– 9ನೇ ಕ್ರಮಾಂಕದಲ್ಲಿ ಮಹಿ ಬ್ಯಾಟ್ ಬೀಸಿದ್ದೇಕೆ?
– ಐಪಿಎಲ್ ವೃತ್ತಿ ಬದುಕಿಗೆ ಇದು ಕೊನೇ ಆವೃತ್ತಿಯಾಗುತ್ತಾ?
ಚೆನ್ನೈ: ಸಿಎಸ್‌ಕೆ ತಂಡದ ಮಿಡಿತ ಲೆಜೆಂಡ್ ಎಂ.ಎಸ್ ಧೋನಿ (MS Dhoni) ಅವರ ನಿವೃತ್ತಿಯ ಸುದ್ದಿ ಮತ್ತೆ ಮುನ್ನೆಲೆಗೆ ಬಂದಿದೆ. ಪಂಜಾಬ್ ಕಿಂಗ್ಸ್ ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿ 9ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದಿದ್ದ ಮಹಿ ಮೊದಲ ಎಸೆತದಲ್ಲೇ ಗೋಲ್ಡನ್ ಡಕ್ ಆದರು. ಮಹಿ ಅವರ ಔಟ್ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಪರ – ವಿರೋಧ ಚರ್ಚೆ ನಡೆಯುತ್ತಿದ್ದಾಗಲೇ ಮತ್ತೊಂದು ಸೀಕ್ರೆಟ್ ಬಹಿರಂಗಗೊಂಡಿದೆ.
2024ರ ಐಪಿಎಲ್ (IPL 2024) ಆರಂಭದಿಂದಲೂ ಮಹಿ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಏಕೆ ಉಳಿಯುತ್ತಿಲ್ಲ? ಕೊನೇ 2-3 ಓವರ್‌ಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿರುವುದು ಏಕೆ? ಅನ್ನೋ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಲೇ ಇದೆ. ಇದಕ್ಕೆ ಉತ್ತರ ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ…
Advertisement
ಮಹಿಗೆ ಇರೋ ಆರೋಗ್ಯ ಸಮಸ್ಯೆ ಏನು?
42 ವರ್ಷದ ಲೆಜೆಂಡರಿ ಧೋನಿ ಅವರಿಗೆ ಇದು ಅಂತಿಮ ಆವೃತ್ತಿ ಎಂದೇ ಭಾವಿಸಲಾಗಿದೆ. ಏಕೆಂದರೆ 2023 ಆವೃತ್ತಿಯಲ್ಲಿ ಮೊಣಕಾಲು ಸಮಸ್ಯೆಯಿಂದ ಬಳಲುತ್ತಿದ್ದ ಮಹಿ, ಆ ನೋವಿನಲ್ಲೂ ಆಡಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ಚೆನ್ನೈ ಸೂಪರ್ ಕಿಂಗ್ಸ್ 5ನೇ ಬಾರಿಗೆ ಟ್ರೋಫಿ ಗೆದ್ದ ಬಳಿಕವೇ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಮೊಣಕಾಲು ಗಾಯ ವಾಸಿಯಾದ್ದರಿಂದ ತಮ್ಮ ಅಭಿಮಾನಿಗಳಿಗಾಗಿ 2024ರಲ್ಲೂ ಆಡುವ ಮಹಿ ಮತ್ತೊಂದು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
Advertisement
Advertisement
ಹೌದು. ಮಹಿ ಕೆಲ ದಿನಗಳಿಂದ ಸ್ನಾಯು ಸಮಸ್ಯೆಯಿಂದ (Muscle Tear) ಬಳಲುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಅವರಿಗೆ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಾಗುತ್ತಿಲ್ಲ, ರನ್ ಓಡಲಾಗುತ್ತಿಲ್ಲ. ನೆಟ್ಸ್‌ನಲ್ಲಿ ಅಭ್ಯಾಸ ಮಾಡುವಾಗಲೂ ಸ್ಮ್ಯಾಶ್ ಮಾಡುವತ್ತ ಮಾತ್ರ ಗಮನಹರಿಸುತ್ತಿದ್ದಾರೆ. 20 ಓವರ್ ಮೈದಾನದಲ್ಲಿ ನಿಂತು ಫೀಲ್ಡಿಂಗ್ ಮಾಡುವ ಮಹಿ, ಬ್ಯಾಟಿಂಗ್ ವೇಳೆ ವಿರಾಮ ಪಡೆಯುತ್ತಿರುವುದು ಇದೇ ಕಾರಣಕ್ಕೆ ಎಂದು ಸಿಎಸ್‌ಕೆ ಫ್ರಾಂಚೈಸಿ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಟಿ20 ವಿಶ್ವಕಪ್ ತಂಡದಿಂದ ರಾಹುಲ್ ಬಿಟ್ಟಿದ್ದೇಕೆ? ಕೊಹ್ಲಿ ಸ್ಟ್ರೈಕ್‌ರೇಟ್ ಬಗ್ಗೆ ರೋಹಿತ್ ಹೇಳಿದ್ದೇನು?
