ಜಕಾರ್ತ: ಬಿಸಿಸಿಐ (BCCI) ಕಾರ್ಯದರ್ಶಿ ಜಯ್ ಶಾ (Jay Shah) ಅವರನ್ನು ಸತತ ಮೂರನೇ ಬಾರಿಗೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (Asian Cricket Council) ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಇಂದು ನಡೆದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಎಸಿಸಿಯ ಎಲ್ಲಾ ಸದಸ್ಯರು, ಶಾ ಅವರ ನಾಮನಿರ್ದೇಶನವನ್ನು ಸರ್ವಾನುಮತದಿಂದ ಒಪ್ಪಿಕೊಂಡಿದ್ದಾರೆ. ಈ ಮೂಲಕ ಅವರು ಸತತ ಮೂರನೇ ಬಾರಿಗೆ ಈ ಅಧಿಕಾರದಲ್ಲಿ ಮುಂದುವರೆಯಲಿದ್ದಾರೆ.
ಜಯ್ ಶಾ ಅವರ ಅಧಿಕಾರ ವಿಸ್ತರಣೆಯನ್ನು ಶ್ರೀಲಂಕಾ ಕ್ರಿಕೆಟ್ ಅಧ್ಯಕ್ಷ ಶಮ್ಮಿ ಸಿಲ್ವಾ ಅವರು ಪ್ರಸ್ತಾಪಿಸಿದರು. ಇದಕ್ಕೆ ಉಳಿದ ಸದಸ್ಯರು ಬೆಂಬಲ ಸೂಚಿಸಿದ್ದಾರೆ. ಇದರಿಂದ ಅವರು ಅಧಿಕಾರದಲ್ಲಿ ಮತ್ತೊಮ್ಮೆ ಮುಂದುವರೆಯಲಿದ್ದಾರೆ. ಇದನ್ನೂ ಓದಿ: ಮಯಾಂಕ್ ಅಗರ್ವಾಲ್ ಆರೋಗ್ಯ ಸ್ಥಿರ- ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ರವಾನೆ
Advertisement
Advertisement
ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ನಜ್ಮುಲ್ ಹಸನ್ ಅವರ ಬಳಿಕ ಜಯ್ ಶಾ ಅವರು ಜ.2021ರಲ್ಲಿ ಈ ಅಧಿಕಾರ ವಹಿಸಿಕೊಂಡರು. ಇವರ ನಾಯಕತ್ವದಲ್ಲಿ ಎಸಿಸಿ 2022ರಲ್ಲಿ ಟಿ20 ಸ್ವರೂಪದಲ್ಲಿ ಮತ್ತು 2023ರಲ್ಲಿ ಏಕದಿನ ಸ್ವರೂಪದಲ್ಲಿ ಏಷ್ಯಾಕಪ್ ಟೂರ್ನಿಯನ್ನು ಯಶಸ್ವಿಯಾಗಿ ನಡೆಸಿತ್ತು.
Advertisement
Advertisement
ಈ ಬಗ್ಗೆ ಮಾಧ್ಯಮಗಳಿಗೆ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಜಯ್ ಶಾ ಅವರು, ಎಸಿಸಿ ಮಂಡಳಿ ನನ್ನ ಮೇಲಿಟ್ಟ ನಂಬಿಕೆಗೆ ಆಭಾರಿಯಾಗಿದ್ದೇನೆ. ಕ್ರೀಡೆಯ ಮೇಲೆ ವಿಶೇಷ ಗಮನ ಹರಿಸುವ ಮೂಲಕ ಕ್ರೀಡೆಯ ಸರ್ವಾಂಗೀಣ ಅಭಿವೃದ್ಧಿಗೆ ನಾವೆಲ್ಲ ಬದ್ಧರಾಗಿರಬೇಕು. ಏಷ್ಯಾದ್ಯಂತ ಕ್ರಿಕೆಟ್‍ನ್ನು ಪೋಷಿಸಲು ಎಸಿಸಿ ಬದ್ಧವಾಗಿದೆ ಎಂದು ಅವರು ತಿಳಿಸಿದ್ದಾರೆ.
ಶ್ರೀಲಂಕಾ ಕ್ರಿಕೆಟ್ ಮಂಡಳಿ ಅಧ್ಯಕ್ಷ ಸಿಲ್ವಾ ಅವರು, ಈ ಬಗ್ಗೆ ಪ್ರತಿಕ್ರಿಯಿಸಿ, ಮಾರ್ಗದರ್ಶನದಲ್ಲಿ ಬಾಂಗ್ಲಾದೇಶ, ಭಾರತ, ಪಾಕಿಸ್ತಾನ ಮತ್ತು ಶ್ರೀಲಂಕಾದಂತಹ ದೇಶಗಳಲ್ಲಿ ಹೊಸ ಪ್ರತಿಭೆಗಳನ್ನು ಗುರುತಿಸುವಲ್ಲಿ ಎಸಿಸಿ ಪ್ರಮುಖ ಪಾತ್ರ ವಹಿಸಿದೆ ಎಂದಿದ್ದಾರೆ. ಇದನ್ನೂ ಓದಿ: ICUನಲ್ಲಿ ಮಯಾಂಕ್ ಅಗರ್ವಾಲ್ – ಆರೋಗ್ಯದ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ILS ಆಸ್ಪತ್ರೆ