ತಮಿಳು ನಟ ಧನುಷ್ (Dhanush) ಹಾಗೂ ಮೃಣಾಲ್ ಠಾಕೂರ್ (Mrunal Thakur) ಇತ್ತೀಚೆಗೆ ಡೇಟಿಂಗ್‌ನಲ್ಲಿ ಇದ್ದಾರೆ. ಒಟ್ಟೊಟ್ಟಿಗೆ ಹಲವಾರು ವೇದಿಕೆ ಕಾರ್ಯಕ್ರಮದಲ್ಲಿ ಭಾಗಿಯಾದ ವಿಡಿಯೋ ಹಾಗೂ ಫೋಟೋಗಳು ವೈರಲ್ ಆಗಿದ್ದವು. ಇದೀಗ ಇದೆಲ್ಲ ಕಾರಣಗಳಿಗೆ ಮತ್ತಷ್ಟು ಪುಷ್ಟಿಕೊಡುವಂತೆ ನಟಿ ಮೃಣಾಲ್ ಅವರು ಧನುಷ್ ಪೋಸ್ಟ್‌ಗೆ ಕಮೆಂಟ್ ಮಾಡಿ ಸಿಕ್ಕಾಕಿಕೊಂಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಧನುಷ್ ಅವರು ಹಂಚಿಕೊಂಡ ಫೋಟೋಗೆ ಮೃಣಾಲ್ ಠಾಕೂರ್ ಭಾರಿ ಉತ್ಸಾಹದಲ್ಲಿ ಕಮೆಂಟ್ ಮಾಡಿದ್ದಾರೆ. `ಸರ್..ಎಂಥ ಅದ್ಭುತ ಪಯಣ. ಬ್ಲಾಕ್ ಬಸ್ಟರ್, ಕಲ್ಟ್, ಲೆಗೆಸಿ’ ಎಂದ ಅವರು ಕಮೆಂಟ್ ಮಾಡಿದ್ದು, ಅದಕ್ಕೆ ಧನುಷ್ ಪ್ರತಿಕ್ರಿಯೆ ನೀಡಿದ್ದಾರೆ. ಅಪ್ಪುಗೆ ಮತ್ತು ಬಿಳಿ ಹಾರ್ಟ್ ಎಮೋಜಿಯನ್ನು ಧನುಷ್ ಕಮೆಂಟ್ ಮಾಡಿದ್ದಾರೆ. ಈ ಪೋಸ್ಟ್ ಈಗ ವೈರಲ್ ಆಗುತ್ತಿದೆ. ಸೌತ್ ಇಂದ ಹಿಡಿದು ಬಾಲಿವುಡ್ ವರೆಗೂ ಈ ಸುದ್ದಿ ಗಾಳಿಯಲ್ಲಿ ಗುಲ್ಲೆಬ್ಬಿಸಿದೆ. ಇದನ್ನೂ ಓದಿ: ನಗ್ನ ದೃಶ್ಯದಲ್ಲಿ ನಟಿಸೋಕೆ ನಾನು ರೆಡಿ ಎಂದ ಆಂಡ್ರಿಯಾ!
View this post on Instagram

