ಚಾಮರಾಜನಗರ: ಬಿಜೆಪಿ (BJP) ಸಂಸದ ವಿ. ಶ್ರೀನಿವಾಸ್ ಪ್ರಸಾದ್ (V Srinivas Prasad) ರಾಜಕೀಯಕ್ಕೆ ಗುಡ್ ಬೈ ಹೇಳಿದರು.
ಗುಂಡ್ಲುಪೇಟೆಯಲ್ಲಿ ನಡೆದ ಚುನಾವಣಾ (Election) ಪ್ರಚಾರದಲ್ಲಿ ಮಾತನಾಡಿದ ಅವರು, ಇದು ನನ್ನ ರಾಜಕೀಯ ಜೀವನದ ಕೊನೆ ಚುನಾವಣೆಯಾಗಿದೆ. ಮುಂದಿನ ವರ್ಷ ನಡೆಯುವ ಲೋಕಸಭಾ ಚುನಾವಣೆಗೆ ನಾನು ಸ್ಪರ್ಧೆ ಮಾಡಲ್ಲ. ನನಗೆ ರಾಜಕೀಯ ಸಾಕಾಗಿದೆ ಎಂದರು. ಇದನ್ನೂ ಓದಿ: ಬಿಜೆಪಿ 2 ನೇ ಪಟ್ಟಿ ರಿಲೀಸ್- 23 ಅಭ್ಯರ್ಥಿಗಳ ಹೆಸರು ಬಿಡುಗಡೆ
- Advertisement
ನನಗೆ ನಿಂತುಕೊಂಡು ಭಾಷಣ ಮಾಡಲು ಆಗುತ್ತಿಲ್ಲ. ಎಳ್ಳಷ್ಟು ಅಪಾದನೆಯಿಲ್ಲದೇ ರಾಜಕೀಯ ಜೀವನ ಸಾಗಿಸಿದ್ದೇನೆ. ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಅಷ್ಟೇ ಅಲ್ಲದೇ ಏಳು ಜನ ಪ್ರಧಾನಮಂತ್ರಿ ನೋಡಿದ್ದೇನೆ. ನನಗೆ ಇನ್ನು ರಾಜಕೀಯ ಸಾಕು ಎಂದು ಹೇಳಿದರು. ಇದನ್ನೂ ಓದಿ: ಹಾವೇರಿಯಲ್ಲಿ ಎಷ್ಟು ಸೀಟು ಗೆಲ್ಲಿಸ್ತಾನೋ ನೋಡೋಣ: ಸೇಡಿನ ರಾಜಕಾರಣಿ – ಸಿಎಂ ವಿರುದ್ಧ ನೆಹರೂ ಓಲೇಕಾರ್ ಕಿಡಿ