Advertisement
ಅಭಿಮಾನಿಗಳು ಸತ್ಯ ತಿಳಿಯಬೇಕು:
ಇತ್ತೀಚೆಗೆ ಪಂಜಾಬ್ ವಿರುದ್ಧ ನಡೆದ ಪಂದ್ಯದಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ಇನಿಂಗ್ಸ್‌ನ ಕೊನೇ ಓವರ್‌ನ ಮೊದಲ ಎಸೆತದಲ್ಲಿ ಎಂ.ಎಸ್ ಧೋನಿ, ಅರ್ಷದೀಪ್ ಸಿಂಗ್‌ಗೆ ಬೌಂಡರಿ ಬಾರಿಸಿದ್ದರು. ನಂತರ ಮುಂದಿನ 2 ಎಸೆತಗಳನ್ನು ಡಾಟ್ ಮಾಡಿದ್ದರು. 3ನೇ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಕೈಹಾಕಿದ್ದ ಧೋನಿ, ಬೌಂಡರಿ ಅಥವಾ ಸಿಕ್ಸರ್ ಬಾರಿಸುವಲ್ಲಿ ವಿಫಲವಾಗಿದ್ದರು. ಆದ್ರೆ ಈ ವೇಳೆ ಸುಲಭವಾಗಿ ಒಂದು ರನ್ ಕದಿಯಬಹುದಿತ್ತು. ಆದರೆ, ಧೋನಿ ನಿರಾಕರಿಸಿದರು. ನಾನ್‌ಸ್ಟ್ರೈಕ್ ತುದಿಯಲ್ಲಿದ್ದ ಡೇರಿಲ್ ಮಿಚೆಲ್ ರನ್ ಪಡೆಯಲು ಸ್ಟ್ರೈಕರ್ ತುದಿಗೆ ಓಡಿ ಬಂದರು. ಆದರೆ, ಧೋನಿ ನಿಂತಲ್ಲಿಯೇ ಡೇರಿಲ್ ಮಿಚೆಲ್‌ಗೆ ವಾಪಸ್ ಹೋಗುವಂತೆ ಹೇಳಿದರು. ಈಬಗ್ಗೆ ಅಭಿಮಾನಿಗಳಿಂದಲೂ ಟೀಕೆ ವ್ಯಕ್ತವಾಗಿತ್ತು. ಆದ್ರೆ ಇದೀಗ ಫ್ರಾಂಚೈಸಿ ಮೂಲಗಳೇ ಅಭಿಮಾನಿಗಳಿಗೆ ಸತ್ಯ ತಿಳಿಸುವ ಪ್ರಯತ್ನ ಮಾಡಿವೆ.
ಬೌಲರ್ಗೆ ಅವಕಾಶ ಕೊಡಿ ಎಂದಿದ್ದ ಭಜ್ಜಿ:
ಇನ್ನೂ 9ನೇ ಕ್ರಮಾಂಕದಲ್ಲಿ ಬಂದು ಮಹಿ ಗೋಲ್ಡನ್ ಡಕ್ ಆದ ಮಹಿ ಬ್ಯಾಟಿಂಗ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಹರ್ಭಜನ್ ಸಿಂಗ್, ಎಂ.ಎಸ್ ಧೋನಿ 9ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಬಯಸಿದರೆ, ಅವರು ಪ್ಲೇಯಿಂಗ್ ಇಲೆವೆನ್ನಲ್ಲಿ ಆಡಲೇಬಾರದು. ಬದಲಿಗೆ ಒಬ್ಬ ವೇಗದ ಬೌಲರ್ ಅನ್ನು ಪ್ಲೇಯಿಂಗ್ ಹನ್ನೊಂದರಲ್ಲಿ ಸೇರಿಸುವುದು ಉತ್ತಮ. ಪ್ರತಿಯೊಂದು ನಿರ್ಧಾರಗಳನ್ನು ತೆಗೆದುಕೊಳ್ಳುವ ಅವರೇ ಈ ರೀತಿ ಪಂಜಾಬ್ ಕಿಂಗ್ಸ್ ವಿರುದ್ಧ 9ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ತಂಡದ ಹಿನ್ನಡೆಗೆ ಕಾರಣರಾಗಿದ್ದಾರೆ. ಧೋನಿ ಈ ತಪ್ಪು ಮಾಡಿದ್ದೇಕೆ ಎಂದು ನನಗೆ ಅರ್ಥವಾಗುತ್ತಿಲ್ಲ ಎಂದು ಹೇಳಿದ್ದರು. ಇದನ್ನೂ ಓದಿ: T20 World Cup: ಆರ್ಥಿಕ ಬಿಕ್ಕಟ್ಟಿನ ನಡುವೆಯೂ ಕ್ರಿಕೆಟಿಗರಿಗೆ ಲಕ್ಷ ಲಕ್ಷ ಬಹುಮಾನ ಘೋಷಿಸಿದ ಪಾಕ್!