ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ತಮ್ಮ 37 ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.
ಸದ್ಯ ಇಂಗ್ಲೆಂಡ್ ಪ್ರವಾಸದಲ್ಲಿರುವ ಧೋನಿ ಕ್ರಿಕೆಟ್ ತಂಡದ ಆಟಗಾರರು, ಪತ್ನಿ ಸಾಕ್ಷಿ ಹಾಗೂ ಪ್ರೀತಿಯ ಮಗಳು ಝೀವಾ ಜೊತೆಗೆ ಕೇಕ್ ಕತ್ತರಿಸಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಧೋನಿಯವರ ಅಪಾರ ಅಭಿಮಾನಿಗಳು ಹುಟ್ಟು ಹಬ್ಬದ ವಿಡಿಯೋವನ್ನು ತಮ್ಮ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.
https://www.youtube.com/watch?v=xnOjFEBie3E
ಈ ಸಂದರ್ಭದಲ್ಲಿ ಟೀಂ ಇಂಡಿಯಾ ಆಟಗಾರರೂ ಸೇರಿದಂತೆ ಅಪಾರ ಅಭಿಮಾನಿಗಳು ಧೋನಿಯವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಕ್ಯಾಪ್ಟನ್ ಕೂಲ್ ಗೆ ಶುಭಾಶಯ ತಿಳಿಸಿದವರಲ್ಲಿ ಮೊದಲಿಗರಾಗಿದ್ದಾರೆ.
#HappyBirthdayMSDhoni . May your life be longer than this stretch and may you find happiness in everything, faster than your stumpings. Om Finishaya Namaha ! pic.twitter.com/zAHCX33n1y
— Virender Sehwag (@virendersehwag) July 6, 2018
ಭಾರತೀಯ ಕ್ರಿಕೆಟ್ ಆಟಗಾರ ಸುರೇಶ್ ರೈನಾ ಕೂಡ ಧೋನಿಗೆ ಟ್ವಟ್ಟರ್ ನಲ್ಲಿ ಕೇಕ್ ಕಟ್ ಮಾಡಿರುವ ಫೋಟೋ ಹಾಕಿ ಶುಭಾಶಯ ಹೇಳಿದ್ದಾರೆ. ನೀವು ನನ್ನ ಸ್ಫೂರ್ತಿಯಾಗಿದ್ದೀರಿ. ನಿಮ್ಮ ಮುಂದಿನ ಜೀವನದ ದಿನಗಳೆಲ್ಲಾ ಒಳ್ಳೆಯದಾಗಿರಲಿ ಎಂದು ಹಾರೈಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ ಧೋನಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.
Happy birthday to the legend @msdhoni. There can be nobody like you. ✌️ pic.twitter.com/gMDepTPN3l
— Suresh Raina???????? (@ImRaina) July 6, 2018