ಕಾರವಾರ: ಸರಳತೆಗೆ ಹೆಸರಾಗಿರುವ ಉತ್ತರ ಕನ್ನಡ ಜಿಲ್ಲೆಯ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ತಮ್ಮ ತೋಟದಲ್ಲಿ ಅಡಿಕೆ ಕೊನೆಯನ್ನು ಹಗ್ಗದಿಂದ ಇಳಿಸುವ ಮೂಲಕ ಮನೆಯ ತೋಟದ ಕೊನೆ ಕೊಯ್ಲಿನಲ್ಲಿ ಭಾಗಿಯಾದರು.
ಇಂದು ಶಿರಸಿಯ ಕಾಗೇರಿಯ ತಮ್ಮ ನಿವಾಸದಲ್ಲಿ ತೋಟದ ಕೊನೆ ಕೊಯ್ಲಿನಲ್ಲಿ ಭಾಗಿಯಾದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮರವೇರಿದ ಕೊನೆ ಗೌಡನ ಹಗ್ಗದ ನೇಣು ಹಿಡಿದು ಅಡಿಕೆ ಕೊನೆಯನ್ನು ಇಳಿಸಿಕೊಂಡು ಅಡಿಕೆ ಸುಗ್ಗಿ ನೆರವೇರಿಸಿದ್ದು ವಿಡಿಯೋ ವೈರಲ್ ಆಗಿದೆ.
Advertisement
ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ಕಾಗೇರಿ ಪಾರ್ಲಿಮೆಂಟ್ ಪ್ರವೇಶಿಸಿದ್ದಾರೆ. ಆಗ ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿ ಗಮನ ಸೆಳೆದಿದ್ದರು.