂಪ್ ಔಟ್ ಮಾಡುವ ಮೂಲಕ ಶ್ರೀಲಂಕಾದ ರಮೇಶ್ ಕಲುವಿತರಣ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಪಾಕಿಸ್ತಾನ ಮೋಯಿನ್ ಖಾನ್ 73 ಸ್ಟಂಪ್ ಔಟ್ ಮಾಡಿದ್ದರೆ, ಆಸ್ಟ್ರೇಲಿಯಾದ ಆಡಂ ಗಿಲ್‍ಕ್ರಿಸ್ಟ್ 55 ಸ್ಟಂಪ್ ಔಟ್ ಮಾಡುವ ಮೂಲಕ ನಾಲ್ಕನೇಯ ಸ್ಥಾನದಲ್ಲಿದ್ದಾರೆ.
Advertisement
4ನೇ ಸ್ಥಾನ: ಅತಿ ಹೆಚ್ಚು ಬ್ಯಾಟ್ಸ್ ಮನ್‍ಗಳನ್ನು ಔಟ್ ಮಾಡಿದ ವಿಕೆಟ್ ಕೀಪರ್‍ಗಳ ಪಟ್ಟಿಯಲ್ಲಿ ಧೋನಿ ನಾಲ್ಕನೇಯ ಸ್ಥಾನದಲ್ಲಿದ್ದಾರೆ. ಸಂಗಕ್ಕಾರ 482(383 ಕ್ಯಾಚ್, 99 ಸ್ಟಂಪ್) ಮಾಡುವ ಮೂಲಕ ಮೊದಲ ಸ್ಥಾನದಲ್ಲಿದ್ದರೆ, ಎರಡನೇ ಸ್ಥಾನದಲ್ಲಿ ಗಿಲ್‍ಕ್ರಿಸ್ಟ್ 472(417 ಕ್ಯಾಚ್, 55 ಸ್ಟಂಪ್) ಇದ್ದಾರೆ. ದಕ್ಷಿಣ ಆಫ್ರಿಕಾದ ಮಾರ್ಕ್ ಬೌಷರ್ 424 ಬಲಿ(402 ಕ್ಯಾಚ್, 22 ಸ್ಟಂಪ್) ಪಡೆಯುವ ಮೂಲಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
ಸದ್ಯ ಒಟ್ಟು 377 ಮಂದಿಯನ್ನು ಔಟ್ ಮಾಡಿರುವ ಧೋನಿ 2019ರ ವಿಶ್ವಕಪ್ ಕ್ರಿಕೆಟ್‍ವರೆಗೆ ಟೀಂ ಇಂಡಿಯಾವನ್ನು ಪ್ರತಿನಿಧಿಸಿದರೆ ಸಂಗಕ್ಕಾರ ನಿರ್ಮಿಸಿದ ದಾಖಲೆಯನ್ನು ಮುರಿಯುವ ಸಾಧ್ಯತೆಯಿದೆ.
ಭಾರತದಲ್ಲಿ ಯಾರು ಎಷ್ಟು? ಭಾರತದ ಪರವಾಗಿ ನಯನ್ ಮೊಂಗಿಯಾ 44 ಸ್ಟಂಪ್ ಔಟ್ ಮಾಡಿದ್ದರೆ, ಕಿರಣ್ ಮೊರೆ 27 ಸ್ಟಂಪ್ ಔಟ್ ಮಾಡಿದ್ದಾರೆ. ಚಂದ್ರಕಾಂತ್ ಪಂಡಿತ್ 15 ಸ್ಟಂಪ್ ಮಾಡಿದ್ದರೆ, ರಾಹುಲ್ ದ್ರಾವಿಡ್ 14 ಸ್ಟಂಪ್ ಔಟ್ ಮಾಡಿದ್ದಾರೆ.
ಇದನ್ನೂ ಓದಿ:ಒಂದೇ ಓವರ್ ನಲ್ಲಿ ಸಿಕ್ಸರ್, ಬೌಂಡರಿ ಚಚ್ಚಿ ಕಪಿಲ್ ದೇವ್ ದಾಖಲೆ ಮುರಿದ ಪಾಂಡ್ಯ
MS Dhoni – 99 ODI stumpings mostly off the bowling of
19 – Harbhajan Singh
15 – Ravindra Jadeja
14 – R Ashwin
and 19 other bowlers!#SLvInd
— Mohandas Menon (@mohanstatsman) August 24, 2017
https://youtu.be/ZTprzduNDDk
https://youtu.be/ULWBPEngbpk
https://youtu.be/B8kTz5cnvgo
India wins the toss & elects to bowl first.#UltimateShowdown Chameera, Siriwardana, Akila in for Thisara, Sandakan, Hasaranga #SLvIND pic.twitter.com/D0SVD9ExyX
— Sri Lanka Cricket ???????? (@OfficialSLC) August 24, 2017
#TeamIndia need 237 runs to win the 2nd ODI #SLvIND pic.twitter.com/v2aDBlJGIg
— BCCI (@BCCI) August 24, 2017
SL 149/5 (34.0 Ovs) CRR: 4.38. Siriwardana 25*, Kapugedera 11* #SLvIND pic.twitter.com/yRgIrKtwR5
— Sri Lanka Cricket ???????? (@OfficialSLC) August 24, 2017
After 25 overs, Sri Lanka on 107/4 #SLvIND pic.twitter.com/oxkmsFB41I
— Sri Lanka Cricket ???????? (@OfficialSLC) August 24, 2017
Dickwella, Gunatillaka falls after brisk start. SL 80/2 after 15 overs. #SLvIND pic.twitter.com/FZc4VpMFmB
— Sri Lanka Cricket ???????? (@OfficialSLC) August 24, 2017
SL openers start brightly, SL moved to 28/0 after 5 overs. #SLvIND pic.twitter.com/QxezrPO8wh
— Sri Lanka Cricket ???????? (@OfficialSLC) August 24, 2017
Innings break: Sri Lanka 236/8 (50 Overs) Milinda Siriwardana 58, Kapugedera 40, Dickwella 31, Bumrah 4/43. Target 237. #SLvIND pic.twitter.com/RNnWHABYhU
— Sri Lanka Cricket ???????? (@OfficialSLC) August 24, 2017