ಮುಂಬೈ: ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್ ಧೋನಿ ಅವರು ತಮ್ಮ ಮಗಳು ಜೀವಾ ಧೋನಿ ಜೊತೆಯಿರುವ ಮುದ್ದಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಧೋನಿ ಶುಕ್ರವಾರ ತಮ್ಮ ಮಗಳ ಜೊತೆಯಿರುವ ವಿಡಿಯೋವನ್ನು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಜೀವಾ ತನ್ನ ತಂದೆಗೆ ಕ್ಯಾರೆಟ್ ತಿನ್ನಿಸುತ್ತಿದ್ದಾಳೆ. ಸದ್ಯ ಧೋನಿ ಈ ವಿಡಿಯೋಗೆ ‘ಜೀವಾಳ ಬಗ್ಸ್ ಬನ್ನಿ’ ಎಂದು ಕ್ಯಾಪ್ಷನ್ ನೀಡಿ ಪೋಸ್ಟ್ ಮಾಡಿದ್ದಾರೆ.
Advertisement
Advertisement
ಧೋನಿ ಪೋಸ್ಟ್ ಮಾಡಿದ ಈ ವಿಡಿಯೋದಲ್ಲಿ ಯಾವುದೇ ಆಡಿಯೋವಿಲ್ಲ. ಆದರೆ ಮುಖದ ಭಾವನೆಯ ಮೂಲಕವೇ ಜೀವಾ ಎಲ್ಲರ ಗಮನ ಸೆಳೆದಿದ್ದಾಳೆ. ಸದ್ಯ ಧೋನಿ ಹಾಗೂ ಜೀವಾಳ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
Advertisement
ಏಕದಿನ ಪಂದ್ಯದ ನಂತರ ಧೋನಿ ಅವರನ್ನು ಆಸ್ಟ್ರೇಲಿಯಾ ತಂಡದ ವಿರುದ್ಧ ನಡೆಯುವ ಟಿ20 ಅಂತರಾಷ್ಟ್ರೀಯ ಪಂದ್ಯದಿಂದ ಕೈಬಿಡಲಾಯಿತು. ಸದ್ಯ ಈಗ ವಿಶ್ರಾಂತಿಯಲ್ಲಿರುವ ಧೋನಿ ಅವರು ತಮ್ಮ ಮಗು ಜೀವಾ ಜೊತೆ ಸಮಯವನ್ನು ಕಳೆಯುತ್ತಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv