ನವದೆಹಲಿ: ಕೊರೊನಾ ವೈರಸ್ ರೂಪಾಂತರಿ ಓಮಿಕ್ರಾನ್ ಹರಡುವ ಭೀತಿ ಇರುವುದರಿಂದ ಭಾರತದಲ್ಲಿ ಅಂತಾರಾಷ್ಟ್ರೀಯ ವಿಮಾನ ಪ್ರಯಾಣಕ್ಕೆ ನಿರ್ಬಂಧ ವಿಧಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮನವಿ ಮಾಡಿದ್ದಾರೆ.
ಹಿಂದಿಯಲ್ಲಿ ಟ್ವೀಟ್ ಮಾಡಿರುವ ಕೇಜ್ರಿವಾಲ್, ಓಮಿಕ್ರಾನ್ ಪೀಡಿತ ದೇಶಗಳಿಂದ ಆಗಮಿಸುವ ವಿಮಾನಗಳಿಗೆ ಹಲವು ದೇಶಗಳು ನಿರ್ಬಂಧ ವಿಧಿಸಿವೆ. ಆದರೆ ನಮ್ಮಲ್ಲಿ ಏಕೆ ವಿಳಂಬವಾಗುತ್ತಿದೆ. ಹೊಸ ತಳಿ ಹರಡುವಿಕೆ ನಿಯಂತ್ರಣಕ್ಕಾಗಿ ಇಸ್ರೇಲ್, ಜಪಾನ್ ದೇಶಗಳು ಸಹ ಪ್ರಯಾಣ ನಿರ್ಬಂಧಗಳನ್ನು ಘೋಷಿಸಿವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: OMICRON ಸೋಂಕಿಗೆ ಪ್ರತ್ಯೇಕ ಆಸ್ಪತ್ರೆ: ದೆಹಲಿ ಸರ್ಕಾರ
Advertisement
Advertisement
ಕೋವಿಡ್ ಮೊದಲ ಅಲೆ ಸಂದರ್ಭದಲ್ಲೂ ಭಾರತದಲ್ಲಿ ಅಂತಾರಾಷ್ಟ್ರೀಯ ವಿಮಾನಯಾನ ರದ್ದುಗೊಳಿಸಲು ವಿಳಂಬ ಮಾಡಲಾಯಿತು. ಬಹುಪಾಲು ಅಂತಾರಾಷ್ಟ್ರೀಯ ವಿಮಾನಗಳು ದೆಹಲಿಗೆ ಆಗಮಿಸುತ್ತವೆ. ಇದು ದೆಹಲಿ ನಗರದ ಮೇಲೆ ಪರಿಣಾಮ ಬೀರಲಿದೆ. ಪ್ರಧಾನಿ ಮೋದಿ ಅವರೇ, ಅಂತಾರಾಷ್ಟ್ರೀಯ ವಿಮಾನಗಳಿಗೆ ನಿರ್ಬಂಧ ವಿಧಿಸಿ ಎಂದು ಕೋರಿದ್ದಾರೆ.
Advertisement
I have requested Hon’ble PM to immediately stop flights from those countries which are affected by new variant. Any delay could be very harmful. pic.twitter.com/UyokSGcFhU
— Arvind Kejriwal (@ArvindKejriwal) November 28, 2021
Advertisement
ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರು ಎಎನ್‌ಐ ಸುದ್ದಿ ಸಂಸ್ಥೆಯ ವರದಿಯೊಂದನ್ನು (ದಕ್ಷಿಣ ಆಫ್ರಿಕಾದಿಂದ ಮರಳಿದ 39 ವಯಸ್ಸಿನ ಚತ್ತೀಸಗಢ ವ್ಯಕ್ತಿಯೊಬ್ಬರಿಗೆ ಕೋವಿಡ್ ಸೋಂಕು ಕಾಣಿಸಿಕೊಂಡಿದೆ) ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಓಮಿಕ್ರಾನ್ ರೂಪಾಂತರಿಯಿಂದ ಜಾಗತಿಕ ಅಪಾಯ ಹೆಚ್ಚು-WHO
ಓಮಿಕ್ರಾನ್ ಪೀಡಿತ 12 ದೇಶಗಳಿಂದ ವಿಮಾನಗಳನ್ನು ರದ್ದುಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲು ಮಹಾರಾಷ್ಟ್ರ ಸರ್ಕಾರ ಕೂಡ ನಿರ್ಧರಿಸಿದೆ.