ಸಿಡ್ನಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಇಂದು ಒಂದು ರನ್ ಗಳಿಸುವ ಮೂಲಕ ಅಂತರಾಷ್ಟ್ರೀಯ ಪಂದ್ಯದಲ್ಲಿ 10 ಸಾವಿರ ರನ್ ಪೂರೈಸಿದರು. ಇಂದು ನಡೆದ ಆಸ್ಟ್ರೇಲಿಯಾ ವಿರುದ್ಧ ಏಕದಿನ ಪಂದ್ಯದಲ್ಲಿ 10 ಸಾವಿರ ರನ್ ಗಳನ್ನು ತಮ್ಮ ಖಾತೆಯಲ್ಲಿ ದಾಖಲಿಸಿಕೊಂಡರು.
10 ಸಾವಿರ ಮೈಲಿಗಲ್ಲು ತಲುಪಲು ಧೋನಿ ಅವರಿಗೆ ಒಂದು ರನ್ ಮಾತ್ರ ಬೇಕಿತ್ತು. 2004ರಲ್ಲಿ ಏಕದಿನ ಪಂದ್ಯಕ್ಕೆ ಕಾಲಿಟ್ಟಿರುವ ಧೋನಿ ಇದೂವರೆಗೂ ಹಲವು ದಾಖಲೆಗಳನ್ನು ಬರೆದಿದ್ದಾರೆ. ಆಸೀಸ್ ನೀಡಿದ 289 ರನ್ ಬೆನ್ನಟ್ಟಿದ ಟೀಂ ಇಂಡಿಯಾ ಆರಂಭದಲ್ಲಿಯೇ ಮೂರು ವಿಕೆಟ್ ಕಳೆದುಕೊಳ್ಳುವ ಮೂಲಕ ಸಂಕಷ್ಟದಲ್ಲಿ ಸಿಲುಕಿತ್ತು. ಉಪ ನಾಯಕ ರೋಹಿತ್ ಶರ್ಮಾ ಜೊತೆಯಾದ ಧೋನಿ 98 ಎಸೆತಗಳನ್ನು ಎದುರಿಸಿ 51 ರನ್ ಗಳಿಸುವ ತಂಡಕ್ಕೆ ಸಹಕಾರಿಯಾದರು. ಇದು ಧೋನಿ ಅವರ 68ನೇ ಅರ್ಧ ಶತಕವಾಗಿದೆ.
Advertisement
Advertisement
100 ವಿಕೆಟ್ ಪಡೆದ ಭುವನೇಶ್ವರ್:
ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ ಎರಾನ್ ಫಿಂಚ್ ಅವರ ವಿಕೆಟ್ ಪಡೆದುಕೊಳ್ಳುವ ಮೂಲಕ ಭಾರತದ ವೇಗಿ ಭುವನೇಶ್ವರ್ ಕುಮಾರ್ 100 ವಿಕೆಟ್ ಗಳ ಮೈಲಿಗಲ್ಲು ತಲುಪಿದರು. ಈ ಮೂಲಕ 100 ವಿಕೆಟ್ ಪಡೆದ ಭಾರತೀಯ ಐದನೇ ಬೌಲರ್ ಆಗಿ ಭುವನೇಶ್ವರ್ ಹೊರ ಹೊಮ್ಮಿದರು. ಭುವನೇಶ್ವರ್ ಇದೂವರೆಗೂ 96 ಏಕದಿನ ಪಂದ್ಯಗಳನ್ನಾಡಿದ್ದಾರೆ. ಸೌರವ್ ಗಂಗೂಲಿ, ಸಚಿನ್ ತೆಂಡಲ್ಕೂರ್, ಯುವರಾಜ್ ಸಿಂಗ್ ಮತ್ತು ರವಿ ಶಾಸ್ತ್ರಿ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಟೀಂ ಇಂಡಿಯಾದ ಮೊದಲ ನಾಲ್ಕು ಆಟಗಾರರಾಗಿದ್ದಾರೆ.
Advertisement
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv