ಚಿಕ್ಕಮಗಳೂರು: ಮಿಸ್ಟರ್ ಈಶ್ವರಪ್ಪ ಸಂತೋಷ್ ಪಾಟೀಲ್ ಯಾರೆಂದು ಗೊತ್ತಿಲ್ಲ ಅಂದ ಮೇಲೆ ಮಾನನಷ್ಟ ಮೊಕದ್ದಮೆ ಯಾರ ಮೇಲೆ ಹಾಕಿದ್ದಪ್ಪಾ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಜಿ ಸಚಿವ ಈಶ್ವರಪ್ಪನವರನ್ನ ಪ್ರಶ್ನಿಸಿದ್ದಾರೆ.
Advertisement
ನಗರದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಈಶ್ವರಪ್ಪ ಉಡುಪಿಯಲ್ಲಿ ಆತ್ಮಹತ್ಯೆಗೆ ಶರಣಾದ ಬೆಳಗಾವಿ ಮೂಲದ ಕಂಟ್ರಾಕ್ಟರ್ ಸಂತೋಷ್ ಪಾಟೀಲ್ ಯಾರೆಂದು ನನಗೆ ಗೊತ್ತೇ ಇಲ್ಲ ಎಂದರು. ಹಾಗಾದರೆ ಮಾನನಷ್ಟ ಮೊಕದ್ದಮೆ ಪ್ರಕರಣ ದಾಖಲಿಸಿದ್ದಲ್ಲ ಯಾರ ಮೇಲೆ ಹಾಕಿದಪ್ಪಾ? ಹೇಗೆ ಹಾಕಿದಪ್ಪಾ ಎಂದು ಈಶ್ವರಪ್ಪ ವಿರುದ್ಧ ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಮಕ್ಕಾ ಮಸೀದಿ ಮೇಲೆ ಕೇಸರಿ ಧ್ವಜ ಹಾರಿಸಿ ಪೋಸ್ಟ್ – ಹುಬ್ಬಳ್ಳಿಯಲ್ಲಿ ಮುಸ್ಲಿಂ ಪುಂಡರಿಂದ ದಾಂಧಲೆ
Advertisement
Advertisement
ಸಂತೋಷ್ ಪಾಟೀಲ್ ಯಾರೆಂದು ನನಗೆ ಗೊತ್ತೆ ಇಲ್ಲ ಎಂದಿದ್ದರು. ಆಗ ಮಾಧ್ಯಮ ಮಿತ್ರರು ಅವರ ಫೋಟೋವನ್ನು ಹಾಕಿ-ಹಾಕಿ ತೋರಿಸಿದ್ದರು. ಸಂತೋಷ್ ಪಾಟೀಲ್ ಯಾರೆಂದು ಗೊತ್ತೆ ಇಲ್ಲ ಎಂದ ಮೇಲೆ ಅವರ ಮೇಲೆ ಡಿಫಾರ್ಮೇಷನ್ ಕೇಸ್ ಹೇಗೆ ಹಾಕಿದ್ದಪ್ಪಾ ಎಂದು ಪ್ರಶ್ನಿಸಿದ್ದಾರೆ.
Advertisement
ಇದೇ ವೇಳೆ ಭ್ರಷ್ಟರನ್ನು ಭ್ರಷ್ಟರು ರಕ್ಷಣೆ ಮಾಡುತ್ತಿದ್ದಾರೆ. ಈ ಸಿ.ಟಿ. ರವಿ, ಆ ಈಶ್ವರಪ್ಪನನ್ನು ರಕ್ಷಣೆ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಚಿಕ್ಕಮಗಳೂರು ಶಾಸಕ ಸಿ.ಟಿ. ರವಿ ವಿರುದ್ಧ ಸಿದ್ದರಾಮಯ್ಯ ಕಿಡಿಕಾರಿದರು. ಜೊತೆಗೆ ನಾನು ಜಿಲ್ಲೆಯಲ್ಲಿ ಕೇಳಿದ್ದೇನೆ. ಅವನ್ಯಾರೋ ಸುದರ್ಶನ್ ಅಂತೆ. ಅಧಿಕಾರಿಗಳು ಅವನ ಮನೆ ಬಾಗಿಲಿಗೆ ಹೋಗಬೇಕಂತೆ ಎಂದು ಶಾಸಕ ಸಿ.ಟಿ. ರವಿ ಸಂಬಂಧಿ ಹಾಗೂ ಕಂಟ್ರಾಕ್ಟರ್ ಸುದರ್ಶನ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ವಿಜಯನಗರ ಕಾರ್ಯಕಾರಿಣಿಯಲ್ಲಿ ಹಿಂದುತ್ವ ಅಜೆಂಡಾ ಜಪ
ಸಭೆಯಲ್ಲಿ ಇಂದು ಕಂಟ್ರಾಕ್ಟರ್ ಸಾವನ್ನಪ್ಪಿರುವುದಕ್ಕೆ ಸರ್ಕಾರವೇ ಕಾರಣ. ಇಂತಹ ಭ್ರಷ್ಟ ಹಾಗೂ ಪರ್ಸೆಂಟೇಜ್ ಸರ್ಕಾರ ಬೇಕಾ ಎಂದು ಪ್ರಶ್ನಿಸಿ, ಮುಂದಿನ ಚುನಾವಣೆಯಲ್ಲಿ ಇಂತಹ ಭ್ರಷ್ಟ ಹಾಗೂ ಪರ್ಸೆಂಟೇಜ್ ಸರ್ಕಾರವನ್ನು ಕಿತ್ತೊಗೆಯುವಂತೆ ಮತದಾರರಲ್ಲಿ ಮನವಿ ಮಾಡಿಕೊಂಡಿದ್ದಾರೆ.