ಇಂದೋರ್: ಆಸ್ಟ್ರೇಲಿಯಾ ವಿರುದ್ಧದ 3ನೇ ಪಂದ್ಯ ಗೆದ್ದು ಸರಣಿ ವಶಪಡಿಸಿಕೊಳ್ಳಲು ಟೀಂ ಇಂಡಿಯಾ ಭರ್ಜರಿ ಸಿದ್ಧತೆ ನಡೆಸಿದೆ. ಭಾನುವಾರ ಪಂದ್ಯ ನಡೆಯಲಿರುವ ಹಿನ್ನೆಲೆಯಲ್ಲಿ ಶನಿವಾರ ನಡೆದ ನೆಟ್ ಪ್ರ್ಯಾಕ್ಟೀಸ್ ವೇಳೆ ಟೀಂ ಇಂಡಿಯಾ ಮಾಜಿ ನಾಯಕ ಹಾಗೂ ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ಸ್ಪಿನ್ ಬೌಲ್ ಮಾಡಿದರು.
ಈಗಾಗಲೇ ಕಳೆದ ಎರಡು ಪಂದ್ಯಗಳಲ್ಲಿ ಆಸೀಸ್ ತಂಡ ಭಾರತದ ಸ್ಪಿನ್ನರ್ ಗಳ ದಾಳಿ ಎದುರಿಸುವಲ್ಲಿ ವಿಫಲವಾಗಿತ್ತು. ಆದರಲ್ಲೂ 2ನೇ ಪಂದ್ಯದಲ್ಲಿ ಕುಲದೀಪ್ ಯಾದವ್ ಹ್ಯಾಟ್ರಿಕ್ ವಿಕೆಟ್ ಗಳಿಸಿದ್ದರು.
Advertisement
ಹೋಳ್ಕರ್ ಕ್ರೀಡಾಂಗಣದಲ್ಲಿ ಅಭ್ಯಾಸದ ವೇಳೆ ಕುಲದೀಪ್ ಯಾದವ್, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ಚಾಹಲ್ ಜೊತೆ ಧೋನಿ ಕೂಡಾ ಸ್ಪಿನ್ ಬೌಲಿಂಗ್ ಪ್ರ್ಯಾಕ್ಟೀಸ್ ಮಾಡಿದ್ದಾರೆ. ಆಫ್ ಸ್ಪಿನ್ ಹಾಗೂ ಲೆಗ್ ಸ್ಪಿನ್ ದಾಳಿ ನಡೆಸಿ ಧೋನಿ ಎಂಜಾಯ್ ಮಾಡಿದ್ದಾರೆ.
Advertisement
Advertisement
ಇದರ ವೀಡಿಯೋವನ್ನು ಬಿಸಿಸಿಐ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಭಾರತದ ಸ್ಪಿನ್ ದಾಳಿಗೆ ಸೇರ್ಪಡೆಯಾಗಿದ್ದು ಯಾರೆಂದು ನೋಡಿ ಎಂದು ಕ್ಯಾಪ್ಷನ್ ಕೊಟ್ಟಿದೆ. ಜೊತೆಗೆ ಇನ್ನೊಂದು ಟ್ವೀಟ್ ನಲ್ಲಿ ಧೋನಿ ಬ್ಯಾಟಿಂಗ್, ಬೌಲಿಂಗ್ ಹಾಗೂ ಧೋನಿ ಸ್ಮೈಲ್ ಫೋಟೋ ಹಾಕಲಾಗಿದೆ.
Advertisement
ಇಂದಿನ ಪಂದ್ಯವನ್ನು ಭಾರತ ಗೆದ್ದರೆ ಭಾರತ 5 ಮ್ಯಾಚ್ ಗಳ ಸರಣಿಯನ್ನು ಗೆದ್ದಂತಾಗುತ್ತದೆ. ಆದರೆ ಇಂದಿನ ಪಂದ್ಯದಲ್ಲಾದರೂ ಆಸೀಸ್ ತಂಡ ಸ್ಪಿನ್ನರ್ ಗಳನ್ನು ದಿಟ್ಟವಾಗಿ ಎದುರಿಸುತ್ತಾ ಎನ್ನುವುದೇ ಎಲ್ಲರ ಮುಂದಿರುವ ಮಿಲಿಯನ್ ಡಾಲರ್ ಪ್ರಶ್ನೆ. ಯಾಕೆಂದರೆ ಈ ಪಂದ್ಯವನ್ನೂ ಸೋತರೆ ಆಸೀಸ್ ಸರಣಿಯನ್ನು ಗೆಲ್ಲುವ ಆಸೆಯನ್ನು ಕೈ ಬಿಡಬೇಕಾಗುತ್ತದೆ.
Look who has joined India’s Spin Attack – @msdhoni pic.twitter.com/JFMatmP0WP
— BCCI (@BCCI) September 23, 2017
Batting ✅
Bowling ✅
Trademark Smile ???? ✅#TeamIndia #INDvAUS pic.twitter.com/Bjp1TxRAoi
— BCCI (@BCCI) September 23, 2017
ಸೆಹ್ವಾಗ್ ಡಬಲ್ ಸೆಂಚುರಿ ಹೊಡೆದ ಕ್ರೀಡಾಂಗಣ ರನ್ ಮಳೆಗೆ ಫೇಮಸ್! https://t.co/aPncNC5vdF#Veerendrasehwag #Cricket pic.twitter.com/J4Bl0buiTX
— PublicTV (@publictvnews) September 23, 2017
ಟೀಂ ಇಂಡಿಯಾ ಭಾನುವಾರ ಗೆದ್ದರೆ ಬ್ಯಾಕ್ ಟು ಬ್ಯಾಕ್ ರೆಕಾರ್ಡ್!https://t.co/sMKtpzJ2Hb#TeamIndia #Australia #Cricket #LuckyGround pic.twitter.com/zsu5GpprXQ
— PublicTV (@publictvnews) September 23, 2017