ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ ಅವರ ಮೇಲೆ ಅಭಿಮಾನಿಗಳು ವಿಶೇಷ ಅಭಿಮಾನ ಹೊಂದಿದ್ದಾರೆ ಎಂಬುವುದು ಎಲ್ಲರಿಗೂ ತಿಳಿದ ಸಂಗತಿ. ಧೋನಿ ಕೂಡ ತಮ್ಮ ಅಭಿಮಾನಿಗಳಿಗೆ ಅಷ್ಟೇ ಗೌರವವನ್ನು ನೀಡುತ್ತಾರೆ. ಈ ಮಾತಿಗೆ ಪೂರಕ ಎಂಬಂತೆ ಡೆಲ್ಲಿ ಪಂದ್ಯದ ಬಳಿಕ ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳಿಗೆ ಧೋನಿ ವಿಶೇಷ ಗಿಫ್ಟ್ ನೀಡಿದ್ದಾರೆ.
ಟೆನ್ನಿಸ್ ಬಾಲ್ ಗಳನ್ನು ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳತ್ತ ಬೀಸುವ ಮೂಲಕ ಧೋನಿ ಅಷ್ಟು ಅಭಿಮಾನಿಗಳ ಮನಗೆಲ್ಲುವ ಪ್ರಯತ್ನ ನಡೆಸಿದ್ದಾರೆ. ಸಿಎಸ್‍ಕೆ ತಂಡ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿದೆ.
#AnbuDen Thala! #WhistlePodu #Yellove ???????? pic.twitter.com/CJ8mxvW7Bc
— Chennai Super Kings (@ChennaiIPL) May 1, 2019
ಪಂದ್ಯದ ವೇಳೆ ಧೋನಿ ಮೈದಾನ ಪ್ರವೇಶ ಮಾಡುತ್ತಿದಂತೆ ನೆರೆದಿದ್ದ ಅಭಿಮಾನಿಗಳ ಅವರ ಘೋಷಣೆ ಕೂಗಿ ಸ್ವಾಗತ ಕೋರಿದ್ದು ವಿಶೇಷವಾಗಿತ್ತು. ಸ್ಟೇಡಿಯಂ ಮೇಲೆ ಕುಳಿತ್ತಿದ್ದ ಅಭಿಮಾನಿಗಳಿಗೂ ಟೆನ್ನಿಸ್ ರಾಕೆಟ್ ನಿಂದ ಚೆಂಡನ್ನು ಹೊಡೆದಿದ್ದರು. ಈ ವಿಡಿಯೋವನ್ನು ಸುಮಾರು 17 ಸಾವಿರ ಮಂದಿ ಲೈಕ್ ಮಾಡಿದ್ದಾರೆ.
ಡೆಲ್ಲಿ ವಿರುದ್ಧ ಪಂದ್ಯದಲ್ಲಿ ಗೆಲ್ಲುವ ಮೂಲಕ ಸಿಎಸ್‍ಕೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ. ಆಡಿರುವ 13 ಪಂದ್ಯಗಳಲ್ಲಿ ಸಿಎಸ್‍ಕೆ 9ರಲ್ಲಿ ಜಯ ಪಡೆದು 18 ಅಂಕಗಳಿಸಿದೆ. 8 ಪಂದ್ಯಗಳಲ್ಲಿ ಗೆಲುವು ಪಡೆದಿರುವ ಡೆಲ್ಲಿ ಕ್ಯಾಪಿಟಲ್ಸ್ 16 ಅಂಕ ಗಳಿಸಿ ಎರಡನೇ ಸ್ಥಾನದಲ್ಲಿದೆ.
The @ChennaiIPL thanking their fans at the #AnbuDen ???????? with a victory lap. pic.twitter.com/SRlFHSTzSk
— IndianPremierLeague (@IPL) May 1, 2019