ನವದೆಹಲಿ: 2018ರ ಇಂಡಿಯನ್ ಪ್ರೀಯರ್ ಲೀಗ್(ಐಪಿಎಲ್) ಆವೃತ್ತಿಯಲ್ಲಿ ಮತ್ತೆ ಚೆನ್ನೈ ಸೂಪರ್ ಕಿಂಗ್ಸ್ ಪರ ಧೋನಿ ಆಡುವ ಸಾಧ್ಯತೆ ಹೆಚ್ಚಾಗಿದೆ.
ಕಳೆದ ಎರಡು ಐಪಿಎಲ್ ಆವೃತ್ತಿಗಳಿಂದ ಮ್ಯಾಚ್ ಫಿಕ್ಸಿಂಗ್ ಆರೋಪದಡಿ ನಿಷೇಧಕ್ಕೆ ಒಳಗಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್(ಸಿಎಸ್‍ಕೆ) ಮತ್ತು ರಾಜಸ್ತಾನ್ ರಾಯಲ್(ಆರ್‍ಆರ್) ತಂಡಗಳು ಮತ್ತೆ 2018 ರ ಆವೃತ್ತಿಯಲ್ಲಿ ಭಾಗವಹಿಸುತ್ತಿವೆ. ಈ ಎರಡು ತಂಡಗಳ ಪರ ಆಡುತ್ತಿದ್ದ ಆಟಗಾರರನ್ನು ಮತ್ತೆ ತಂಡಕ್ಕೆ ಮರಳಿ ಪಡೆಯಲು ಅವಕಾಶವನ್ನು ನೀಡುವಂತೆ ಐಪಿಎಲ್ ಆಡಳಿತ ಮಂಡಳಿಯಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿದೆ.
Advertisement
ಈ ಹಿಂದೆ ಸಿಎಸ್‍ಕೆ ಮತ್ತು ಆರ್‍ಆರ್ ತಂಡಗಳ ಪರ ಆಡುತ್ತಿದ್ದ ಹಲವು ಆಟಗಾರರು ಕಳೆದ ಎರಡು ವರ್ಷಗಳ ಆವೃತ್ತಿಗಳಲ್ಲಿ ರೈಸಿಂಗ್ ಪುಣೆ ಮತ್ತು ಗುಜರಾತ್ ಲಯನ್ಸ್ ಪರ ಆಡಿದ್ದರು. ಈ ಕುರಿತು ಹೇಳಿಕೆ ನೀಡಿರುವ ಐಪಿಎಲ್ ಆಡಳಿತ ಮಂಡಳಿ, ಒಬ್ಬ ಭಾರತೀಯ ಆಟಗಾರ ಹಾಗೂ ಇಬ್ಬರು ವಿದೇಶಿ ಆಡಗಾರರನ್ನು ಸೇರಿ ಕನಿಷ್ಠ ಪಕ್ಷ ಮೂವರು ಆಟಗಾರರನ್ನು ಹಿಂಪಡೆಯಲು ಪ್ರಸ್ತಾವನೆ ಸಲ್ಲಿಸಲಾಗುತ್ತದೆ ಎಂದು ತಿಳಿಸಿದೆ.
Advertisement
ಇನ್ನೂಳಿದಂತೆ ಸಿಎಸ್‍ಕೆ ಪರ ಆಡುತ್ತಿದ್ದ ಸುರೇಶ್ ರೈನಾ ಮತ್ತು ರವೀಂದ್ರ ಜಡೇಜಾ ಸಹ ತಂಡವನ್ನು ಮರಳುವ ನಿರೀಕ್ಷೆ ಇದೆ.
Advertisement
ಈ ಕುರಿತು ತಂಡದ ಪ್ರಾಂಚೈಸಿಗಳು ತೆಗೆದುಕೊಳ್ಳುವ ನಿರ್ಧಾರದ ಮೇಲೆ ಮೂರು ಅಥವಾ ಐವರು ಆಟಗಾರರನ್ನು ಹಿಂಪಡೆಯುವ ಕುರಿತು ತೀರ್ಮಾನವನ್ನು ಕೈಗೊಳ್ಳಲಾಗುವುದು ಎಂದು ಐಪಿಎಲ್ ಮುಖ್ಯಸ್ಥ ರಾಜೀವ್ ಶುಕ್ಲಾ ತಿಳಿಸಿದ್ದಾರೆ.
Advertisement
ಈ ಹಿಂದೆ ಭಾರತ ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿ ವೇಳೆ ಧೋನಿ ಚೆನ್ನೈನಲ್ಲಿ ಇಂಡಿಯಾ ಸಿಮೆಂಟ್ಸ್ ಕಚೇರಿಗೆ ಭೇಟಿ ನೀಡಿದ್ದರು. ಈ ವೇಳೆಯೇ ಧೋನಿ ಮತ್ತೆ ತಂಡಕ್ಕೆ ಸೇರ್ಪಡೆಯಾಗಲಿದ್ದಾರೆ ಎನ್ನುವ ಸುದ್ದಿ ಪ್ರಕಟವಾಗಿತ್ತು. ಅದಕ್ಕೂ ಮೊದಲು ಧೋನಿ ಜುಲೈನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಜರ್ಸಿ ಧರಿಸಿದ್ದ ಫೋಟೋವನ್ನು ಫೇಸ್ ಬುಕ್‍ನಲ್ಲಿ ಅಪ್ಲೋಡ್ ಮಾಡುವ ಮೂಲಕ ಮರಳಿ ತಂಡಕ್ಕೆ ಹಿಂದಿರುಗವ ಬಗ್ಗೆ ಸುಳಿವು ನೀಡಿದ್ದರು.
https://www.facebook.com/MSDhoni/posts/1926010637622156
https://www.facebook.com/Seenumama/photos/pcb.1103706643095460/1103706599762131/?type=3&theater
https://www.facebook.com/Seenumama/photos/pcb.1103706643095460/1103706619762129/?type=3&theater
https://www.facebook.com/msdhoni7781/photos/pcb.1453118581403674/1453118448070354/?type=3&theater
https://www.facebook.com/msdhoni7781/photos/pcb.1453118581403674/1453118384737027/?type=3&theater
https://www.facebook.com/msdhoni7781/photos/pcb.1453118581403674/1453118424737023/?type=3&theater