– ಭಾರತದ ಕ್ರಿಕೆಟ್ ಇತಿಹಾಸದಲ್ಲಿ ಮಹಿ ನಡೆದು ಬಂದ ಹಾದಿ ನಿಮಗೆಷ್ಟು ಗೊತ್ತು.?
ಮುಂಬೈ: ಭಾರತ ಕ್ರಿಕೆಟ್ ತಂಡದ ಮೋಸ್ಟ್ ಸಕ್ಸಸ್ ಫುಲ್ ಕ್ಯಾಪ್ಟನ್ ಎಂ.ಎಸ್ ಧೋನಿ (MS Dhoni) ಅವರು 42ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿಯಾಗಿರುವ ಧೋನಿ ಅವರ ನಾಯಕತ್ವದಲ್ಲಿ ಟೀಂ ಇಂಡಿಯಾ (Team India) ಮಹತ್ವದ ದಾಖಲೆಗಳನ್ನು ಬರೆದಿದೆ.
Happy Birthday Boss ????????#HappyBirthdayMSDhoni pic.twitter.com/dAuxtm82r5
— Anubhav (@incognito_ffs) July 7, 2023
Advertisement
ವಿಶ್ವ ಶ್ರೇಷ್ಠ ನಾಯಕ ʻದಿ ಲೆಜೆಂಡ್ʼ (The Legend)ಎಂದೇ ಪರಿಗಣಿತವಾಗಿರುವ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಅವರಿಗೆ ಹಾಲಿ-ಮಾಜಿ, ಅಭಿಮಾನಿಗಳು ಸೇರಿದಂತೆ ವಿಶ್ವಾದ್ಯಂತ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಜಾಲತಾಣದಲ್ಲೂ ಟಾಪ್ ಟ್ರೆಂಡ್ ಮಹಿ ಇದ್ದಾರೆ. ಅಭಿಮಾನಿಗಳು ಕೆಜಿಎಫ್ ಟ್ರೇಲರ್ ಮ್ಯೂಸಿಕ್ ಹಾಗೂ ಡೈಲಾಗ್ ಬಳಸಿಕೊಂಡು ಮಹಿಗಾಗಿ ವಿಶೇಷ ಟ್ರೈಲರ್ ಸಹ ಬಿಡುಗಡೆ ಮಾಡಿದ್ದಾರೆ. ಇನ್ನೂ ಕೆಲವರು ವಿಶೇಷ ಪೇಯಿಂಟಿಗ್ ಮಾಡಿ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
Advertisement
ಟೀಂ ಇಂಡಿಯಾದಲ್ಲಿ ಮಹಿ ನಡೆದು ಬಂದ ಹಾದಿ:
ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಭಾರತ ತಂಡ 2007 ಐಸಿಸಿ ಟಿ20 ವಿಶ್ವಕಪ್ ಗೆದ್ದಿತ್ತು. ನಂತರ, 2011ರಲ್ಲಿ ತವರಿನಲ್ಲಿ ನಡೆದಿದ್ದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿಯೂ ಭಾರತಕ್ಕೆ 2ನೇ ವಿಶ್ವಕಪ್ ತಂದುಕೊಟ್ಟಿದ್ದರು. 2013ರಲ್ಲಿ ಭಾರತಕ್ಕೆ ಚಾಂಪಿಯನ್ಸ್ ಟ್ರೋಫಿ ತಂದುಕೊಟ್ಟಿದ್ದರು. ಆ ಮೂಲಕ ಐಸಿಸಿ ಹೆಚ್ಚು ಟ್ರೋಫಿಗಳನ್ನು ಗೆದ್ದ ಭಾರತದ ಏಕೈಕ ನಾಯಕ ಎಂಬ ಖ್ಯಾತಿಗೆ ಧೋನಿ ಭಾಜನರಾಗಿದ್ದರು.
