ನವದೆಹಲಿ: ರಾಮನವಮಿ ಹಿನ್ನೆಲೆ ಸಂಸತ್ ಅಧಿವೇಶನವನ್ನು ಮುಂದೂಡಲು ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷದ ಸಂಸದರು ಮನವಿ ಮಾಡಿಕೊಂಡಿದ್ದರು. ಈ ಹಿನ್ನೆಲೆ ಸ್ಪೀಕರ್ ಜೊತೆಗೆ ಚರ್ಚಿಸಿ ಅನಿರ್ದಿಷ್ಟಾವಧಿಗೆ ಕಲಾಪಗಳನ್ನು ಮುಂದೂಡಲಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಕಲಾಪ ಮುಂದೂಡಿಕೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸರ್ಕಾರಕ್ಕೆ ಅಧಿವೇಶನ ನಡೆಸಲು ಯಾವುದೇ ಅಡೆತಡೆಗಳಿಲ್ಲ. ಆದರೆ ಸಂಸದರೇ ಕಲಾಪ ಮುಂದೂಡಲು ಮನವಿ ಮಾಡಿದರು. ನಾಳೆ ಅಗತ್ಯವಾಗಿರುವ ಕಲಾಪವನ್ನು ಇಂದೇ ಅಂತ್ಯಗೊಳಿಸಲು ಮನವಿ ಮಾಡಿದ್ದರು ಎಂದು ಹೇಳಿದರು. ಇದನ್ನೂ ಓದಿ: ನಡುಬೀದಿಯಲ್ಲೇ 25 ವರ್ಷದ ಮಗನಿಗೆ ಬೆಂಕಿ ಹಚ್ಚಿದ ತಂದೆ: ಸಾವು-ಬದುಕಿನ ನಡ್ವೆ ಹೋರಾಡ್ತಿದ್ದಾಗ ಅರ್ಪಿತ್ ಹೇಳಿದ್ದೇನು..?
Advertisement
Advertisement
ಈ ಬಾರಿಯ ಅಧಿವೇಶನ ಸಮರ್ಪಕವಾಗಿ ನಡೆದಿದೆ. ಲೋಕಸಭೆ 128% ರಷ್ಟು, ರಾಜ್ಯಸಭೆ 98% ರಷ್ಟು ನಡೆದಿದೆ. ಕಲಾಪಗಳಲ್ಲಿ ಎಲ್ಲಾ ಸಚಿವಾಲಯಗಳ ಬಗ್ಗೆಯೂ ಚರ್ಚೆ ನಡೆಸಲಾಗಿತ್ತು. ಒಟ್ಟು 13 ಬಿಲ್ ಮಂಡನೆ ಮಂಡನೆ ಮಾಡಲಾಗಿದೆ. ಲೋಕಸಭೆಯಲ್ಲಿ 12 ಬಿಲ್ ಮಂಡಿಸಲಾಗಿದೆ. ರಾಜ್ಯಸಭೆಯಲ್ಲಿ ಒಂದು ಬಿಲ್ ಮಂಡಿಸಲಾಗಿದೆ. ಇದಲ್ಲದೆ ಫೈನಾನ್ಸ್ ಬಿಲ್ ಬಗ್ಗೆ ಚರ್ಚೆ ಮಾಡಲಾಗಿದೆ ಎಂದರು.
Advertisement
ಇದು ಸಾಲದು ಎನ್ನುವಂತೆ ಉಕ್ರೇನ್ ಪರಿಸ್ಥಿತಿ ಬಗ್ಗೆಯೂ ಅಧಿವೇಶನದಲ್ಲಿ ಚರ್ಚೆ ನಡೆಲಾಗಿದೆ. ಪ್ರತಿಪಕ್ಷಗಳು ಎತ್ತಿದ ಪ್ರಶ್ನೆಗಳಿಗೆ ಉತ್ತರ ನೀಡಲಾಗಿದೆ. ಬೆಲೆ ಏರಿಕೆ ಬಗ್ಗೆಯೂ ಸರ್ಕಾರ ಉತ್ತರ ನೀಡಿದೆ. ಆದರೆ ವಿಪಕ್ಷ ಸರ್ಕಾರ ಓಡಿ ಹೋಗುತ್ತಿದೆ ಎಂದು ಆರೋಪಿಸುವುದು ಸರಿಯಲ್ಲ ಎಂದು ಜೋಶಿ ಹೇಳಿದರು. ಇದನ್ನೂ ಓದಿ: ದಂಪತಿ ಒಟ್ಟಿಗೆ ಮಲಗುವಂತಿಲ್ಲ, ಹಗ್-ಕಿಸ್ ಮಾಡುವಂತಿಲ್ಲ; ಕೊರೊನಾ ಟಫ್ ರೂಲ್ಸ್