ಬೆಂಗಳೂರು: ಸಿಎಂ ಹೆಚ್.ಡಿ.ಕುಮಾರಸ್ವಾಮಿ ಓರ್ವ ನಟರಾಗಿದ್ದು, ತಮ್ಮ ಅಮೋಘ ನಟನೆಯಿಂದ ರಾಜ್ಯದ ಜನರನ್ನು ಮೂರ್ಖರನ್ನಾಗಿಸುತ್ತಿದ್ದಾರೆ ಎಂದು ಬಿಜೆಪಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದೆ.
ಸಿಎಂ ಶನಿವಾರ ಪಕ್ಷದ ವೇದಿಕೆಯಲ್ಲಿ ನಾನು ಎಲ್ಲ ನೋವುಗಳನ್ನು ನುಂಗಿಕೊಂಡು ವಿಷಕಂಠನಾಗಿದ್ದೇನೆ ಎಂದು ಕಣ್ಣೀರು ಹಾಕಿದ್ದರು. ಪಬ್ಲಿಕ್ ಟಿವಿಯಲ್ಲಿ ಬಿತ್ತರವಾದ ಈ ಸುದ್ದಿಯ ವಿಡಿಯೋವಮನ್ನು ಬಿಜೆಪಿ ತನ್ನ ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿಕೊಂಡು ನೇರವಾಗಿ ಸಿಎಂರನ್ನು ಟೀಕಿಸಿದೆ.
Advertisement
ನಮ್ಮ ದೇಶವು ಅದ್ಭುತ ಕಲಾವಿದರನ್ನು ಹೊಂದಿದೆ. ಕಲಾವಿದರು ನಟನಾ ಚಾತುರ್ಯಾದಿಂದಲೆ ಪ್ರೇಕ್ಷಕರನ್ನು ಮೂಕವಿಸ್ಮಿತರಾಗುವ ರೀತಿ ನಟಿಸಿ ಅವರ ಮನಸ್ಸನ್ನು ಗೆದ್ದಿದ್ದಾರೆ. ಇತ್ತ ಸಿಎಂ ಸಹ ತಮ್ಮ ನಟನ ಕೌಶಲ್ಯದಿಂದ ಜನರು ಮೂರ್ಖರನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದಾರೆ. ಹಾಗಾಗಿ ಸಿಎಂ ಅವರ ಈ ಅದ್ಭುತ ನಟನೆಗೆ ‘ಉತ್ತಮ ನಟ` ಪ್ರಶಸ್ತಿ ನೀಡಬೇಕೆಂದು ವ್ಯಂಗ್ಯವಾಗಿ ಟೀಕೆ ಮಾಡಿದೆ.
Advertisement
& the best acting award goes to..
Our country has produced talented actors. Actors who have mesmerised the audience with their brilliant performance, here we have another legendary actor Mr Kumaraswamy, an actor who has constantly fooled common man with his amazing acting skills pic.twitter.com/SNfi9LsAS6
— BJP Karnataka (@BJP4Karnataka) July 15, 2018
Advertisement
ಈಗಾಗಲೇ ಸಿಎಂ ಕಣ್ಣೀರು ವಿಚಾರ ಸಮ್ಮಿಶ್ರ ಸರ್ಕಾರದಲ್ಲಿ ಸಂಚಲನ ಮೂಡಿಸಿದೆ. ಕಾಂಗ್ರೆಸ್ ಸಿಎಂ ಒತ್ತಡ ಹಾಕುತ್ತಿದ್ದೀಯಾ ಎಂಬ ಪ್ರಶ್ನೆಯೊಂದು ಜೆಡಿಎಸ್ ಅಂಗಳದಲ್ಲಿ ಹರಿದಾಡುತ್ತಿದೆ. ಆದ್ರೆ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್, ಸಿಎಂ ರಾಜ್ಯದ ಮುಖ್ಯಮಂತ್ರಿಯಾಗಿ ಸಂತೋಷದಿಂದ ಇದ್ದಾರೆ. ಪಕ್ಷದ ಕಾರ್ಯಕರ್ತರೊಂದಿಗೆ ಮಾತನಾಡುವಾಗ ಭಾವುಕರಾಗಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.
Advertisement
ಇತ್ತ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಿಎಂ ಜೆಡಿಎಸ್ ಪಕ್ಷದ ವೇದಿಕೆಯಲ್ಲಿ ಕಣ್ಣೀರು ಹಾಕಿದ್ದಾರೆ. ವಿಷಕಂಠ ಹೇಳಿಕೆಗೂ ಕಾಂಗ್ರೆಸ್‍ಗೂ ಯಾವುದೇ ಸಂಬಂಧವಿಲ್ಲ. ಸಿಎಂ ಕಣ್ಣೀರು ಯಾಕೆ ಹಾಕಿದ್ದಾರೆ ಎಂಬುದನ್ನು ಅವರನ್ನೇ ಕೇಳಬೇಕು ಎಂದು ಪ್ರತಿಕ್ರಿಯಿಸಿದ್ದಾರೆ.