Advertisement
Advertisement
2004ರ ಡಿಸೆಂಬರ್ 24 ರಂದು ಬಾಂಗ್ಲಾದೇಶ ವಿರುದ್ಧ ಎಂ.ಎಸ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಆ ಸರಣಿಯಲ್ಲಿ ವಿಫಲರಾದ ಧೋನಿ, 2005ರ ಪಾಕಿಸ್ತಾನ ವಿರುದ್ಧದ ಏಕದಿನ ಸರಣಿಯಲ್ಲಿ ಕ್ಲಿಕ್ ಆದರು. ವಿಶಾಖಪಟ್ಟಣಂನಲ್ಲಿ ನಡೆದಿದ್ದ 5ನೇ ಪಂದ್ಯದಲ್ಲಿ ಚೊಚ್ಚಲ ಶತಕ ಸಿಡಿಸಿದ್ದರು. ಆನಂತರ ಮಹಿ ಒಂದೊಂದೇ ಮೈಲುಗಲ್ಲು ಸಾಧಿಸುತ್ತಾ ಹೋದರು. ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್‌ನಲ್ಲಿನ ಸಾಧನೆ ಪರಿಗಣಿಸಿ ಭಾರತ ಸರ್ಕಾರ ರಾಜೀವ್ ಗಾಂಧಿ ಖೇಲ್ ರತ್ನ (2007), ಪದ್ಮ ಶ್ರೀ (2009) ಹಾಗೂ ಪದ್ಮ ಭೂಷಣ್ (2018) ನೀಡಿ ಗೌರವಿಸಿದೆ. ಇದನ್ನೂ ಓದಿ: ಯಾರ ಜೊತೆ, ಎಲ್ಲಿ ಬೇಕಾದ್ರೂ ಆಡೋಕೆ ನಾವ್ ರೆಡಿ – ಪಾಕ್ ತಂಡ ಭಾರತಕ್ಕೆ ಬರೋದು ಖಚಿತ; ಬಾಬರ್ ಆಜಂ
ಮಹೇಂದ್ರ ಸಿಂಗ್ ತಮ್ಮ ವೃತ್ತಿ ಜೀವನದಲ್ಲಿ 90 ಟೆಸ್ಟ್ ಪಂದ್ಯಗಳಿಂದ 38.1 ಸರಾಸರಿಯಲ್ಲಿ 4,876 ರನ್ ಗಳಿಸಿದ್ದಾರೆ. ಕ್ಯಾಪ್ಟನ್ ಆಗಿ ಪ್ರತಿನಿಧಿಸಿದ 60 ಟೆಸ್ಟ್ ಪಂದ್ಯಗಳಲ್ಲಿ 27 ಪಂದ್ಯಗಳಲ್ಲಿ ಗೆಲುವು ತಂದುಕೊಟ್ಟಿದ್ದಾರೆ. 18 ಪಂದ್ಯಗಳಲ್ಲಿ ಸೋಲಾಗಿದ್ದು, 15 ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿವೆ. ಇದರಲ್ಲಿ 6 ಶತಕಗಳು ಹಾಗೂ 33 ಅರ್ಧಶತಕಗಳನ್ನು ಗಳಿಸಿದ್ದಾರೆ. 350 ಏಕದಿನ ಪಂದ್ಯಗಳಿಂದ 50.6 ಸರಾಸರಿಯಲ್ಲಿ 10,773 ರನ್‌ಗಳನ್ನು ಗಳಿಸಿದ್ದಾರೆ. ಇದರಲ್ಲಿ 10 ಶತಕಗಳು ಹಾಗೂ 73 ಅರ್ಧಶತಕಗಳು ಒಳಗೊಂಡಿವೆ. 98 ಟಿ20 ಪಂದ್ಯಗಳಿಂದ 1617 ರನ್ ಗಳಿಸಿದ್ದು, ಎರಡು ಅರ್ಧ ಶತಕ ಬಾರಿಸಿದ್ದಾರೆ. 2010-11 ಮತ್ತು 2012-13ರ ಬಾರ್ಡರ್-ಗವಾಸ್ಕರ್ ಟೆಸ್ಟ್ ಟ್ರೋಫಿ ಸರಣಿಯಲ್ಲಿ ಆಸ್ಟ್ರೇಲಿಯಾವನ್ನು ವೈಟ್‌ವಾಶ್ ಮಾಡಿದ ಏಕೈಕ ಭಾರತೀಯ ನಾಯಕ ಸಹ ಎನಿಸಿಕೊಂಡಿದ್ದಾರೆ.
