CricketLatestLeading NewsMain PostSports

ಕೂಲ್ ಕ್ಯಾಪ್ಟನ್ ಮಾಹಿ ಮತ್ತೊಂದು ಮೈಲಿಗಲ್ಲಿಗೆ ಸಜ್ಜು

ಮುಂಬೈ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಇಂದು ಮತ್ತೊಂದು ಮೈಲಿಗಲ್ಲು ಸಾಧಿಸಲು ಸಜ್ಜಾಗುತ್ತಿದ್ದಾರೆ.

ಎಂಎಸ್‌ಡಿ CSK ನಾಯಕತ್ವಕ್ಕೆ ಮರಳುತ್ತಿದ್ದಂತೆ ಜಯದ ಹಾದಿ ಹಿಡಿದಿರುವ ಚೆನ್ನೈ ಕಳೆದ ವಾರ ಹೈದ್ರಾಬಾದ್ ತಂಡದ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದೆ. ಕಳೆದ 9 ಪಂದ್ಯಗಳಲ್ಲಿ ಸಿಎಸ್‌ಕೆ 3 ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ದು, ಐಪಿಎಲ್ ಅಂಕಪಟ್ಟಿಯಲ್ಲಿ 9ನೇ ಸ್ಥಾನ ಪಡೆದುಕೊಂಡಿದೆ. ಹಾಗೆಯೇ ಸತತ 2 ಪಂದ್ಯಗಳಲ್ಲಿ ಸೋಲು ಕಂಡಿರುವ ಆರ್‌ಸಿಬಿ ಹ್ಯಾಟ್ರಿಕ್ ಸೋಲಿನಿಂದ ತಪ್ಪಿಸಿಕೊಳ್ಳುವ ತವಕದಲ್ಲಿದೆ. ಕಳೆದ ಪಂದ್ಯದಿಂದ ಬ್ಯಾಟಿಂಗ್ ಲಯಕ್ಕೆ ಮರಳಿರುವ ಕೊಹ್ಲಿ ಇಂದೂ ಉತ್ತಮ ಆಟವಾಡುವ ನಿರೀಕ್ಷೆ ಇದೆ.

MS DHONI (2)

ಇಂದು ನಾಯಕ ಧೋನಿ ಸಿಎಸ್‌ಕೆ ನೆಚ್ಚಿನ ಎದುರಾಳಿಯಾಗಿರುವ RCB ತಂಡವನ್ನು ಎದುರಿಸುವ ಮೂಲಕ ಮತ್ತೊಂದು ಮೈಲಿಗಲ್ಲು ಸಾಧಿಸಲು ಮುಂದಾಗುತ್ತಿದ್ದಾರೆ. ಇಂದು ಐಪಿಎಲ್‌ನಲ್ಲಿ ತನ್ನ 200ನೇ ಪಂದ್ಯವನ್ನಾಡಲಿದ್ದು, ಒಂದೇ ಫ್ರಾಂಚೈಸಿಯಲ್ಲಿ 200 ಪಂದ್ಯಗಳನ್ನು ಆಡಿದ 2ನೇ ಆಟಗಾರ (ಭಾರತೀಯ) ಎಂಬ ಖ್ಯಾತಿಗೆ ಪಾತ್ರವಾಗುತ್ತಿದ್ದಾರೆ. ಇದನ್ನೂ ಓದಿ: ಶಿಖರ್‌, ರಬಾಡ ಅಮೋಘ ಆಟ- ಗುಜರಾತ್‌ ಟೈಟಾನ್ಸ್‌ ಧೂಳಿಪಟ

MS DHONI

ಕಳೆದ ಋತುವಿನಲ್ಲಿ ವಿರಾಟ್ ಕೊಹ್ಲಿ RCB ತಂಡದಲ್ಲಿ ತನ್ನ 200 ಪಂದ್ಯಗಳನ್ನು ಪೂರೈಸಿದರು. ಈವರೆಗೆ ಕೊಹ್ಲಿ 217 ಪಂದ್ಯಗಳನ್ನು ಐಪಿಎಲ್‌ನಲ್ಲಿ ಆಡಿದ್ದು, ಒಂದೇ ತಂಡದಲ್ಲಿ ಆಡಿದ ಏಕೈಕ ಆಟಗಾರ ಎಂಬ ಖ್ಯಾತಿ ಪಡೆದಿದ್ದಾರೆ. ಆರ್‌ಸಿಬಿ ನಾಯಕ ಹಾಗೂ ಮಾಜಿ ನಾಯಕನಾಗಿ ಕೊಹ್ಲಿ 6,451 ರನ್‌ಗಳಿಸಿದ್ದಾರೆ. 5 ಶತಕ, 48 ಅರ್ಧಶತಕಗಳೂ ಇದರಲ್ಲಿ ಸೇರಿವೆ. ಇನ್ನೂ ಭ್ರಷ್ಟಾಚಾರದ ಆರೋಪಗಳಿಂದಾಗಿ 2016 ಮತ್ತು 2017ರಲ್ಲಿ ಸಿಎಸ್‌ಕೆ ಅಮಾನತುಗೊಂಡ ಕಾರಣ ಧೋನಿ ನಿಷ್ಕಿçಯಗೊಂಡ ರೈಸಿಂಗ್ ಪುಣೆ ತಂಡದಲ್ಲಿ 28 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಅದಾದ ಬಳಿಕ ಸಿಎಸ್‌ಕೆ ತಂಡಕ್ಕೆ ಮರಳಿದ ಧೋನಿ ಇಂದು ತನ್ನ 200ನೇ ಪಂದ್ಯ ಪೂರೈಸಲಿದ್ದಾರೆ. ಇದನ್ನೂ ಓದಿ: ರಾಜಸ್ಥಾನ್‌ ವಿರುದ್ಧ ಗೆದ್ರೆ 50 ರಸಗುಲ್ಲ ತಿನ್ನುತ್ತೇನೆ ಎಂದಿದ್ದ ಫ್ಯಾನ್‌ಗೆ ʻವಿಕ್ಟರಿʼ ಬಳಿಕ ಕೆಕೆಆರ್‌ ಹೇಳಿದ್ದೇನು?

DHONI

RCB ಹಾಗೂ ಚೆನ್ನೈ ತಂಡಗಳು ಈವರೆಗೆ 28 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಚೆನ್ನೈ 19 ಪಂದ್ಯಗಳಲ್ಲಿ ಜಯ ಸಾಸಿಧಿಸಿದ್ದರೆ, RCB ಕೇವಲ 9 ಪಂದ್ಯಗಳಲ್ಲಿ ಮಾತ್ರ ಗೆಲುವು ದಾಖಲಿಸಿದೆ. ಇಂದು ಪುಣೆಯ ಎಂಸಿಎ ಕ್ರೀಡಾಂಗಣದಲ್ಲಿ 29ನೇ ಪಂದ್ಯ ನಡೆಯಲಿದೆ.

Leave a Reply

Your email address will not be published.

Back to top button