ಖ್ಯಾತ ನಟ ನಟ ಧನುಷ್ (Dhanush) ಮತ್ತು ನಟಿ ಮೃಣಾಲ್ ಠಾಕೂರ್ (Mrunal Thakur) ನಡುವೆ ಲವ್ ಇದೆ, ಇಬ್ಬರು ಡೇಟಿಂಗ್ ಮಾಡ್ತಿದ್ದಾರೆ ಅನ್ನೋ ವದಂತಿಗೆ ಖುದ್ದು ಮೃಣಾಲ್ ತೆರೆ ಎಳೆದಿದ್ದಾರೆ.
Dhanush and Mrunal Thakur are dating? pic.twitter.com/ItWYJdsm8a
— Aryan (@Pokeamole_) August 3, 2025
ಕೆಲ ದಿನಗಳಿಂದ ಮೃಣಾಲ್ ಜೊತೆಗೆ ಧನುಷ್ ಡೇಟಿಂಗ್ (Dating Rumours) ನಡೆಸುತ್ತಿದ್ದಾರೆ ಅನ್ನೋ ವದಂತಿ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡ್ತಿತ್ತು. ಆದ್ರೆ ಈ ಬಗ್ಗೆ ಧನುಷ್ ಆಗಲಿ, ನಟಿ ಆಗಲಿ ಯಾವುದೇ ರಿಯಾಕ್ಷನ್ ಕೊಟ್ಟಿರಲಿಲ್ಲ. ಆದರೀಗ ಮೃಣಾಲ್ ಠಾಕೂರ್ ಅವ್ರೇ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್; ದರ್ಶನ್, ಪವಿತ್ರಾ ಗೌಡ ಸೇರಿ ಆರೋಪಿಗಳು ನ್ಯಾಯಾಲಯಕ್ಕೆ ಹಾಜರು
ನಾನು ಮತ್ತು ಧನುಷ್ ಉತ್ತಮ ಸ್ನೇಹಿತರು. ನಮ್ಮಿಬ್ಬರ ಬಗ್ಗೆ ಬಹಳಷ್ಟು ಸುದ್ದಿಗಳು ಹರಿದಾಡುತ್ತಿವೆ ಅನ್ನೋದು ಗಮನಕ್ಕೆ ಬಂದಿದೆ. ಮೊದಲು ನೋಡಿದಾಗ ತಮಾಷೆಗೆ ಅಂದುಕೊಂಡಿದ್ದೆ. ‘ಸನ್ ಆಫ್ ಸರ್ದಾರ್ 2’ ಸಿನಿಮಾದ ಪ್ರೀಮಿಯರ್‌ಗೆ ಧನುಷ್ ಹಾಜರಾಗಿದ್ದರು. ಹಾಗಂದ ಮಾತ್ರಕ್ಕೆ ಯಾರೂ ಅದನ್ನ ತಪ್ಪಾಗಿ ಅರ್ಥೈಸಿಕೊಳ್ಳಬಾರದು. ಅಂದಹಾಗೆ, ಧನುಷ್ ಅವರನ್ನು ಅಜಯ್ ದೇವಗನ್ ಆಹ್ವಾನಿಸಿದ್ದರು ಎಂದು ಹೇಳಿದ್ದಾರೆ. ಇದನ್ನೂ ಓದಿ: `ಭಾಷಾ’ಗಿಂತ `ಓಂ’ ಸಿನಿಮಾ ಹತ್ತು ಪಟ್ಟು ಬೆಟರ್- ಉಪ್ಪಿ ಹೊಗಳಿದ ರಜನಿಕಾಂತ್
ಡೇಟಿಂಗ್ ವದಂತಿ ಹಬ್ಬಿದ್ದೇಕೆ?
ಈಚೆಗೆ ಮೃಣಾಲ್ ಠಾಕೂರ್ ಅವರ ಹುಟ್ಟುಹಬ್ಬವಿತ್ತು. ಅಲ್ಲಿಗೆ ಧನುಷ್ ಆಗಮಿಸಿದ್ದರು. ಅದಕ್ಕೂ ಮುನ್ನ ಅಜಯ್ ದೇವ್‌ಗನ್ ಮತ್ತು ಮೃಣಾಲ್ ಠಾಕೂರ್ ನಟನೆಯ ‘ಸನ್ ಆಫ್ ಸರ್ದಾರ್ 2’ ಸಿನಿಮಾದ ಪ್ರೀಮಿಯರ್ ಶೋಗೂ ಧನುಷ್ ಆಗಮಿಸಿದ್ದರು. ಈ ವೇಳೆ ಪ್ರೀಮಿಯರ್ ರೆಡ್ ಕಾರ್ಪೆಟ್ ಬಳಿ ಧನುಷ್ ಬಂದಾಗ, ಸ್ವತಃ ಮೃಣಾಲ್ ಹೋಗಿ ಕರೆದುಕೊಂಡು ಬಂದಿದ್ದರು. ಆ ಕ್ಷಣದ ಅವರಿಬ್ಬರ ನಡುವಿನ ಆಪ್ತತೆ ಹಲವರ ಕಣ್ಣು ಕುಕ್ಕಿತ್ತು. ಹೀಗಾಗಿ ಇಬ್ಬರ ನಡುವೆ ಸಂಥಿಗ್, ಸಂಥಿಕ್ ನಡೀತಿದೆ ಎಂದೇ ಹೇಳಲಾಗಿತ್ತು.
ಐಶ್ವರ್ಯಾರಿಂದ ದೂರವಾಗಿರುವ ಧನುಷ್
ಸೂಪರ್ ಸ್ಟಾರ್ ರಜನಿಕಾಂತ್ ಅವರ ಹಿರಿಯ ಪುತ್ರಿ ಐಶ್ವರ್ಯಾ ಅವರನ್ನು ನಟ ಧನುಷ್ ಪ್ರೀತಿಸಿ ಮದುವೆ ಆಗಿದ್ದರು. ಆದರೆ 2022ರಲ್ಲಿ ಇವರು ದೂರವಾಗುತ್ತಿರುವುದಾಗಿ ಹೇಳಿಕೊಂಡಿದ್ದರು. ಬಳಿಕ 2024ರ ನವೆಂಬರ್‌ನಲ್ಲಿ ನ್ಯಾಯಾಲಯವು ಇವರಿಗೆ ವಿಚ್ಛೇದನ ನೀಡಿತ್ತು. ಇದನ್ನೂ ಓದಿ: ಉಂಗುರಕ್ಕೆ 9ನೇ ವರ್ಷದ ಸಂಭ್ರಮ – ವಿಶೇಷ ನೆನಪು ಹಂಚಿಕೊಂಡ ರಾಧಿಕಾ