ಅಷ್ಟೇ ಅಲ್ಲದೇ 200 ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿರುವ ಮಹಿ ಅದರಲ್ಲಿ 110 ಪಂದ್ಯಗಳಲ್ಲಿ ಜಯ ತಂದುಕೊಟ್ಟಿದ್ದಾರೆ. 74 ಪಂದ್ಯಗಳಲ್ಲಿ ಭಾರತ ಸೋತಿದ್ದು, 5 ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿವೆ. 11 ಪಂದ್ಯಗಳಲ್ಲಿ ಯಾವುದೇ ಫಲಿತಾಂಶವಿಲ್ಲದೇ ಹೋಯಿತು. 72 ಅಂತಾರಾಷ್ಟ್ರೀಯ ಟಿ20 ಗಳಲ್ಲಿ ಟೀಂ ಇಂಡಿಯಾ ನಾಯಕತ್ವ ವಹಿಸಿ 41ರಲ್ಲಿ ಜಯ ತಂದುಕೊಟ್ಟಿದ್ದಾರೆ. 28 ಪಂದ್ಯಗಳಲ್ಲಿ ಭಾರತ ಸೋತಿದೆ. 2 ಪಂದ್ಯಗಳು ಫಲಿತಾಂಶ ನೀಡಲು ವಿಫಲವಾಗಿದ್ದು, ಒಂದು ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ. ಇದನ್ನೂ ಓದಿ: ICC World Cup 2023: ಟೀಂ ಇಂಡಿಯಾ ಪರಿಷ್ಕೃತ ವೇಳಾಪಟ್ಟಿ ರಿಲೀಸ್ – ಇಲ್ಲಿದೆ ಡಿಟೇಲ್ಸ್
IPL ನಲ್ಲಿ 5 ಬಾರಿ ಚಾಂಪಿಯನ್:
ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನ ಮುನ್ನಡೆಸುತ್ತಿರುವ ಎಂ.ಎಸ್ ಧೋನಿ 2010, 2011, 2018, 2021 ಮತ್ತು 2023ರಲ್ಲಿ ಚಾಂಪಿಯನ್ ಟ್ರೋಫಿ ಗೆದ್ದಿದ್ದಾರೆ. ಈ ಮೂಲಕ ಐಪಿಎಲ್‌ನಲ್ಲೂ ಯಶಸ್ವಿ ನಾಯಕ ಎನಿಸಿಕೊಂಡಿದ್ದು, 250 ಪಂದ್ಯಗಳನ್ನಾಡಿದ ಸಾಧನೆ ಮಾಡಿದ್ದಾರೆ. 38.79 ಸರಾಸರಿಯಲ್ಲಿ 5,082 ರನ್ ಪೂರೈಸಿದ್ದಾರೆ. ಐಪಿಎಲ್‌ನಲ್ಲಿ 24 ಅರ್ಧಶತಕಗಳನ್ನ ಬಾರಿಸಿದ್ದಾರೆ. ಅವರು 142 ಕ್ಯಾಚ್‌ಗಳು, 42 ಸ್ಟಂಪಿಂಗ್‌ಗಳನ್ನು ಸಹ ಹೊಂದಿದ್ದಾರೆ.
ಧೋನಿ ನಾಯಕತ್ವದಲ್ಲಿ ಗೆದ್ದ ಪ್ರಮುಖ ಟ್ರೋಫಿಗಳು:
2007ರ ಐಸಿಸಿ ಟಿ20 ವಿಶ್ವಕಪ್.
2008ರ ಸಿಬಿ ಸೀರೀಸ್ (ಆಸ್ಟ್ರೇಲಿಯಾ-ಶ್ರೀಲಂಕಾ ವಿರುದ್ಧ)
2009ರ ಕಾಂಪ್ಯಾಕ್ ಕಪ್
2010ರ ಏಷ್ಯಾ ಕಪ್
2011ರ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್
2013ರ ಐಸಿಸಿ ಚಾಂಪಿಯನ್ಸ್ ಟ್ರೋಫಿ
2013ರಲ್ಲಿ ವೆಸ್ಟ್ ಇಂಡೀಸ್‌ನಲ್ಲಿ ತ್ರಿಕೋನ ಸರಣಿ
2016ರ ಏಷ್ಯಾಕಪ್ ಟೂರ್ನಿ
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಹಿ ಸಾಧನೆ:
538 ಪಂದ್ಯಗಳು
17,266 ರನ್‌ಗಳು
16 ಶತಕಗಳು
108 ಅರ್ಧಶತಕಗಳು
359 ಸಿಕ್ಸರ್ಸ್
634 ಕ್ಯಾಚಸ್
195 ಸ್ಟಂಪಿಂಗ್ಸ್
224 ಟೆಸ್ಟ್‌ನಲ್ಲಿ ಗರಿಷ್ಠ ಸ್ಕೋರ್
183 ಒಡಿಐನಲ್ಲಿ ಗರಿಷ್ಠ ಸ್ಕೋರ್
Web Stories