‘ಸೀತಾ ರಾಮಂ’ ನಟಿ ಮೃಣಾಲ್ ಠಾಕೂರ್ (Mrunal Thakur) ಸೌತ್ ಮತ್ತು ಬಾಲಿವುಡ್ ಚಿತ್ರಗಳಲ್ಲಿ ನಟಿಸಲು ಬಂಪರ್ ಅವಕಾಗಳು ಸಿಗುತ್ತಿವೆ. ಸೌತ್‌ನಲ್ಲಿ ಬ್ಯಾಕ್ ಟು ಬ್ಯಾಕ್ ಹಿಟ್ ಕೊಟ್ಟಿರುವ ಸುಂದರಿಗೆ ಬಾಲಿವುಡ್‌ನಲ್ಲಿ ಸಂಜಯ್ ಲೀಲಾ ಬನ್ಸಾಲಿ ಸಿನಿಮಾದಲ್ಲಿ ನಟಿಸುವ ಚಾನ್ಸ್ ಸಿಕ್ಕಿರುವ ಕುರಿತು ಹರಿದಾಡುತ್ತಿದೆ.
- Advertisement -
ಸಂಜಯ್ ಲೀಲಾ ಬನ್ಸಾಲಿ (Sanjay Leela Bansali) ನಿರ್ಮಾಣದ ಸಿನಿಮಾದಲ್ಲಿ ಮೃಣಾಲ್ ಹೀರೋಯಿನ್ ಆಗಿ ನಟಿಸಲು ಬುಲಾವ್ ಬಂದಿದೆ ಎನ್ನಲಾಗಿದೆ. ಯುವ ನಟ ಸಿದ್ಧಾಂತ್ ಚತುರ್ವೇದಿ ಮತ್ತು ಮೃಣಾಲ್‌ರನ್ನು ಜೋಡಿಯಾಗಿ ಹೊಸ ಲವ್ ಸ್ಟೋರಿ ಒಳಗೊಂಡ ಸಿನಿಮಾ ಮಾಡಲು ಚಿತ್ರತಂಡ ಸಜ್ಜಾಗಿದೆ. ಇದನ್ನೂ ಓದಿ:ಚಿತ್ರರಂಗದಲ್ಲಿ ಮಹಿಳೆಯರಿಗೆ ಸುರಕ್ಷತೆ ಬೇಕು: ಅನನ್ಯಾ ಪಾಂಡೆ
- Advertisement -
- Advertisement -
ಇನ್ನೂ ಈ ಚಿತ್ರಕ್ಕೆ ‘ತುಮ್ ಹಿ ಹೋ’ (Tum Hi Ho) ಟೈಟಲ್ ಇಡಲಾಗಿದೆ. ರವಿ ಉದ್ಯಾವರ್ ಅವರು ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಮೇ 2023ರಿಂದಲೇ ಸಿನಿಮಾ ಕೆಲಸ ಶುರುವಾಗಿದೆ. ಇನ್ನೂ ಸೆಪ್ಟೆಂಬರ್ ಅಂತ್ಯದಲ್ಲಿ ಮುಂದಿನ ಶೆಡ್ಯೂಲ್ ಶೂಟಿಂಗ್ ಉತ್ತರಾಖಂಡದಲ್ಲಿ ನಡೆಯಲಿದೆ.
- Advertisement -
ಮೊದಲ ಬಾರಿಗೆ ಸಿದ್ಧಾಂತ್ ಮತ್ತು ಮೃಣಾಲ್ ಜೊತೆಯಾಗಿ ನಟಿಸುತ್ತಿರುವ ಹಿನ್ನೆಲೆ ಈ ಚಿತ್ರದ ಮೇಲೆ ಫ್ಯಾನ್ಸ್ಗೆ ಭಾರೀ ನಿರೀಕ್ಷೆಯಿದೆ. ಯಶಸ್ಸಿಗಾಗಿ ನಟಿ ಕೂಡ ಎದುರು ನೋಡ್ತಿದ್ದಾರೆ.