ಮುಂಬೈ: ಇಸ್ರೋ ವಿಜ್ಞಾನಿಗಳ ಪರಿಶ್ರಮ, ಭಾರತೀಯರ ಪ್ರಾರ್ಥನೆ ಫಲವಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ (Moon SouthPole) ನಿಗದಿ ಪಡಿಸಿದ ಸಮಯಕ್ಕೆ ಸರಿಯಾಗಿ ಚಂದ್ರಯಾನ-3 (Chandrayaan-3) ವಿಕ್ರಮ್ ಲ್ಯಾಂಡರ್ (Vikram Lander) ಯಶಸ್ವಿಯಾಗಿ ಕಾಲಿಟ್ಟಿದೆ. ಇಸ್ರೋ ಬುಧವಾರ ಸಂಜೆ 6:04ರ ಹೊತ್ತಿಗೆ ವಿಕ್ರಮ್ ಲ್ಯಾಂಡರ್ ಅನ್ನು ಚಂದ್ರನ ಮೇಲೆ ಇಳಿಸುವ ಪ್ರಕ್ರಿಯೆಯನ್ನ ಯಶಸ್ವಿಯಾಗಿ ಪೂರೈಸಿದೆ. ಈ ಐತಿಹಾಸಿಕ ಕ್ಷಣಕ್ಕೆ ಇಡೀ ವಿಶ್ವವೇ ಕಣ್ತುಂಬಿಕೊಂಡಿತ್ತು.
Captain cool #MSDhoni celebrating #Chandrayaan3 success#VikramLander #PragyanRover #ISRO #MoonLanding #India #IndiaOnTheMoon pic.twitter.com/1KKH70glm6
— Vinod (@vinodgounder7) August 23, 2023
Advertisement
ಚಂದ್ರಯಾನ-3 ಸಕ್ಸಸ್ ಆದ ಕ್ಷಣವನ್ನ ಇಡೀ ದೇಶವೇ ಕೊಂಡಾಡಿದೆ, ಹಾಗೆಯೇ ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್ ಧೋನಿ (MS Dhoni) ಕೂಡ ಆ ಕ್ಷಣವನ್ನ ಸಂಭ್ರಮಿಸಿದ್ದು, ಅದರ ವೀಡಿಯೋ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಈ ವೀಡಿಯೋ ತುಣುಕಿನಲ್ಲಿ ಧೋನಿ ಪ್ರತಿ ಕ್ಷಣಕ್ಕೂ ಚಪ್ಪಾಳೆ ತಟ್ಟುತ್ತಾ ಸಂಭ್ರಮಿಸುತ್ತಿರುವುದು ಕಂಡುಬಂದಿದೆ. ಇದನ್ನೂ ಓದಿ: Chandrayaan-3 ಮಿಷನ್ ಸಕ್ಸಸ್: ಚಂದ್ರನ ಅಂಗಳದಲ್ಲಿ ಯಶಸ್ವಿಯಾಗಿ ಕಾಲಿಟ್ಟ ವಿಕ್ರಮ್ ಲ್ಯಾಂಡರ್
Advertisement
ಪ್ರಗ್ಯಾನ್ ರೋವರ್ ಹೊತ್ತ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿಯುವ ಕ್ಷಣವನ್ನ ಬೆಂಗಳೂರು ಇಸ್ರೋ (ISRO) ಕೇಂದ್ರದಿಂದ ನೇರ ಪ್ರಸಾರ ಮಾಡಲಾಗುತ್ತಿತ್ತು. ಇದನ್ನೂ ಓದಿ: ಪಾಕಿಸ್ತಾನದ ಪತ್ರಿಕೆ, ವೆಬ್‌ಸೈಟ್, ಟಿವಿ ಸ್ಕ್ರೀನ್‌ಗಳಲ್ಲಿ ರಾರಾಜಿಸಿದ ಚಂದ್ರಯಾನ-3 ಸಕ್ಸಸ್ ಸುದ್ದಿ
Advertisement
Advertisement
ಜುಲೈ 14: ಚಂದ್ರಯಾನ-3 ಬಾಹ್ಯಾಕಾಶ ನೌಕೆಯನ್ನು ಮಧ್ಯಾಹ್ನ 2:35 ರ ಹೊತ್ತಿಗೆ ಉಡಾವಣೆ. ಎಲ್‌ವಿಎಂ3 ಎಂ4 ಉಡ್ಡಯನ ವಾಹನವು ಚಂದ್ರಯಾನ-3 ಯೋಜನೆಯ ಉಪಕರಣಗಳನ್ನು ಹೊತ್ತು ನಿರ್ದಿಷ್ಟ ಕಕ್ಷೆಗೆ ಸೇರಿಸಿತು.
ಜುಲೈ 15: ಭೂಮಿ ಸುತ್ತಲಿನ ಮೊದಲ ಹಂತದ ಕಕ್ಷೆಗೆ ಎತ್ತರಿಸುವ ಪ್ರಕ್ರಿಯೆ ಯಶಸ್ವಿ. 41,762 ಕಿಮೀx226 ಕಿಮೀ ಕಕ್ಷೆಗೆ.
ಜುಲೈ 17: ಭೂಮಿ ಸುತ್ತಲಿನ ಎರಡನೇ ಹಂತದ ಕಕ್ಷೆಗೆ ಎತ್ತರಿಸುವ ಪ್ರಕ್ರಿಯೆ ಯಶಸ್ವಿ. 41,603 ಕಿಮೀx226 ಕಿಮೀ ಕಕ್ಷೆಗೆ.
ಜುಲೈ 22: ಭೂಮಿ ಸುತ್ತಲಿನ 4ನೇ ಹಂತದ ಕ್ಷಕ್ಷೆಗೆ ಎತ್ತರಿಸುವ ಪ್ರಕ್ರಿಯೆ ಯಶಸ್ವಿ. 71,351 ಕಿಮೀx223 ಕಿಮೀ ಕಕ್ಷೆಗೆ.
ಆಗಸ್ಟ್ 1: ಚಂದ್ರಯಾನ-3 ಚಂದ್ರನ ಸುತ್ತಲಿನ ಕಕ್ಷೆಗೆ ಯಶಸ್ವಿ ಸೇರ್ಪಡೆ.
ಆಗಸ್ಟ್ 6: ಚಂದ್ರನ ಸುತ್ತಲಿನ ಕಕ್ಷೆಯನ್ನು ಕುಗ್ಗಿಸುವಲ್ಲಿ ಯಶಸ್ವಿ. 170 ಕಿಮೀ x 4,313 ಕಿಮೀ.
ಆಗಸ್ಟ್ 9: ಚಂದ್ರನ ಸುತ್ತಲಿನ ಕಕ್ಷೆಯನ್ನು ಮತ್ತೊಂದು ಹಂತಕ್ಕೆ ಇಳಿಸುವಲ್ಲಿ ಯಶಸ್ವಿ. 174 ಕಿಮೀ x 1,437 ಕಿಮೀ.
ಆಗಸ್ಟ್ 14: ಚಂದ್ರನ ಸಮೀಪ ತಲುಪಲು ಕಕ್ಷೆಯ ಮತ್ತೊಂದು ಸುತ್ತು ಇಳಿದ ನೌಕೆ. 150 ಕಿಮೀ x 177 ಕಿಮೀ.
ಆಗಸ್ಟ್ 16: ಚಂದ್ರನ ಸುತ್ತ ಪರಿಭ್ರಮಣೆಯ ಕೊನೆಯ ಹಂತವನ್ನು ಯಶಸ್ವಿಯಾಗಿ ಪೂರೈಸಿದ ಇಸ್ರೋ. 163 ಕಿಮೀ x 153 ಕಿಮೀ.
ಆಗಸ್ಟ್ 17: ಚಂದ್ರಯಾನ-3 ನೌಕೆಯಿಂದ ಪ್ರತ್ಯೇಕಗೊಂಡ ಪ್ರಜ್ಞಾನ್ ರೋವರ್ ಹೊತ್ತ ವಿಕ್ರಮ್ ಲ್ಯಾಂಡರ್.
ಆಗಸ್ಟ್ 18: ಚಂದ್ರಯಾನ-3 ಯಶಸ್ವಿಯಾಗಿ ಡಿಬೂಸ್ಟಿಂಗ್ ಕಾರ್ಯಾಚರಣೆ ನಡೆಸಿ ಕಕ್ಷೆಯ ಅಂತರವನ್ನು 113 ಕಿಮೀ x 157 ಕಿಮೀಗೆ ಇಳಿಸಿದೆ.
ಆಗಸ್ಟ್ 20: ಕೊನೆಯ ಹಂತದ ಕಕ್ಷೆಯನ್ನು ಹೊಂದಿಸುವ ಪ್ರಕ್ರಿಯೆ ಪೂರ್ಣ.
Web Stories