Tuesday, 16th October 2018

Recent News

ಪಂದ್ಯ ಮುಗಿತು, ಡ್ಯಾಡಿ ಡ್ಯೂಟಿಗೆ ಹಾಜರಾದ ಧೋನಿ: ವಿಡಿಯೋ ವೈರಲ್

ಬೆಂಗಳೂರು: ರಾಯಲ್ ಚಾಲೆಂಜರ್ಸ್ ತಂಡದ ವಿರುದ್ಧ ಭರ್ಜರಿ ಪ್ರದರ್ಶನವನ್ನು ನೀಡಿದ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಧೋನಿ ತಂದೆಯೆ ಡ್ಯೂಟಿಗೆ ಹಾಜರಾಗಿದ್ದಾರೆ.

ಹೌದು. ಕೊನೆಯ ಓವರ್ ನಲ್ಲಿ ಸಿಕ್ಸರ್ ಸಿಡಿಸಿ ಪಂದ್ಯವನ್ನು ಗೆಲ್ಲಿಸಿಕೊಟ್ಟ ಧೋನಿ ನಿದ್ದೆ ಬಳಿದ ಬಳಿಕ ಮಗಳು ಝಿವಾಳ ಕೂದಲನ್ನು ಡ್ರೈಯರ್ ನಲ್ಲಿ ಒಣಗಿಸಿದ್ದಾರೆ.

ಧೋನಿ ಮಗಳ ಕೂದಲನ್ನು ಒಣಗಿಸುತ್ತಿರುವ ವಿಡಿಯೋವನ್ನು ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಗೆ “Game over, had a nice sleep now back to Daddy’s duties” ಎಂದು ಬರೆದಿದ್ದಾರೆ. ಗುರುವಾರ ಸಂಜೆ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದು 23 ಲಕ್ಷಕ್ಕೂ ಅಧಿಕ ಮಂದಿ ವಿಡಿಯೋ ನೋಡಿದ್ದು ವೈರಲ್ ಆಗಿದೆ.

ಚೆನ್ನೈ ಹಾಗೂ ಆರ್ ಸಿ ಬಿ ನಡುವೆ ನಡೆದ ಹೈವೋಲ್ಟೇಜ್ ಪಂದ್ಯ ಕಾರಣ ಕ್ರೀಡಾಂಗಣದ ತುಂಬಾ ಅಭಿಮಾನಿಗಳು ತುಂಬಿದ್ದರು. ಅಭಿಮಾನಿಗಳ ನಿರೀಕ್ಷೆಯಂತೆ ಎರಡು ತಂಡಗಳು ಉತ್ತಮ ಪ್ರದರ್ಶನ ನೀಡಿದವು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಆರ್ ಸಿ ಬಿ ತಂಡ 205 ರನ್‍ಗಳ ಸವಾಲಿನ ಮೊತ್ತವನ್ನು ಗಳಿಸಿತ್ತು. ಈ ಮೊತ್ತವನ್ನು ಬೆನ್ನತ್ತಿದ್ದ ಚೆನ್ನೈ ಪರ ರಾಯುಡು ಹಾಗೂ ನಾಯಕ ಎಂಎಸ್ ಧೋನಿ ಭರ್ಜರಿ ಪ್ರದರ್ಶನ ನೀಡಿ ತಂಡಕ್ಕೆ ಗೆಲುವು ತಂದುಕೊಟ್ಟರು. ಧೋನಿ ಕೇವಲ 30 ಎಸೆತಗಳಲ್ಲಿ ಅಜೇಯ 70 ರನ್ (3ಬೌಂಡರಿ, 8 ಸಿಕ್ಸರ್) ಸಿಡಿಸಿದ್ದರೆ, ಇದಕ್ಕೂ ಮುನ್ನ ಅಂಬಟಿ ರಾಯುಡು 82 (53 ಎಸೆತ 3 ಬೌಂಡರಿ, 8 ಸಿಕ್ಸರ್) ರನ್ ಸಿಡಿಸಿದ್ದರು.

Game over, had a nice sleep now back to Daddy’s duties

A post shared by M S Dhoni (@mahi7781) on

Leave a Reply

Your email address will not be published. Required fields are marked *